ಡಿಪ್ಲೋಮಾ ವಿದ್ಯಾರ್ಥಿಗಳಿಗೆ ಒಂದು ದಿನದ ಸ್ವ ಉದ್ಯೋಗ ಹಾಗೂ ಉದ್ಯಮಶೀಲತಾ ತಿಳುವಳಿಕೆ ತರಬೇತಿ ಕಾರ್ಯಕ್ರಮ

0
101

ಕೂಡ್ಲಿಗಿ ಪಟ್ಟಣದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಡಿಪ್ಲೋಮಾ ವಿದ್ಯಾರ್ಥಿಗಳಿಗೆ ಒಂದು ದಿನದ ಸ್ವ ಉದ್ಯೋಗ ಹಾಗೂ ಉದ್ಯಮಶೀಲತಾ ತಿಳುವಳಿಕೆ ತರಬೇತಿ ಕಾರ್ಯಕ್ರಮ ನಡೆಸಲಾಗಿತ್ತು. ಈ ಕಾರ್ಯಕ್ರಮವನ್ನು ಗ್ರಾಮೀಣ ಕೈಗಾರಿಕೆ, ಜಿಲ್ಲಾ ಪಂಚಾಯತ್, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಬಳ್ಳಾರಿ, ಕರ್ನಾಟಕ ಉದ್ಯಮಶೀಲತಾಭಿವೃದ್ದಿ ಕೇಂದ್ರ ಧಾರವಾಡ ಹಾಗೂ ಎನ್ ಎಸ್ ಎಸ್ ಘಟಕ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜ್ ಕೂಡ್ಲಿಗಿ ಇವರ ಸಹಯೋಗದಲ್ಲಿ ಆಯೋಜಿಸಲಾಗಿತ್ತು

ಈ ಕಾರ್ಯಕ್ರಮದಲ್ಲಿ ಸಂಯೋಜನಾಧಿಕಾರಿಯಾಗಿ ಆಗಮಿಸಿದ ಬಳ್ಳಾರಿ ಗ್ರಾಮೀಣ ಕೈಗಾರಿಕೆ ವಿಭಾಗದ ಉಪ ನಿರ್ದೇಶಕ ಭರತ್ ಮಾತನಾಡಿ ವಿದ್ಯಾರ್ಥಿಗಳು ಸಿಗುವ ಇಂತಹ ಅವಕಾಶ ಬಳಸಿಕೊಂಡು ಮೌಲ್ಯವರ್ಧನೆ ಕುರಿತ ಬಗ್ಗೆ ಮಾಹಿತಿ ನೀಡಿದರು, ಮಖ್ಯ ಅತಿಥಿಯಾಗಿ ಆಗಮಿಸಿದ ಕೂಡ್ಲಿಗಿ ಸಿಡಿಪಿಒ ನಾಗನಗೌಡ ಮಾತನಾಡಿ ಹೆಣ್ಣುಮಕ್ಕಳಿಗೆ ಸಿಗುವ ಸರ್ಕಾರದಿಂದ ಲಭ್ಯವಿರುವ ಸೌಲಭ್ಯಗಳ ಕುರಿತಾದ ಮಾಹಿತಿ ನೀಡಿದರು ತಾಂತ್ರಿಕ ಕೃಷಿ ಅಧಿಕಾರಿ ಧನುಂಜಯ ಮಾತನಾಡಿ ಕೃಷಿಯಲ್ಲಿ ತಾಂತ್ರಿಕತೆ ಅಳವಡಿಸುವ ಮತ್ತು ಅದನ್ನು ಬಳಸುವ ವಿಧಾನ ಕುರಿತಾಗಿ ತಿಳಿಸಿದರು ಮತ್ತು ಉಪನ್ಯಾಸಕ ಅಕ್ಕಸಾಲಿ ನೀಲಕಂಠಾಚಾರಿ ಮಾತನಾಡಿ ವಿದ್ಯಾರ್ಥಿಗಳು ಬರೀ ಉದ್ಯೋಗ ಪಡೆಯುವ ನಿಟ್ಟಿನಲ್ಲಿ ಗುರಿ ಇಟ್ಟುಕೊಂಡು ವ್ಯಾಸಂಗ ಮಾಡದೇ ಉದ್ಯೋಗದಾತರಾಗುವಲ್ಲಿ ಯೋಜನೆ ರೂಪಿಸಿಕೊಳ್ಳುವಂತೆ ಪ್ರೇರೇಪಿಸಿದರು.

ಕೂಡ್ಲಿಗಿ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಚಾರ್ಯ ಎಸ್. ಮಲ್ಲಪ್ಪ ತರಬೇತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ಕೈಗಾರಿಕಾ ವಿಸ್ತೀರ್ಣಾಧಿಕಾರಿ ವಿಜಯಕುಮಾರ್ ಭಾಗವಹಿಸಿದ್ದರು. ತರಬೇತುದಾರರಾಗಿ ಬಳ್ಳಾರಿ ಸಿಡಾಕ್ ನ ವಿನೋದ್ ಕುಮಾರ ಹಾಗೂ ಪ್ರಸನ್ನ ಸಂಪನ್ಮೂಲ ವ್ಯಕ್ತಿಗಳಾಗಿ ಕಾರ್ಯನಿರ್ವಹಿಸಿದರು. ಉಪನ್ಯಾಸಕರುಗಳಾದ ಎಂ.ಸಿ.ಜಗದೀಶ, ಎ.ಚನ್ನಪ್ಪ, ಮಹೇಶ್ವರಪ್ಪ, ಮಂಜು ಹಳ್ಳೇರ, ಲೋಕೇಶ, ಎಸ್. ಶರ್ಮಸ್ ವಲಿ, ಅಶೋಕ್, ಉಮಾ,ಮಾರುತಿಸ್ವಾಮಿ, ಉಂಡಿ ಸಿದ್ದೇಶ್ ಹಾಗೂ ಭವಿಷ್ಯ ರೂಪಿಸಿಕೊಳ್ಳುವ ಮುಖ್ಯ ಪಾತ್ರದ ವಿದ್ಯಾರ್ಥಿಗಳು ಈ ತರಬೇತಿ ಕಾರ್ಯಕ್ರಮದಲ್ಲಿ ಹಾಜರಿದ್ದರು.

LEAVE A REPLY

Please enter your comment!
Please enter your name here