ಶೈಕ್ಷಣಿಕ-ಸಮಾವೇಶ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ

0
298

ಕೊಟ್ಟೂರು: ಪದವಿ ಪೂರ್ವ ಶಿಕ್ಷಣ ಇಲಾಖೆ, ದೇಶದಲ್ಲಿ ಕರ್ನಾಟಕ ರಾಜ್ಯದ ಪದವಿ ಪೂರ್ಣ ಶಿಕ್ಷಣ ಇಲಾಖೆಯು ಅತ್ಯುತ್ತಮ ಇಲಾಖೆಯಾಗಿ ಸಾಧನೆಗೈದಿದೆ ಪ್ರೌಢಶಾಲೆ ಶಿಕ್ಷಣ ಹಂತವನ್ನು ಮುಗಿಸಿ ನಂತರ ವಿದ್ಯಾರ್ಥಿಗಳು ಪದವಿಪೂರ್ವ ಶಿಕ್ಷಣ ಹಂತದ ಶಿಕ್ಷಣವನ್ನು ಪಡೆದುಕೊಳ್ಳುವ ಅತ್ಯಂತ ಜವಾಬ್ದಾರಿತವಾಗಿ ಶಿಕ್ಷಣ ಇಲಾಖೆ ಇದ್ದರೆ ಅದು ಪದವಿ ಪೂರ್ವ ಶಿಕ್ಷಣ ಇಲಾಖೆ ಯಾಗಿದೆ ಎಂದು ಕರ್ನಾಟಕ ರಾಜ್ಯ ಪದವಿಪೂರ್ವ ಕಾಲೇಜುಗಳ ಪ್ರಾಚಾರ್ಯರ ಸಂಘದ ಅಧ್ಯಕ್ಷರಾದ ಶ್ರೀ ಮಾನ್ಯ ಶ್ರೀಕಂಠೇಗೌಡ ಹೇಳಿದರು.

ಪಟ್ಟಣದ ಇಂದು ಪದವಿಪೂರ್ವ ಕಾಲೇಜಿನಲ್ಲಿ ಶುಕ್ರವಾರ ಬೆಳಗ್ಗೆ 12:30ಕ್ಕೆ ತಾಲೂಕು ಪದವಿಪೂರ್ವ ಕಾಲೇಜಿಗಳ ಪ್ರಾಚಾರ್ಯರ ಹಾಗೂ ಉಪನ್ಯಾಸಕರ ಸಂಘದಿಂದ ಶೈಕ್ಷಣಿಕ ಸಮಾವೇಶ ಪ್ರತಿಭಾ ಪುರಸ್ಕಾರ ಸಮಾರಂಭ ಹಮ್ಮಿಕೊಳ್ಳಲಾಯಿತು. ಗಿಡಕ್ಕೆ ನೀರು ಉಣಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆಯನ್ನು ಕರ್ನಾಟಕ ರಾಜ್ಯ ಪದವಿ ಪೂರ್ವ ಕಾಲೇಜುಗಳ ಪ್ರಾಚಾರ್ಯ ಸಂಘದ ಅಧ್ಯಕ್ಷರಾದ ಶ್ರೀ ಮಾನ್ಯ ಶ್ರೀಕಂಠಗೌಡರು ನೆರವೇರಿಸಿದರು.

ನಂತರ ಮಾತನಾಡಿದರು ಪದವಿ ಪೂರ್ವ ಶಿಕ್ಷಣ ಇಲಾಖೆಯ ಸಮಾಜದಲ್ಲಿ ಒಂದು ಜವಾಬ್ದಾರಿತವಾದ ಸ್ಥಾನವನ್ನು ನಿರ್ವಹಿಸುತ್ತಿದೆ. ನಮ್ಮಂತ ಪ್ರಾಂಶುಪಾಲರು , ಉಪನ್ಯಾಸಕರು ಸಮಾಜಕ್ಕೆ ಕೊಡುಗೆಯನ್ನು ನೀಡಿ ನೀಡುತ್ತಾ ಬಂದಿದ್ದಾರೆ ಸರ್ಕಾರ ಹೊಸದಾಗಿ ತಂದಿರುವ ಪಿಂಚಣಿ ಯೋಜನೆ ರದ್ದುಪಡಿಸಿ ಹಳೆಯ ಪಿಂಚಣಿ ಜಾರಿಗೆಗೊಳಿಸಬೇಕು ಒತ್ತಾಯಿಸಿದರು.

ಕೊಟ್ಟೂರಿನ ಇಂದು ಪಿಯು ಕಾಲೇಜ್ ಕಲಾ ವಿಭಾಗದಲ್ಲಿ ರಾಜ್ಯದಲ್ಲಿ ಸುಮಾರು ಏಳು ಎಂಟು ವರ್ಷಗಳಿಂದ ಪ್ರಥಮ ಸ್ಥಾನವನ್ನು ಇಂದು ಮಹಾ ವಿದ್ಯಾಲಯಕ್ಕೆ ಬರುತ್ತದೆ. ದ್ವಿತೀಯ ಪಿಯುಸಿ ಫಲಿತಾಂಶ ರಾಜ್ಯಕ್ಕೆ ಮೊದಲ ಸ್ಥಾನ ದಕ್ಷಿಣ ಕನ್ನಡ ಜಿಲ್ಲೆಗಳು ಪ್ರಥಮ ಸ್ಥಾನ ಬರುತ್ತಿದ್ದವು

ಆದರೆ ಹೈ – ಕ ಭಾಗದಲ್ಲಿ ಯಾವುದೇ ಕಾಲೇಜುಗಳು ರಾಂಕ್ ಗಳನ್ನು ಬಂದಿರುವುದನ್ನು ನೋಡಿರಲಿಲ್ಲ ಇಂದು ಶಿಕ್ಷಣ ಸಂಸ್ಥೆಯು ಸರಿ ಸುಮಾರು 6 ರಿಂದ 7 ವರ್ಷ ಕಲಾ ವಿಭಾಗದಲ್ಲಿ 1ರಿಂದ 7 ರ್ಯಾಂಕ್ ಗಳನ್ನು ಪಡೆಯುತ್ತ ಬಂದಿದ್ದಾರೆ ಈ ಶಿಕ್ಷಣ ಸಂಸ್ಥೆಯ ವ್ಯವಸ್ಥಾಪಕರಾದ ಸಂತೋಷ್ ಮತ್ತು ವೀರಭದ್ರಪ್ಪ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಅವರಿಗೆ ಹೈದ್ರಾಬಾದ್- ಕರ್ನಾಟಕ ಭಾಗದ ವಿದ್ಯಾರ್ಥಿಗಳಿಗೆ ಐಎಎಸ್,ಐಪಿಎಸ್,ಕೆಎಸ್ಎ ಸ್ಪರ್ಧಾತ್ಮಕ ಪರೀಕ್ಷೆ ತರಬೇತಿಯನ್ನು ಈ ಭಾಗದ ವಿದ್ಯಾರ್ಥಿಗಳಿಗೆ ತುಂಬಾ ನೀಡಿದರೆ ಅನುಕೂಲವಾಗುತ್ತದೆ ಎಂದು ಹೇಳಿದರು.

ಹಾಗೂ ಈ ವರ್ಷದ ಶೈಕ್ಷಣಿಕ ಸಾಲಿನ ಅತಿ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ ಮತ್ತು ಉತ್ತಮ ಫಲಿತಾಂಶ ನೀಡಿದ ಕಾಲೇಜಿನ ಪ್ರಾಂಶುಪಾಲರಿಗೆ ಉಪನ್ಯಾಸಕರಿಗೆ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಕ.ರಾ.ಪ.ಪೂ.ಪ್ರಾ. ಅಧ್ಯಕ್ಷರುಗಳಾದ ಶ್ರೀಕಂಠಗೌಡ, ನಿಂಗೇಗೌಡ, ಗೌರವಾನ್ವಿತ ಅಧ್ಯಕ್ಷರಾದ ತಿಮ್ಮಯ್ಯ ಪುರ್ಲೆ, ಕೊಟ್ಟೂರು ಪ. ಪೂರ್ವ ಕಾಲೇಜುಗಳ ಪ್ರಾಂಶುಪಾಲ ಸಂಘದ ಅಧ್ಯಕ್ಷರಾದ ಡಾ. .ಜಿ ಸೋಮಶೇಖರಪ್ಪ, ವಿ. ನಗರ ಜಿಲ್ಲೆಯ ಪ. ಪೂರ್ವ ಪ್ರಾಚಾರ್ಯ ಸಂಘದ ಕಾರ್ಯದರ್ಶಿಗಳಾದ ನಾಗರಾಜ್ ಹವಲ್ದಾರ್, ಇಂದು ಶಿಕ್ಷಣ ಸಂಸ್ಥೆಯ ವ್ಯವಸ್ಥಾಪಕರಾದ ಸಂತೋಷ್ ,ವೀರಭದ್ರಪ್ಪ. ಪ್ರಾಚಾರ್ಯರ ಸಂಘದ ಪದಾಧಿಕಾರಿಗಳಾದ ತಿಪ್ಪೇಸ್ವಾಮಿ ಬಿ ಪಿ, ಕಾರ್ಯಧ್ಯಕ್ಷರು ಕೊಟ್ಟೂರು, ಶ್ರೀಮತಿ ನಿರ್ಮಲಾ ಶಿವನಗುತ್ತಿ ಪ್ರಧಾನ ಕಾರ್ಯದರ್ಶಿ ಕಾರ್ಯದರ್ಶಿ ಕೊಟ್ಟೂರು, ಕೆಎಂ ಜಯಣ್ಣ ಖಜಾಂಚಿ, ಹಾಗೂ ಕೊಟ್ಟೂರು ತಾಲೂಕಿನ ಎಲ್ಲಾ ಕಾಲೇಜಿನ ಉಪನ್ಯಾಸಕರು ಮತ್ತು ಪ್ರಾಚಾರ್ಯರು ಈ ಸಮಾರಂಭದಲ್ಲಿ ಉಪಸ್ಥಿತರಿದ್ದರು ಸ್ವಾಗತವನ್ನು ವೀರಭದ್ರಪ್ಪನವರು ನೆರವೇರಿಸಿದರು.

ವರದಿ:-ಶಿವರಾಜ್ ಕನ್ನಡಿಗ

LEAVE A REPLY

Please enter your comment!
Please enter your name here