ಮಧ್ಯವರ್ತಿಗಳು/ಏಜೆಂಟರು ತಂದಲ್ಲಿ ಕ್ರಿಮಿನಲ್ ಕೇಸ್, ಬೆಂಬಲ ಬೆಲ ಅಡಿಯಲ್ಲಿ ಭತ್ತ/ರಾಗಿ/ಜೋಳ ಖರೀದಿ:ಡಿಸಿ ಮಾಲಪಾಟಿ

0
89

ಬಳ್ಳಾರಿ,ಮಾ.09 : 2020-21ನೇ ಸಾಲಿನ ಮುಂಗಾರು/ಹಿಂಗಾರು ಋತುವಿನಲ್ಲಿ ಬೆಳೆದ ಉತ್ತಮ ಗುಣಮಟ್ಟದ ಭತ್ತ/ರಾಗಿ/ಜೋಳವನ್ನು ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ರೈತರಿಂದ ನೇರವಾಗಿ ಖರೀದಿಸಲು ಬಳ್ಳಾರಿ ಜಿಲ್ಲಾ ಟಾಸ್ಕ್‍ಫೋರ್ಸ್ ಸಮಿತಿಯಲ್ಲಿ ತೀರ್ಮಾನಿಸಲಾಗಿದೆ ಎಂದು ಜಿಲ್ಲಾಧಿಕಾರಿ ಪವನಕುಮಾರ್ ಮಾಲಪಾಟಿ ಅವರು ತಿಳಿಸಿದ್ದಾರೆ.
ಬೆಂಬಲ ಬೆಲೆ ಯೋಜನೆಯ ಕಾರ್ಯಾಚರಣೆಯನ್ನು ಕರ್ನಾಟಕ ರಾಜ್ಯ ಆಹಾರ ಸರಬರಾಜು ನಿಗಮವು ನಿರ್ವಹಿಸಲು ಆದೇಶಿಸಲಾಗಿದೆ. ರೈತರು ತಾವು ಬೆಳೆದ ಭತ್ತ/ರಾಗಿ/ಜೋಳವನ್ನು ಮಾರಾಟ ಮಾಡಲು ಯಾವುದೇ ಅಡೆ-ತಡೆ ಇಲ್ಲದೇ ಮುಕ್ತವಾಗಿ ಎಷ್ಟು ಪ್ರಮಾಣದಲ್ಲಿ ಬೇಕಾದರೂ ಮಾರಾಟ ಮತ್ತು ಖರೀದಿಸಲು ಮಾ.15ರವರೆಗೆ ಅವಕಾಶ ನೀಡಲಾಗಿದೆ.
ಸರ್ಕಾರದ ಆದೇಶದಂತೆ ಬೆಂಬಲ ಬೆಲೆ ಯೋಜನೆಯಡಿ ಭತ್ತ/ರಾಗಿ/ಜೋಳವನ್ನು ಮಾರಾಟ ಮಾಡಲು ರೈತರು ಮೊದಲು ಕೃಷಿ ಇಲಾಖೆಯಲ್ಲಿ ಪ್ರೂಟ್ಸ್ ತಂತ್ರಾಂಶದಲ್ಲಿ ನೋಂದಣಿÉ ಮಾಡಿಕೊಳ್ಳಬೇಕು. ತದನಂತರ ಆಯಾ ತಾಲ್ಲೂಕುಗಳ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಈಗಾಗಲೇ ತೆರೆದಿರುವ ಖರೀದಿ ಕೇಂದ್ರಗಳಲ್ಲಿ ಭತ್ತ/ರಾಗಿ/ಜೋಳವನ್ನು ಮಾರಾಟ ಮಾಡಲು ನೋಂದಾಯಿಸಿಕೊಳ್ಳಬೇಕು. ಈ ರೀತಿ ಕೃಷಿ ಇಲಾಖೆ ಮತ್ತು ಖರೀದಿ ಕೇಂದ್ರಗಳಲ್ಲಿ ನೋಂದಾಯಿಸಿಕೊಂಡ ರೈತರು ಭತ್ತವನ್ನು ನಿಗಧಿಪಡಿಸಿರುವ ಅಕ್ಕಿ ಗಿರಣಿಗಳಿಗೆ ನೇರವಾಗಿ ಸರಬರಾಜು ಮಾಡಬೇಕು ಎಂದು ಅವರು ತಿಳಿಸಿದ್ದಾರೆ.
ಸರ್ಕಾರ ಘೋಷಿಸಿರುವ ಬೆಂಬಲ ಬೆಲೆಗಳು: ಜಿಲ್ಲೆಯಲ್ಲಿ ಖರೀದಿಸಲು ತೀರ್ಮಾನಿಸಿರುವ ಕೃಷಿ ಉತ್ಪನ್ನಗಳ ಬೆಂಬಲ ಬೆಲೆ ಪ್ರತಿ ಕ್ವಿಂಟಲ್ ಭತ್ತಕ್ಕೆ ಸಾಮಾನ್ಯ ರೂ.1868, ಭತ್ತ ಗ್ರೇಡ್–ಎ ರೂ.1888, ಬಿಳಿಜೋಳ-ಹೈಬ್ರೀಡ್ ರೂ.2620, ಬಿಳಿಜೋಳ- ಮಾಲ್ದಂಡಿ ರೂ.2640, ರಾಗಿ ರೂ.3295/- ಬೆಲೆಗೆ ಖರೀದಿಸಲಾಗುತ್ತದೆ. ಕೃಷಿ ಉತ್ಪನ್ನಗಳನ್ನು ಖರೀದಿಸಲು ಮಾ.15ರ ಕಾಲಾವಕಾಶ ನೀಡಲಾಗಿದೆ.
ಭತ್ತ ಖರೀದಿ ಕೇಂದ್ರಗಳ ವಿವರ : ಬಳ್ಳಾರಿ, ಕುರುಗೋಡು, ಸಿರುಗುಪ್ಪ, ಕಂಪ್ಲಿ, ತಾಲೂಕಿನ ಎ.ಪಿ.ಎಂ.ಸಿ. ಯಾರ್ಡ್‍ಗಳಲ್ಲಿ ಭತ್ತ/ಜೋಳ ಖರೀದಿ ಕೇಂದ್ರಗಳು ಸ್ಥಾಪಿಸಲಾಗಿದ್ದು, ಸಂಡೂರು, ಕೂಡ್ಲಿಗಿ, ಕೊಟ್ಟೂರು, ಹೊಸಪೇಟೆ, ಹೆಚ್.ಬಿ.ಹಳ್ಳಿ, ಹಡಗಲಿ, ಹರಪನಹಳ್ಳಿ ಒಳಗೊಂಡಂತೆ ಆಯಾ ತಾಲೂಕಿನ ಎ.ಪಿ.ಎಂ.ಸಿ. ಯಾರ್ಡ್‍ಗಳಲ್ಲಿ ಭತ್ತ/ಜೋಳ/ರಾಗಿ ಖರೀದಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.
ಖರೀದಿ ಅಧಿಕಾರಿಗಳು ಮತ್ತು ಗ್ರೇಡರ್‍ಗಳು : ಆಯಾ ತಾಲೂಕಿನ ಆಹಾರ ನಾಗರಿಕ ಸರಬರಾಜು ನಿಗಮದ ಅಧಿಕಾರಿಗಳಾದ ಬಳ್ಳಾರಿ/ಕುರುಗೋಡು ಎ.ಪಿ.ಎಂ.ಸಿ. ಯಾರ್ಡ್‍ನ ಕಟ್ಟೆಗೌಡ, ಚಿಲ್ಲರೆ ಮಳಿಗೆ ವ್ಯವಸ್ಥಾಪಕರು, 9483798215, ಗ್ರೇಡರ್; ಕೋಳೂರಿನ ಕೃಷಿ ಅಧಿಕಾರಿಗಳಾದ ಶ್ರೀಕಾಂತ್ ಪಾಟೇಲ್ 8277928090, ಸಿರುಗುಪ್ಪ ಎ.ಪಿ.ಎಂ.ಸಿ. ಯಾರ್ಡ್‍ನ ಬಸವರಾಜ ಸಿ. 9845236348, ಗ್ರೇಡರ್; ಸಿಕಂದರ ಬಾಷ, ಸಹಾಯಕ ಕೃಷಿ ಅಧಿಕಾರಿಗಳು, ಸಿರುಗುಪ್ಪ 8277930431, ಸಂಡೂರು ಎ.ಪಿ.ಎಂ.ಸಿ. ಯಾರ್ಡ್‍ನ ಎಂ.ಚಿನ್ನಪ್ಪ, 9380937990/9980450713, ಗ್ರೇಡರ್; ರಮೇಶ ಜ್ಯೋತಿ, ಸಹಾಯಕ ಕೃಷಿ ಅಧಿಕಾರಿಗಳು, ಸಂಡೂರು 8277930439, ಕೊಟ್ಟೂರು ಎ.ಪಿ.ಎಂ.ಸಿ. ಯಾರ್ಡ್‍ನ ಈಶ್ವರಪ್ಪ. ಜಿ,9945006241, ಗ್ರೇಡರ್; ಸಾವಿತ್ರಿ, ಹೆಚ್. ಸಹಾಯಕ ಕೃಷಿ ಅಧಿಕಾರಿಗಳು, 7353722388, ಹೊಸಪೇಟೆ ಎ.ಪಿ.ಎಂ.ಸಿ. ಯಾರ್ಡ್‍ನ ಎಂ.ಶಿವರಾಜ, 9535627707, ಗ್ರೇಡರ್; ನರಸಿಂಹಮೂರ್ತಿ, ಸಹಾಯಕ ಕೃಷಿ ಅಧಿಕಾರಿಗಳು, ಆರ್.ಎಸ್.ಕೆ 7899568996, ಕಂಪ್ಲಿ ಎ.ಪಿ.ಎಂ.ಸಿ. ಯಾರ್ಡ್‍ನ ಎ.ಸೆಲ್ವರಾಜ 9341258729, ಗ್ರೇಡರ್; ಮಾರುತಿ ಪ್ರಸಾದ್, ಸಹಾಯಕ ಕೃಷಿ ಅಧಿಕಾರಿಗಳು, 8277930432, ಹೆಚ್.ಬಿ.ಹಳ್ಳಿ ಎ.ಪಿ.ಎಂ.ಸಿ. ಯಾರ್ಡ್‍ನ ಬಿ.ಬಸವರಾಜ 9986606310, ಗ್ರೇಡರ್; ಯು. ಮಹದೇವಪ್ಪ, ಕೃಷಿ ಸಹಾಯಕ, 9449763036, ಹಡಗಲಿ ಎ.ಪಿ.ಎಂ.ಸಿ. ಯಾರ್ಡ್‍ನ ಇರ್ಫಾನಿ ಭಾಷಾ, 9886734876, ಗ್ರೇಡರ್;ಎಸ್.ಈ. ಯಮುನಪ್ಪ, ಸಹಾಯಕ ಕೃಷಿ ಅಧಿಕಾರಿಗಳು 8277934310, ಹರಪನಹಳ್ಳಿ ಎ.ಪಿ.ಎಂ.ಸಿ. ಯಾರ್ಡ್‍ನ ಬಸವರಾಜ ಎಂ 9986606310, ಗ್ರೇಡರ್; ದೊಡ್ಡ ಹಾಲಪ್ಪ, ಸಹಾಯಕ ಕೃಷಿ ಅಧಿಕಾರಿಗಳು 8277930460 ಆಯಾ ತಾಲೂಕಿನ ರೈತರು ಇವರುಗಳನ್ನು ಸಂಪರ್ಕಿಸಲು ತಿಳಿಸಿದ್ದಾರೆ.
ಭತ್ತ,ರಾಗಿ,ಬಿಳಿ ಜೋಳ ಖರೀದಿಸಲು ಖರೀದಿ ಕೇಂದ್ರಗಳಲ್ಲಿ ಆನ್‍ಲೈನ್ ಮುಖಾಂತರ ರೈತರ ನೊಂದಣಿ ಮಾಡಲಾಗುವುದು. ಖರೀದಿ ಕೇಂದ್ರಕ್ಕೆ ರೈತರು ಕೃಷಿ ಇಲಾಖೆಯಿಂದ ಪಡೆದಿರುವ ಅವರ ಫ್ರೂಟ್ಸ್ ಐ.ಡಿ. (ರೈತರ ನೊಂದಣಿ ಮತ್ತು ಏಕೀಕೃತ ಫಲಾನುಭವಿ ಮಾಹಿತಿ ವ್ಯವಸ್ಥೆ /( Farmer Registration and Unified Beneficiary Information System- FRUITS ) ಮತ್ತು ಆಧಾರ್‍ನೊಂದಿಗೆ ನೊಂದಣಿ ಕೇಂದ್ರಕ್ಕೆ ಬರಬೇಕು. ಬೆಂಬಲ ಬೆಲೆಗಾಗಿ ರೈತರನ್ನು ಪ್ರತ್ಯೇಕವಾಗಿ ನೊಂದಾಯಿಸದೆ ಕೇವಲ ಅವರ ಫ್ರೂಟ್ಸ್ ಐ,ಡಿ.ಯ ಮೂಲಕ ಖರೀದಿಗೆ ನೋಂದಾಯಿಸಲಾಗುವುದು. ಈ ಮಾಹಿತಿಯೊಂದಿಗೆ ರೈತರು ಸಂಬಂಧಪಟ್ಟ ಕೃಷಿ ಇಲಾಖೆಯವರನ್ನು ಸಂಪರ್ಕಿಸಿ ಅಗತ್ಯ ಮಾಹಿತಿಯನ್ನು ಸರಿಪಡಿಸಿ, ಫ್ರೂಟ್ಸ್ ದತ್ತಾಂಶದಲ್ಲಿ ಪರಿಷ್ಕರಿಸಿಕೊಳ್ಳಲು ತಿಳಿಸುವುದು. ಈ ರೀತಿ ಪರಿಷ್ಕರಣೆಯ ನಂತರವೇ ರೈತರು ಮತ್ತೊಮ್ಮೆ ಖರೀದಿ ಕೇಂದ್ರಕ್ಕೆ ಬಂದು ಖರೀದಿ ಪ್ರಕ್ರಿಯೆಯಲ್ಲಿ ಭಾಗವಹಿಸಲು ತಿಳಿಸಬೇಕು ಎಂದು ಅವರು ತಿಳಿಸಿದ್ದಾರೆ.
ರಾಗಿ, ಜೋಳ ಸರಬರಾಜು ಮಾಡುವ ರೈತರು ಖರೀದಿ ಕೇಂದ್ರದಲ್ಲಿ ಈಗಾಗಲೇ ನೋಂದಾಯಿಸಿಕೊಂಡ ಅಥವಾ ಇನ್ನು ನೋಂದಾಯಿಸಿಬೇಕಾದÀ ರೈತರು ರಾಗಿ, ಜೋಳ ಸರಬರಾಜಿನ ದಿನಾಂಕವನ್ನು ಖರೀದಿ ಅಧಿಕಾರಿ ನೀಡುವರು. ಅದರಂತೆ ರೈತರು ನೇರವಾಗಿ ಖರೀದಿ ಕೇಂದ್ರಕ್ಕೆ ರಾಗಿ,ಜೋಳ ಸರಬರಾಜು ಮಾಡಬೇಕು. ರಾಗಿ,ಜೋಳವನ್ನು ರೈತರು ಖರೀದಿ ಕೇಂದ್ರಕ್ಕೆ ತಂದಾಗ ರಾಶಿಮಾಡಿ ಗುಣಮಟ್ಟ ಪರಿಶೀಲಿಸಿಕೊಂಡು ಎಫ್.ಎ.ಕ್ಯೂ ಗುಣಮಟ್ಟದ ಧಾನ್ಯ ಮಾತ್ರ ಖರೀದಿಸಲಾಗುವುದು. ಖರೀದಿ ಕೇಂದ್ರಗಳಿಗೆ ತಂದ ಗೋಣಿಚೀಲಗಳನ್ನು ರೈತರು ಹಿಂಪಡೆದುಕೊಳ್ಳಬೇಕು. ರಾಗಿ,ಜೋಳ ಸರಬರಾಜಿನ ಬಗ್ಗೆ ಖರೀದಿ ಅಧಿಕಾರಿ ಖರೀದಿ ರಸೀದಿ ನೀಡಲಿದ್ದಾರೆ ಎಂದಿದ್ದಾರೆ.
ಭತ್ತ ಸರಬರಾಜು ಮಾಡುವ ರೈತರು ಖರೀದಿ ಕೇಂದ್ರಗಳಲ್ಲಿ ನೊಂದಾಯಿಸಿಕೊಂಡ ರೈತರಿಗೆ ಖರೀದಿ ಅಧಿಕಾರಿ ಭತ್ತ ಸರಬರಾಜು ಮಾಡಬೇಕಾದ ಅಕ್ಕಿ ಗಿರಣಿ ವಿವರ ನೀಡುವರು. ಅದರಂತೆ ರೈತರು ಭತ್ತವನ್ನು ತಮಗೆ ನಿಯೋಜಿಸಿರುವ ಅಕ್ಕಿ ಗಿರಣಿಗಳಿಗೆ ನೇರವಾಗಿ ಸರಬರಾಜು ಮಾಡಬೇಕು. ರೈತರು ಭತ್ತ ಸರಬರಾಜು ಮಾಡಬೇಕಾದ ದಿನಾಂಕವನ್ನು ಸಂಬಂಧಿಸಿದ ಅಕ್ಕಿ ಗಿರಣಿಯವರು ನೀಡುವರು. ಅಕ್ಕಿ ಗಿರಣಿಗೆ ರೈತರು ಭತ್ತ ಸರಬರಾಜು ಮಾಡುವಾಗ ಎಫ್.ಎ.ಕ್ಯೂ ಗುಣಮಟ್ಟ ಪರಿಶೀಲಿಸಿ ಭತ್ತ ಖರೀದಿಸಲಾಗುವುದು. ಖರೀದಿಸಿದ ಭತ್ತಕ್ಕೆ ಅಕ್ಕಿ ಗಿರಣಿ ಮಾಲೀಕರು ಖರೀದಿ ರಸೀದಿ ನೀಡುವರು.
ಬೆಂಬಲ ಬೆಲೆ ಯೋಜನೆಯಡಿ ಭತ್ತ,ರಾಗಿ,ಜೋಳ ಸರಬರಾಜು ಮಾಡಿದ ರೈತರಿಗೆ ಅವರು ಕೃಷಿ ಇಲಾಖೆಯಲ್ಲಿ ನೊಂದಾಯಿಸಿಕೊಂಡಿರುವ ಬ್ಯಾಂಕ್ ಖಾತೆಗೆ ಆರ್.ಟಿ.ಜಿ.ಎಸ್ ಮೂಲಕ ಹಣ ಪಾವತಿಸಲಾಗುವುದು.
ಮಧ್ಯವರ್ತಿಗಳು, ಏಜೆಂಟರ್‍ಗಳು ಖರೀದಿ ಕೇಂದ್ರಗಳಿಗೆ ಭತ್ತ,ರಾಗಿ,ಜೋಳವನ್ನು ತಂದಲ್ಲಿ ಅಂತಹವರ ವಿರುದ್ದ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು. ಬೆಂಬಲ ಬೆಲೆ ಯೋಜನೆ ಬಗ್ಗೆ ರೈತರಿಗೆ ಯಾವುದೇ ಸಮಸ್ಯೆಗಳಿದ್ದರೆ ತಾಲ್ಲೂಕಿನ ತಹಸಿಲ್ದಾರ್,ಕೃಷಿ ಅಧಿಕಾರಿ, ಎ.ಪಿ.ಎಂ.ಸಿ ಕಾರ್ಯದರ್ಶಿ, ರೈತ ಸಂಪರ್ಕ ಕೇಂದ್ರಗಳನ್ನು ಸಂಪರ್ಕಿಸಬಹುದಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here