ಚಿಕ್ಕಪ್ಪಯ್ಯ ರಂಗಭೂಮಿಯ ದೊಡ್ಡಪ್ಪ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಬೆಂಗಳೂರು ಕೃಷಿ ವಿ.ವಿ ಕುಲಸಚಿವ ಹೇಳಿಕೆ

0
372

ತುಮಕೂರು ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಇಂದು “ರಂಗಭೂಮಿ ಸರದಾರ ಚಿಕ್ಕಪ್ಪಯ್ಯ” ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯ ಕುಲಸಚಿವ ಜೆ ಎನ್ ಧನಪಾಲ್ ಮಾತನಾಡಿ
ಈ ಸಮಾರಂಭಕ್ಕೆ ಬಂದಿರುವುದರಿಂದ ನನಗೆ ತುಂಬಾ ಖುಷಿಯಾಗಿದೆ, ನಾನು ಚಿಕಪ್ಪಯ್ಯ 4 ವರ್ಷ ಜೊತೆಯಲ್ಲೇ ವಿದ್ಯಾಭ್ಯಾಸ ಮಾಡಿದೀವಿ ಚಿಕ್ಕಪ್ಪನವರಿಗೆ ಸಾಹಿತ್ಯ ಅಕಾಡಮಿ ಪ್ರಶಸ್ತಿ ಬರಬೇಕಿತ್ತು ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ನಂತರ ಮಾತನಾಡಿದ ಕೃಷಿ ಬೆಂಗಳೂರು ವಿ.ವಿಯ ಸಂಶೋಧನಾ ನಿರ್ದೇಶಕ ಡಾ.ವೈ ಜಿ ಷಡಕ್ಷರಿ ರಂಗಭೂಮಿ ಕ್ಷೇತ್ರದಲ್ಲಿ ಚಿಕ್ಕಪ್ಪಯ್ಯ ಅವರ ಪಾತ್ರ ಅಪಾರವಾದದ್ದು. ತುಮಕೂರು ಸುತ್ತಮುತ್ತ ಹಳ್ಳಿಗಳಲ್ಲೆಲ್ಲ ಇವರ ಹೆಸರನ್ನು ಗುರುತಿಸಿದ್ದಾರೆ. ಇವರ ಬೆಳವಣಿಗೆ ನೋಡಿ ನನಗೆ ತುಂಬಾ ಖುಷಿಯಾಗಿದೆ ಹೀಗೆ ಈ ಕ್ಷೇತ್ರದಲ್ಲಿ ಮುಂದೆ ಸಾಗಬೇಕೆಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದರು.

ಖ್ಯಾತ ಸಾಹಿತಿ ಎನ್ ನಾಗಪ್ಪ ಮಾತನಾಡಿ
ಬಣ್ಣ ಹಾಕದೆ ನಾಟಕ ಆಡುವ ಮಂದಿ ಬಹಳಷ್ಟು ಮಂದಿ ಸಿಗುತ್ತಾರೆ ಆದರೇ ಬಣ್ಣ ಹಾಕಿಕೊಂಡು ಬಹಳ ರಮಣೀಯವಾಗಿ ಚಿಕ್ಕಪ್ಪಯ್ಯ ನಾಟಕವನ್ನು ಪ್ರದರ್ಶಿಸುತ್ತಾರೆ.
ಈ “ರಂಗಭೂಮಿ ಸರದಾರ ಚಿಕ್ಕಪ್ಪಯ್ಯ” ಪುಸ್ತಕವನ್ನು ಬಹಳ ಆಸಕ್ತಿಯಿಂದ, ಶ್ರದ್ಧೆಯಿಂದ ಡಾ.ಎಸ್ ಶಿವಣ್ಣ ಬೆಳವಾಡಿ, ಎಲ್ ವಿ ಲಕ್ಷ್ಮಿಕಾಂತ್, ಅಲ್ಲಾಗಿರಿ ಈ ಮೂರು ಜನ ಸೇರಿ ಈ ಪುಸ್ತಕವನ್ನು ಉತ್ತಮವಾಗಿ ಸಂಪಾದಿಸಿದ್ದಾರೆ ಎಂದೇಳಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಚಿಕ್ಕಪ್ಪಯ್ಯ ನನ್ನ ತಂದೆ ತಾಯಿ ಆಶೀರ್ವಾದ ನನ್ನನ್ನು ಈ ಸ್ಥಾನಕ್ಕೆ ಕರೆದು ತಂದಿದೆ.ಹಾಗೆ ತನಗೆ ವಿದ್ಯೆಯನ್ನು ಕರುಣಿಸಿದ ಗುರುಗಳ ಪಾತ್ರವು ಅಪಾರವಾದದ್ದು ಎಂದು ತನ್ನ ಮನದಾಳದ ಮಾತನ್ನು ಹಂಚಿಕೊಳ್ಳುತ್ತಾ ಬದುಕಿನ ಮಜಲುಗಳನ್ನು ಹೇಳುತ್ತಾ ಸರ್ವರಿಗೂ ಧನ್ಯವಾದ ಹೇಳಿದರು.

ಈ ಸಂದರ್ಭದಲ್ಲಿ ಗಜಲ್ ಕವಿ ಅಲ್ಲಾಗಿರಿರಾಜ್, ಅಂಕಣಕಾರ ಲಕ್ಷ್ಮಿಕಾಂತ್, ಸಾಹಿತಿ ಹಾಗೂ ತುಮಕೂರು ವಿ.ವಿ ಸಹಾಯಕ ಪ್ರಾಧ್ಯಾಪಕ ಡಾ.ಶಿವಣ್ಣ ಬೆಳವಾಡಿ ಮತ್ತಿತರು ಉಪಸ್ಥಿತರಿದ್ದರು.

ವರದಿ: ಪೃಥ್ವಿ ಶಶಾಂಕ್
ಬೊಮ್ಮಶೆಟ್ಟಹಳ್ಳಿ

LEAVE A REPLY

Please enter your comment!
Please enter your name here