ಸಮಾಜದಲ್ಲಿ ಗಂಡು ಹೆಣ್ಣು ಎಂಬ ಅಸಮಾನತೆಯನ್ನು ಹೋಗಲಾಡಿಸಿ ಎಂದು ಕರೆ ನೀಡಿದ ಸಿಡಿಪಿಒ ಪ್ರೇಮಮೂರ್ತಿ.

0
286

ಸಂಡೂರು:ಸೆ:21:-ಸಂಡೂರು ತಾಲೂಕಿನ ದೌಲತ್ ಪುರ ಗ್ರಾಮದಲ್ಲಿ ಪೋಷಣೆ ಮಾಸಾಚರಣೆ ಕಾರ್ಯಕ್ರಮಗಳ ಅಂಗವಾಗಿ ಅನ್ನಪ್ರಸನ ಕಾರ್ಯಕ್ರಮ, ಸೀಮಂತ ಕಾರ್ಯಕ್ರಮ, ಪೌಷ್ಟಿಕ ಶಿಬಿರ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು ಕಾರ್ಯಕ್ರಮಕ್ಕೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಿಡಿಪಿಓ ಅಧಿಕಾರಿಗಳಾದ ಮಾನ್ಯ ಕೆ.ಪ್ರೇಮಮೂರ್ತಿರವರು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು

ಸಮಾಜದಲ್ಲಿ ಗಂಡು-ಹೆಣ್ಣು ಎಂಬ ತಾರತಮ್ಯ ಹೋಗಲಾಡಿಸಿ ಮಹಿಳೆಯರಿಗೆ ಸಮಾನತೆಯ ಹಕ್ಕುಗಳನ್ನು ನೀಡಬೇಕು ನಮ್ಮ ಇಲಾಖೆಯಲ್ಲಿ ದೊರೆಯುವ ಎಲ್ಲ ಸೌಲಭ್ಯಗಳನ್ನು ಪಡೆದುಕೊಂಡು ಸಮಾಜದಲ್ಲಿ ಮುಖ್ಯವಾಹಿನಿಗೆ ಬರಬೇಕಾಗುತ್ತದೆ ‘ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ’ ಎಂಬ ನುಡಿಯಂತೆ ನಾವೆಲ್ಲರೂ ಹೆಣ್ಣುಮಕ್ಕಳನ್ನು ಪ್ರೋತ್ಸಾಹಿಸಬೇಕು ಅವರಿಗೆ ಉತ್ತಮವಾದ ಶಿಕ್ಷಣ ಗಂಡನ ಜೊತೆಗೆ ಸಮಾನತೆಯ ಹಕ್ಕು ಹಾಗೂ ಗರ್ಭಿಣಿ ಮಹಿಳೆಯರು ಗರ್ಭಿಣಿ ಆದಂತ ಸಂದರ್ಭದಲ್ಲಿ ಪೋಷಕಾಂಶಗಳಿರುವ ಆಹಾರವನ್ನು ಸೇವಿಸಬೇಕುಅಂದಾಗ ಮಾತ್ರ ಬಲಿಷ್ಠವಾದ ಮಗುವನ್ನು ದೇಶಕ್ಕೆ ನೀಡಬಹುದು ಎಂದು ಮಹಿಳೆಯರಿಗೆ ತಿಳಿಸಿದರು.

ಸದರಿ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಶ್ರೀಮತಿ ತಾರಾದೇವಿ,ಪೋಷಣ ಅಭಿಯಾನ ಸಂಯೋಜಕರಾದ ಶ್ರೀ ಗಂಗಾಧರ, ಮಾತನಾಡಿ ಪೋಷಣ ಅಭಿಯಾನದ ಯೋಜನೆ ಅಡಿಯಲ್ಲಿ ಪೋಷಣೆ ಮಾಸಾಚರಣೆ ಸಪ್ಟೆಂಬರ್ 2021ರ ಕಾರ್ಯಕ್ರಮಗಳ ಮಾಹಿತಿಯನ್ನು ತಿಳಿಸಿದರು.

ಗ್ರಾಮ ಪಂಚಾಯತಿ ಸದಸ್ಯರಾದ ಬಾಬುಸಾಬ್, ರೇಣುಕಮ್ಮ, ಹಾಗೂ ವಿಜಯಲಕ್ಷ್ಮಿ,ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕರಾದ ಎಂ.ಎಂ.ಭಜಂತ್ರಿ ಮಾತನಾಡಿ ಹೆಣ್ಣು ಮಗುವಿನ ಬೆಳವಣಿಗೆ ಬಗ್ಗೆ ಹೆಣ್ಣಿಗೆ ಸಮಾಜದಲ್ಲಿರುವ ಅಸಮಾನತೆಯ ವ್ಯತ್ಯಾಸಗಳನ್ನು ತಿಳಿಸುವುದರ ಮೂಲಕ ನಮ್ಮ ಇಲಾಖೆಯಲ್ಲಿ ದೊರೆಯುವ ಹೆಣ್ಣುಮಕ್ಕಳ ಎಲ್ಲಾ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು ಎಂದು ತಿಳಿಸಿದರು. ಹಾಗೂ ಅಂಗನವಾಡಿ ಕಾರ್ಯಕರ್ತೆಯರಾದ ಎಂ.ಶಶಿಕಲಾ,ಎಸ್ ಹುಲಿಯಮ್ಮ, ಉಷಾ ಸಿಂಧೇ,ತಾಯಮ್ಮ ,ಗಂಗಮ್ಮ ಮತ್ತು ಸಹಾಯಕಿಯರು, ಆಶಾ ಕಾರ್ಯಕರ್ತೆಯರು, ಗರ್ಭಿಣಿಯರು ಬಾಣಂತಿಯರು ಮತ್ತು ಮಕ್ಕಳು ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿದರು

LEAVE A REPLY

Please enter your comment!
Please enter your name here