ಖಜಾನೆಗಳಲ್ಲಿನ ವರ್ಷಾಂತ್ಯದ ಬಿಲ್ಲುಗಳನ್ನು ತೀರ್ಣಗೊಳಿಸಲು ಮಾ.31 ಕಡೆಯ ದಿನ ಖಜಾನೆ ಇಲಾಖೆಯಿಂದ ವರ್ಷಾಂತ್ಯದ ಬಿಲ್ ತಯಾರಿ ತರಬೇತಿ

0
98

ಬಳ್ಳಾರಿ,ಫೆ.16 : ಇಲಾಖೆ ಖಜಾನೆಗಳಲ್ಲಿ ವರ್ಷಾಂತ್ಯದ ಬಾಕಿ ಬಿಲ್ಲುಗಳನ್ನು ಮಾರ್ಚ್ 31 ರೊಳಗೆ ಬಗೆಹರಿಸಿಕೊಳ್ಳಿ ಇಲ್ಲದಿದ್ದಲ್ಲಿ ಅನುದಾನ ಅಧ್ಯರ್ಪಣವಾಗುತ್ತದೆ ಎಂದು ಖಜಾನೆ ಇಲಾಖೆಯ ಉಪ ನಿರ್ದೇಶಕ ಸುರೇಶ್ ಅವರು ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿರುವ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಸಭಾಂಗಣದಲ್ಲಿ ಮಂಗಳವಾರ ನಡೆದ ವರ್ಷಾಂತ್ಯದ ಬಿಲ್ ತಯಾರಿ ತರಬೇತಿಯಲ್ಲಿ ಅವರು ಮಾತನಾಡಿದರು.
ಡಿ.ಸಿ ಬಿಲ್ಲುಗಳಿಗೆ ಸಂಬಂಧಿಸಿದಂತೆ ಮತ್ತು ಎನ್.ಪಿ.ಎಸ್. ಬಿಲ್ಲುಗಳನ್ನು ತಯಾರಿಸುವ ಬಗ್ಗೆ ಹಾಗೂ ಹೊಸದಾಗಿ ಡಿ.ಎಸ್.ಸಿ ಪಡೆದುಕೊಳ್ಳುವದರ ಕುರಿತು ಮಾಹಿತಿ ನೀಡಿದರು.
ಆರ್ಥಿಕ ಸಚಿವಾಲಯದಿಂದ ಆದೇಶ ಹೊರಡಿಸಿದ ನಿಗಧಿತ ದಿನಾಂಕದೊಳಗೆ ಎಲ್ಲಾ ಇಲಾಖೆಯ ಮುಖ್ಯಸ್ಥರು ವರ್ಷಾಂತ್ಯದ ಬಿಲ್ಲುಗಳನ್ನು ತಯಾರಿಸಿ ಇಲಾಖೆಗೆ ಸಲ್ಲಿಸಿ, ಮಾ.31ರ ನಂತರ ಬಂದ ಬಿಲ್ಲುಗಳನ್ನು ಸ್ವೀಕರಿಸಲಾಗುವುದಿಲ್ಲ ಎಂದು ಅವರು ಹೇಳಿದರು.
ಆನ್‍ಲೈನ್‍ನಲ್ಲಿ ಡಿ.ಎಸ್.ಸಿ ಬಾಕಿ ಬಿಲ್‍ಗಳಿಗೆ ಸಂಬಂಧಿಸಿದ ಇ-ಕೆವೈಸಿ ಸಲ್ಲಿಸುವ ವಿಧಾನವನ್ನು ಹುಲುಗಪ್ಪ ಕೆಂಚಮ್ಮನಹಳ್ಳಿ ಅವರು ವಿವರವಾಗಿ ತಿಳಿಸಿಕೊಟ್ಟರು.
ನೌಕರರ ಸಂಘದ ಅಧ್ಯಕ್ಷ ಎಂ.ಶಿವಾಜಿರಾವ್ ಅವರ ಅಧ್ಯಕ್ಷತೆ ವಹಿಸಿ ಡಿ.ಡಿ.ಒ.ಗಳಿಗೆ ತೊಂದರೆಯಾಗದ ನಿಟ್ಟಿನಲ್ಲಿ ಸೂಕ್ತ ಮಾರ್ಗದರ್ಶನವನ್ನು ಖಜಾನೆ ಇಲಾಖೆಯು ಈ ರೀತಿಯ ಕಾರ್ಯಾಗಾರವನ್ನು ಏರ್ಪಡಿಸಿ ತಿಳಿವಳಿಕೆ ನೀಡಿರುವುದು ಸಂತಸ ತಂದಿದೆ.ಮುಂದೆಯೂ ಇದೇ ರೀತಿ ಬಿಲ್‍ಗಳ ತಯಾರಿಕೆಗೆ ಸಂಬಂಧಿಸಿದಂತೆ ಕಾರ್ಯಾಗಾರ ಏರ್ಪಡಿಸಿ ಎಂದರು.
ಈ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಗೌರವಾಧ್ಯಕ್ಷ ಎಂ.ಟಿ.ಮಲ್ಲೇಶಪ್ಪ, ಖಜಾನೆ ಇಲಾಖೆಯ ಸಹಾಯಕ ನಿರ್ದೇಶಕರಾದ ಶ್ರೀಧರ್, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಜಂಟಿ ಕಾರ್ಯದರ್ಶಿ ಪಿ.ಅಲ್ಲಾಬಕಾಷ್, ವಿವಿಧ ಸರ್ಕಾರಿ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಹಾಜರಿದ್ದರು.

LEAVE A REPLY

Please enter your comment!
Please enter your name here