ಆತ್ಮ ನಿರ್ಭರ ಭಾರತ್ ಅಭಿಯಾನ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ

0
203

ದಾವಣಗೆರೆ ಜ.30 : ದಾವಣಗೆರೆ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ‘ಆತ್ಮ ನಿರ್ಭರ ಭಾರತ್ ಅಭಿಯಾನ’ ದ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಕಾರ್ಯಕ್ರಮದಲ್ಲಿ ದಾವಣಗೆರೆ-ತಮಿಳುನಾಡಿನ ಸೆಂಟ್ರಲ್ ಯೂನಿವರ್ಸಿಟಿಯ ಸ್ಕೂಲ್ ಆಫ್ ಕಾಮರ್ಸ್ ಮತ್ತು ಬಿಸಿನೆಸ್ ಮ್ಯಾನೇಜ್‍ಮೆಂಟ್ ಡೀನ್ ಡಾ.ವೆಲ್ಮುರುಗನ್ ಪಿ.ಎಸ್ ಇವರು ಮುಖ್ಯ ಅಥಿತಿಯಾಗಿ ಪಾಲ್ಗೊಂಡು ಮಾತನಾಡಿ ಅರವಿಂದ್ ಘೋಷ್, ಮಹಾತ್ಮ ಗಾಂಧೀಜಿ ಮತ್ತು ಪಂಡಿತ್ ದೀನ್ ದಯಾಲ್ ಉಪಾಧ್ಯ ಇವರುಗಳಿಂದ ಸ್ವಾವಲಂಬಿ ಆರ್ಥಿತೆಯ ಕಲ್ಪನೆಯು ಹೇಗೆ ವಿಕಸನಗೊಂಡಿತು ಎಂದು ತಿಳಿಸಿದರು.

ಭಾರತ ಸರ್ಕಾರದ ಆತ್ಮ ನಿರ್ಭರ ಭಾರತ್ ಉಪಕ್ರಮಗಳನ್ನು ಜಾರಿಗೊಳಿಸಿರುವುದು ಶ್ಲಾಘನೀಯವಾಗಿದ್ದು 2020-21ರ ಬಜೆಟ್‍ನಲ್ಲಿ ಅಗತ್ಯ ನೀತಿ ಮತ್ತು ಆರ್ಥಿಕ ನೆರವಿನೊಂದಿಗೆ ಅದರ ಅನುಷ್ಠಾನದ ಬಗ್ಗೆ ನಿರಂತರವಾಗಿ ಗಮನಹರಿಸಬೇಕೆಂದು ಒತ್ತಾಯಿಸಿದರು.
ಸ್ವಾಬಲಂಭಿ ಭಾರತ ಮಿಷನ್ ಅಡಿಯಲ್ಲಿ ಸ್ವಾತಂತ್ರ್ಯ ಪೂರ್ವದಿಂದ ಹಿಡಿದು ಕೋವಿಡ್ ನಂತಹ ಸಾಂಕ್ರಾಮಿಕ ರೋಗದ ಅವಧಿಯವರೆಗೂ ಅದರ ಕಲ್ಪನೆಯ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
ಸ್ವತಂತ್ರ ಭಾರತವು ಮಿಶ್ರ ಆರ್ಥಿಕ ನೀತಿಯನ್ನು, ಸಮಾಜದ ಸಮಾಜವಾದಿ ಮಾದರಿಯನ್ನು ಏಕೆ ಅಳವಡಿಸಿಕೊಳ್ಳಲು ಪ್ರಾರಂಭಿಸಿತು ಹಾಗೂ ಜಾಗತೀಕರಣÀದ ನಂತರ ಬಂಡವಾಳಶಾಹಿ ಸಮಾಜವಾಗಿ ಹೇಗೆ ಪರಿವರ್ತನೆಗೊಂಡಿತು ಎಂದು ಅವರು ವಿವರಿಸಿದರು.

ಚೀನಾ ಮತ್ತು ಯುಎಸ್‍ಎ ವಿದೇಶಿ ಉತ್ಪನ್ನ ಮತ್ತು ಸೇವೆಗಳನ್ನು ಅವಲಂಭಿಸಿ ಭಾರತವು ತನ್ನ ಸಾಮಥ್ರ್ಯ ಮತ್ತು ಸ್ವಾವಲಂಬನೆಯನ್ನು ಕಳೆದುಕೊಳ್ಳುವುದನ್ನು ಹೇಗೆ ಪ್ರಾರಂಭಿಸಿತು ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲ ಟಿ.ಕೆ.ಶಂಕರಯ್ಯ, ವಾಣಿಜ್ಯ ವೀಭಾಗದ ಮುಖ್ಯಸ್ಥ ಪ್ರೊ.ಶಂಕರ್ ಆರ್.ಶೀಲಿ, ಐಕ್ಯೂಎಸಿ ಸಂಚಲಕರಾದ ಪ್ರೊ.ವೀರೇಶ್.ಕೆ, ಹಳೆ ವಿದ್ಯಾರ್ಥಿಗಳ ಸಂಘದ ಸಂಚಾಲಕರಾದ ಪ್ರೊ.ಭೀಮಣ್ಣ ಸುಣಗಾರ, ಡಾ.ಮರುಳುಸಿದ್ದಪ್ಪ, ಚೆನ್ನಬಸಪ್ಪ, ನಲ್ಲನವರ ಶಂಭುಲಿಂಗಪ್ಪ, ಚೈತ್ರ ಉಪಸ್ಥಿತರಿದ್ದರು. ವೆಂಕಟೇಶ್ ಬಾಬು ಸ್ವಾಗತಿಸಿದರು, ಡಾ.ಮಂಜುನಾಥ ಜೆ.ಎಂ ವಂದಿಸಿದರು.

LEAVE A REPLY

Please enter your comment!
Please enter your name here