ಹೊಸಪೇಟೆ ‘ಫೆಡರೇಷನ್ ಆಫ್ ಕರ್ನಾಟಕ ಆಟೋ ರಿಕ್ಷಾ ಡ್ರೈವರ್ಸ್ ಯೂನಿಯನ್’ ಹಾಗೂ ‘ಕರ್ನಾಟಕ ರಾಜ್ಯ ವಾಣಿಜ್ಯ ವಾಹನ ಚಾಲಕರ ಸಂಘ’ ವತಿಯಿಂದ ಪೆಟ್ರೋಲ್ ಡೀಸೆಲ್ LPG ಗ್ಯಾಸ್ ಬೆಲೆ ಏರಿಕೆ ವಿರೋಧಿಸಿ ಹೋರಾಟ

0
113

ವಿಜಯನಗರ,16.ಹೊಸಪೇಟೆಯ ಎಲ್ಲಾ ಆಟೋರಿಕ್ಷಾ,ಟಾಟಾ ಎಸಿ , ಟ್ಯಾಕ್ಸಿ ಹಾಗೂ ಇನ್ನಿತರ ವಾಣಿಜ್ಯ ವಾಹನ ಚಾಲಕ ಬಂಧುಗಳೇ ದಿನಾಂಕ 17/02/2021 ರಂದು ಪೆಟ್ರೋಲ್ ಡೀಸೆಲ್ LPG ಗ್ಯಾಸ್ ಬೆಲೆ ಏರಿಕೆ ವಿರೋಧಿಸಿ ಹಾಗೂ ಹೊಸಪೇಟೆಯ ಗ್ಯಾಸ್ ಬಂಕ್ ನಲ್ಲಿ ಅನಧಿಕೃತವಾಗಿ ಹೆಚ್ಚು ಬೆಲೆಗೆ ಮಾರಾಟ ಮಾಡುವುದನ್ನು ವಿರೋಧಿಸಿ 2021 ರಾಜ್ಯ ಬಜೆಟ್ ನಲ್ಲಿ 1000 ಕೋಟಿ ಹಣವನ್ನು ಚಾಲಕರ ಕಲ್ಯಾಣ ಮಂಡಳಿಗೆ ನೀಡಲು ಆಗ್ರಹಿಸಿ ಹೊಸಪೇಟೆಯ ಮುನ್ಸಿಪಾಲ್ ಹೈಸ್ಕೂಲ್ ಮೈದಾನದಿಂದ ವಿಜಯನಗರ ಕ್ಷೇತ್ರದ ಮಾನ್ಯ ಶಾಸಕರ ರಾಣಿಪೇಟೆ ಮನೆಯವರಿಗೆ “ಚಾಲಕರ ಲಕ್ಷ ನಡಿಗೆ ಶಾಸಕರ ಮನೆಯ ಕಡೆಗೆ” ಎಂಬ ಹೆಸರಿನಲ್ಲಿ ಚಾಲಕರ ಪಾದಯಾತ್ರೆ ಹೊಸಪೇಟೆಯ ‘ಫೆಡರೇಷನ್ ಆಫ್ ಕರ್ನಾಟಕ ಆಟೋ ರಿಕ್ಷಾ ಡ್ರೈವರ್ಸ್ ಯೂನಿಯನ್’ ಹಾಗೂ ‘ಕರ್ನಾಟಕ ರಾಜ್ಯ ವಾಣಿಜ್ಯ ವಾಹನ ಚಾಲಕರ ಸಂಘ’ ಹೊಸಪೇಟೆ’ತಾಲೂಕು ಸಮಿತಿಯ ನೇತೃತ್ವದಲ್ಲಿ ಹೋರಾಟವನ್ನು ಹಮ್ಮಿಕೊಂಡಿದ್ದು . ಎಲ್ಲಾ ಚಾಲಕ ಬಂಧುಗಳು ಬೆಳಿಗ್ಗೆ 10:00 ಗಂಟೆಗೆ ಸರಿಯಾಗಿ ವಿಜಯನಗರ ಕಾಲೇಜ್ ಮುಂಭಾಗವಿರುವ ಆಟೋ ನಿಲ್ದಾಣದ ಹತ್ತಿರ ಸೇರಲು ಮನವಿ.

ವಂದನೆಗಳೊಂದಿಗೆ
ಅಧ್ಯಕ್ಷರು/ಪ್ರಧಾನ ಕಾರ್ಯದರ್ಶಿಗಳು

ಫೆಡರೇಷನ್ ಆಫ್ ಕರ್ನಾಟಕ ಆಟೋ ರಿಕ್ಷಾ ಡ್ರೈವರ್ಸ ಯೂನಿಯನ್‌ (ರಿ)
ಹಾಗೂ
ಕರ್ನಾಟಕ ರಾಜ್ಯ ವಾಣಿಜ್ಯ ವಾಹನ ಚಾಲಕರ ಸಂಘ (ರಿ)
ಹೊಸಪೇಟೆ ತಾಲೂಕು ಸಮಿತಿ 9008030020.

ವರದಿ:-ಮಹಮದ್ ಗೌಸ್