ಭಾರತ್ ಸ್ಕೌಟ್ಸ್ ಗೈಡ್ಸ್ ರೇಂಜರ್ ಟೀಮ್‍ಗೆ ಚಾಲನೆ

0
189

ಬಳ್ಳಾರಿ,ಜ.21: ಭಾರತ್ ಸ್ಕೌಟ್ಸ್ ಗೈಡ್ಸ್ ಹಾಗೂ ನೋಪಾಸನ ಸಂಸ್ಥೆ ಸಹಯೋಗ ಮತ್ತು ಕರ್ನಾಟಕ ಸ್ಟೇಟ್ಸ್‍ಗೈಡ್ಸ್ ಫೆಲೋಶಿಪ್ ಸಹಕಾರದಲ್ಲಿ ಭಾರತ್ ಸ್ಕೌಟ್ಸ್ ಗೈಡ್ಸ್‍ನಲ್ಲಿ ರೇಂಜರ್ ಟೀಮ್ ಪ್ರಾರಂಭವಾಗಿ 100 ವರ್ಷ ತುಂಬಿದ ಹಿನ್ನಲೆಯಲ್ಲಿ, 100 ವರ್ಷ ಸಂಭ್ರಮದ ಕಾರ್ಯಕ್ರಮವನ್ನು ಅಲ್ಲಂ ಸುಮಂಗಳಮ್ಮ ಮಹಿಳಾ ಮಹಾ ವಿದ್ಯಾಲಯದಲ್ಲಿ ಬುಧವಾರ ನಡೆಯಿತು.
ಭಾರತ್ ಸ್ಕೌಟ್ಸ್ ಗೈಡ್ಸ್‍ನಲ್ಲಿ ಕಾಲೇಜು ವಿದ್ಯಾರ್ಥಿನಿಯರ ರೇಂಜರ್ ಟೀಮ್‍ಗೆ ಪ್ರಾಚಾರ್ಯರಾದ ಡಾ.ಎಸ್.ವೈ.ತಿಮ್ಮಾರೆಡ್ಡಿ ಚಾಲನೆ ನೀಡಿದರು.
ವಿದ್ಯಾರ್ಥಿನಿಯರಲ್ಲಿ ಧೈರ್ಯ, ನಿರ್ಭಯ, ಭದ್ರತೆ, ನಾಯಕತ್ವ ಗುಣಗಳನ್ನು ಬೆಳೆಸುವ ಉದ್ದೇಶದಿಂದ ಮಹಿಳಾ ವಿದ್ಯಾರ್ಥಿನಿಯರಿಗೆ ರೋಪ್ ಕ್ಲೈಂಬಿಂಗ್, ಅಲ್ಪಾನೆಟ್, ಲಾಡರ್ ಕ್ಲೈಂಬಿಂಗ್, ಟಾರ್ಜನ್ ಸ್ವಿಂಗ್ & ರೋಪ್ ವಾಕ್ ಸಾಹಸ ಕ್ರೀಡೆಗಳನ್ನು ಏರ್ಪಡಿಸಲಾಗುತ್ತು.
ಈ ಸಂದರ್ಭದಲ್ಲಿ ನೋಪಾಸನ ಸಂಸ್ಥೆಯ ನಿರ್ದೇಕರಾದ ಎಂ.ಎ.ಶಕೀಬ್, ಎ.ಎಸ್.ಎಮ್.ಕಾಲೇಜಿನ ಉಪನ್ಯಾಸಕರಾದ ಮಂಗಳಾ, ನೆಹರು ಯುವ ಕೇಂದ್ರದ ಜಿಲ್ಲಾ ಯುವ ಸಂಯೋಜನಾಧಿಕಾರಿಗಳಾದ ಮಾಂಟು ಪತ್ತಾರ್, ಹಾಗೂ ಕೆ.ಎಸ್.ಜೆ.ಎಫ್.ನ ಸದಸ್ಯರುಗಳಾದ ರಿಜ್ವಾನ, ಫರೀದಾ, ಮೆಹಬೂಬ್‍ಭಾಷ, ಮೋಯಿನ್, ಚನ್ನ, ನರಸಿಂಹ ರೆಡ್ಡಿ, ಪವನ್ ಕುಮಾರ್ ತರಬೇತಿ ನೀಡಲು ಸಹಕರಿಸಿದರು.

LEAVE A REPLY

Please enter your comment!
Please enter your name here