ಶೆಲಿಯಪ್ಪನಹಳ್ಳಿಯ ಆರೋಗ್ಯ ಮತ್ತು ಕ್ಷೇಮ ಕೇಂದ್ರದಲ್ಲಿ ವಿಶ್ವ ಹೃದಯ ದಿನ ಹಾಗೂ ನಾಗರೀಕರ ದಿನಾಚರಣೆ

0
186

ಸಂಡೂರು: ಸೆ:29:- ವಿಶ್ವ ಹೃದಯ ದಿನಾಚರಣೆಯಂದು ಹೃದಯ ಶಸ್ತ್ರಚಿಕಿತ್ಸೆಯಿಂದ ಗುಣಮುಖರಾದವರಿಗೆ ಸನ್ಮಾನವನ್ನು ಚೋರನೂರು ಹೋಬಳಿ ವ್ಯಾಪ್ತಿಯ ಶೆಲಿಯಪ್ಪನಹಳ್ಳಿ ,ಆರೋಗ್ಯ ಮತ್ತು ಕ್ಷೇಮ ಕೇಂದ್ರದಲ್ಲಿ ವಿಶ್ವ ಹೃದಯ ದಿನ ಹಾಗೂ ನಾಗರೀಕರ ದಿನಾಚರಣೆಯನ್ನು ಆಚರಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಸಮುದಾಯ ಆರೋಗ್ಯ ಅಧಿಕಾರಿ ನಿರ್ಮಲ ಮಾತನಾಡಿ ಹೃದಯದ ಕಾರ್ಯವೈಖರಿ ಮತ್ತು ಅಧಿಕ ರಕ್ತದೊತ್ತಡ,ಹೃದಯ ಸಂಬಂಧಿ ರೋಗಗಳ ಲಕ್ಷಣಗಳು ಮತ್ತು ಹೃದಯ ಸಂಬಂಧಿ ರೋಗಗಳಿಂದ ಉಂಟಾಗುವ ದುಷ್ಪರಿಣಾಮಗಳು ಹಾಗೂ ಚಿಕಿತ್ಸೆ ಬಗ್ಗೆ ಎಳೆಯಾಗಿ ತಿಳಿಸಿ ಹೇಳಿದರು..ತದನಂತರ

ಅರೋಗ್ಯ ಸಂರಕ್ಷಕಿ ಶೃತಿ ಮಾತನಾಡಿ ಸಮತೋಲನವಾದ ಆಹಾರ ಸೇವಿಸಿ ಆರೋಗ್ಯ ಕಾಪಾಡಿಕೊಳ್ಳಿ ಮತ್ತು ಹೃದಯ ಸಂಬಂಧ ಪಟ್ಟ ಕಾಯಿಲೆ ಇದು ಸಾಂಕ್ರಾಮಿಕ ರೋಗವಲ್ಲ ,ಆದ್ದರಿಂದ ಭಯಪಡುವ ಅವಶ್ಯಕತೆ ಇಲ್ಲ ಎಂದು ತಿಳಿಸಿದರು.

ಶಾಲಾ ಶಿಕ್ಷಕರಾದ ಹುಲಿರಾಜ್ ಮಾತನಾಡಿ ಹೃದಯದ ಕಾರ್ಯ ಹಾಗೂ ಅಧಿಕ ರಕ್ತದೊತ್ತಡ ಇರೋರು ದ್ಯಾನ ಮತ್ತು ವ್ಯಾಯಾಮ ದಿನ ನಿತ್ಯ ಮಾಡೋದ್ರಿಂದ ಅಧಿಕ ರಕ್ತದೊತ್ತಡ ತಡೆಯಬಹುದು ಎಂದು ತಿಳಿಸಿದರು.

ಗ್ರಾ ಪಂ ಸದಸ್ಯರು ಲೋಕರಾಜ್ ಮಾತನಾಡಿ ಈ ಕಾರ್ಯಕ್ರಮದಿಂದ ನಮಗೆ ಸಾಕಷ್ಟು ಅರೋಗ್ಯದ ಮಾಹಿತಿ ತಿಳಿದುಕೊಂಡಿದ್ದು ನಮಗೆ ತುಂಬಾ ಸಂತೋಷವನ್ನು ನೀಡಿತು ಎಂದು ಅನಿಸಿಕೆ ವಕ್ಯಪಡಿಸಿದರು.
ಶಾಲಾ ಶಿಕ್ಷಕಿ ಜ್ಯೋತಿ ಕಾರ್ಯಕ್ರಮವನ್ನು ತುಂಬಾ ಅಚ್ಚು ಕಟ್ಟಾಗಿ ನಡೆಸಿಕೊಟ್ಟರು.
ಕಾರ್ಯಕ್ರಮದ ಕೊನೆಯಲ್ಲಿ ಹೃದಯ ಸಂಬಂಧಿ ಕಾಯಿಲೆಗಳಿಗೆ ತುತ್ತಾಗಿ ಶಸ್ತ್ರ ಚಿಕಿತ್ಸೆ ಪಡೆದು ಗುಣಮುಖರಾದವರಿಗೆ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಗ್ರಾಂ ಪಂ ಸದಸ್ಯರು ಓಬಕ್ಕ, ಲಕ್ಷ್ಮಿ, ನೇತ್ರಾವತಿ, ಬಸಮ್ಮ,
ಆಶಾ ಕಾರ್ಯಕರ್ತೆಯರು, ವಿಶಾಲಾಕ್ಷಿ, ಬೊಮ್ಮಕ್ಕ, ವೀಣಾ. ಅಂಗನವಾಡಿ ಕಾರ್ಯಕರ್ತರು ಮತ್ತು ಊರಿನ ಮುಖಂಡರು ಹಾಜರಿದ್ದರು.

LEAVE A REPLY

Please enter your comment!
Please enter your name here