ಸಂಡೂರು ಅಂಗನವಾಡಿ ನೌಕರರು/ಎಐಟಿಯುಸಿ ಮುಖಂಡರಿಂದ ತಹಶೀಲ್ದಾರ್, ಇಓ, ಹಾಗೂ ಸಿಡಿಪಿಓ ಮೂಲಕ ಸರಕಾರಕ್ಕೆ ಮನವಿ

0
403

ಸಂಡೂರು; ಮಾರ್ಚ್.22.ಸಂಡೂರು ಅಂಗನವಾಡಿ ಕಾರ್ಯಕರ್ತೆಯರು/AITUC ಮುಖಂಡರುಗಳು ಇಂದು ತಮ್ಮ ಮೂಲ ಬೇಡಿಕೆಗಳ ಬಗ್ಗೆ ಸಿಡಿಪಿಓ,ಇಓ, ತಹಶೀಲ್ದಾರ್ ಅವರುಗಳಿಗೆ ಸರ್ಕಾರಕ್ಕೆ ಮನವಿಪತ್ರವನ್ನು ಸಲ್ಲಿಸಿದರು.
ಮನವಿ ಪತ್ರದಲ್ಲಿ ವಿವರ ಈ ಕೆಳಗಿನಂತಿದೆ..

ದಿನಾಂಕ 2-3- 2020 ರಂದು ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯ ಕರ್ತೆಯರ ಮತ್ತು ಸಹಾಯಕಿಯರ ಪೆಡ್ರೇಶನ್ ಕರೆಯ ಮೇರೆಗೆ ಬೆಂಗಳೂರು ರೈಲ್ವೆ ನಿಲ್ದಾಣದಿಂದ ಸ್ವಾತಂತ್ರ್ಯ ಉದ್ಯಾನದ ವರೆಗೆ ಹಮ್ಮಿಕೊಳ್ಳಲಾದ ಬೆಂಗಳೂರು ಚಲೋ ಸಂದರ್ಭದಲ್ಲಿ ಸರಕಾರದ ಪರ ಮಾನ್ಯ ಕಂದಾಯ ಸಚಿವರಾದ ಆರ್.ಅಶೋಕ್ ರವರಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಿರ್ದೇಶಕರಿಗೆ ಮನವಿ ಸಲ್ಲಿಸಿ ನಂತರ 3-3- 21ರಂದು ವಿಧಾನಸೌಧ ಸಚಿವರ ಕಾರ್ಯಾಲಯದಲ್ಲಿ ಮಾನ್ಯ ಸಚಿವರ ಅಧ್ಯಕ್ಷತೆಯಲ್ಲಿ ಸಭೆ ನಡೆದ ಬೇಡಿಕೆಗಳ ಬಗ್ಗೆ ಬಜೆಟ್ನಲ್ಲಿ ಪರಿಹಾರ ಸಿಗುವ ಭರವಸೆಯನ್ನು ತಾವುಗಳು ನೀಡಿರುತ್ತೀರಿ ಆದರೆ ದುರಂತವೇನೆಂದರೆ ಕರ್ನಾಟಕ ಸರ್ಕಾರ ಮಾನ್ಯ ಮುಖ್ಯಮಂತ್ರಿಗಳು ಮಹಿಳಾ ದಿನಾಚರಣೆಯಂದೇ ಬಜೆಟ್ ಮಂಡಿಸಿ ಅಂಗನವಾಡಿ ನೌಕರರ ಯಾವೊಂದು ಬೇಡಿಕೆಗಳು ಪರಿಹಾರ ಘೋಷಣೆ ಮಾಡದೇ ಇರುವುದು ದುರದೃಷ್ಟಕರ ಇದನ್ನು ಖಂಡಿಸಿ 15- 3 -21 ರಂದು ರಾಜ್ಯಾದ್ಯಂತ ಪ್ರತಿಭಟನಾ ಮುಷ್ಕರವನ್ನು ಹಮ್ಮಿಕೊಂಡಿದ್ದೆವು ಈ ಸಂದರ್ಭದಲ್ಲಿ ಮತ್ತೊಮ್ಮೆ ವಿನಂತಿಸಿಕೊಳ್ಳುವುದೇನೆಂದರೆ ತಾವು ಮಾನ್ಯ ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ಪ್ರಸಕ್ತ ಅಧಿವೇಶನದಲ್ಲಿ ಪರಿಗಣಿಸುವಂತೆ ಕೋರಲಾಗಿದೆ

ಬೇಡಿಕೆಗಳು:-
1,ಸೇವಾ ಹಿರಿತನ ಆಧಾರದಲ್ಲಿ ಗೌರವಧನ ಹೆಚ್ಚಳ ಮಾಡುವುದು ದೀರ್ಘ ಸೇವೆ ಸಲ್ಲಿಸಿದವರಿಗೆ ಗೋವಾ ರಾಜ್ಯದ ಮಾದರಿಯನ್ನು (ಮಾರ್ಪಾಟುಗಳೊಂದಿಗೆ ) ಜಾರಿ ಮಾಡುವುದು ತಪ್ಪಿದ್ದಲ್ಲಿ ಎಲ್ಲರಿಗೂ ಒಪ್ಪುವಂತಹ ಪ್ರತಿವರ್ಷ ಸೇವೆಗೆ ಇಂತಿಷ್ಟು ಮೊತ್ತ ವೆಂದು ನಿಗದಿಪಡಿಸಿದರೆ. ಅವರವರ ಸೇವಾವಧಿ ಅನುಗುಣವಾಗಿ ಸೌಲಭ್ಯ ಸಿಗಲಿದೆ ಆದ್ದರಿಂದ ದೀರ್ಘ ಸೇವೆ ಸಲ್ಲಿಸಿದವರಿಗೆ ನ್ಯಾಯ ಸಿಗಲಿದೆ.

2,2015ರ ನಂತರ ನಿವೃತ್ತಿಯಾದ 7294 ಕಾರ್ಯಕರ್ತೆಯರಿಗೆ ಮತ್ತು ಸಹಾಯಕಿಯರಿಗೆ ಇಡಿಗಂಟು ನೀಡುವುದು ಹಾಗೂ ನಿವೃತ್ತ ಕಾರ್ಯ ಕರ್ತೆ ಮತ್ತು ಸಹಾಯಕಿಯರಿಗೆ ಕನಿಷ್ಠ ರೂ 5000 ಗಳ ಮಾಸಿಕ ಪಿಂಚಣಿ ಸೌಲಭ್ಯ ನೀಡಬೇಕು

3,ಉಚಿತ ವೈದ್ಯಕೀಯ ಸೌಲಭ್ಯ ಕಲ್ಪಿಸುವ ಇ ಎಸ್ ಐ ಯೋಜನೆ ಸೌಲಭ್ಯ ಜಾರಿ ಮಾಡುವುದು

4,ಅಂಗನವಾಡಿ ಕೇಂದ್ರಗಳಲ್ಲಿ ಎಲ್ ಕೆ ಜಿ -ಯು ಕೆ ಜಿಯನ್ನು ಪ್ರಾರಂಭಿಸಿ ಕಾರ್ಯ ಕರ್ತೆರಿಗೆ ತರಬೇತಿ ನೀಡಿ ಮಕ್ಕಳಿಗೆ ಪಠ್ಯ ಪುಸ್ತಕ ಹಾಗೂ ಸಮವಸ್ತ್ರ ನೀಡಬೇಕು.

5,ಮಿನಿ ಅಂಗನವಾಡಿ ಕೇಂದ್ರಗಳಿಗೆ ಸಹಾಯಕಿಯನ್ನು ನೇಮಕ ಮಾಡುವವರಿಗೆ ಮಿನಿ ಅಂಗನವಾಡಿ ಕೇಂದ್ರದಲ್ಲಿ ಆಹಾರ ತಯಾರಿಸುವುದಿಲ್ಲ

6,ಅಂಗನವಾಡಿ ಕಾರ್ಯಕರ್ತೆಯರ ಆರ್ಡರ್ ಕಾಫಿಯಲ್ಲಿ ತಾತ್ಕಾಲಿಕ ಎನ್ನುವುದು ಕೈಬಿಡಬೇಕು

7,ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಮಿನಿ ಅಂಗನವಾಡಿ ಕಾರ್ಯ ಕರ್ತೆರ ಮತ್ತು ಸಹಾಯಕಿಯರ ಗೌರವಧನ ಅಂತರವನ್ನು ಕಮ್ಮಿ ಮಾಡುವುದು.

ಈ ಮೇಲಿನ ಎಲ್ಲ ಬೇಡಿಕೆಗಳನ್ನು ಪರಿಗಣಿಸಲು ಇಲಾಖೆಯ ಸರ್ಕಾರಕ್ಕೆ ಶಿಫಾರಸು ಮಾಡಿತ್ತು. ಆದರೆ ಸರ್ಕಾರ ಯಾವುದೇ ಬೇಡಿಕೆಯನ್ನು ಬಜೆಟ್ನಲ್ಲಿ ಈಡೇರಿಸಲಿಲ್ಲ. ಆದ್ದರಿಂದ ಮೇಲ್ಕಂಡ ಬೇಡಿಕೆಗಳನ್ನು ಈಡೇರಿಸುವವರೆಗೂ ಇ – ಸಮೀಕ್ಷೆ ಆಪ್ ನಲ್ಲಿ ಪ್ರಥಮವಾಗಿ ಬಿಪಿಎಲ್ ಕಾರ್ಡ್ ಆಧಾರಿತ ಸರ್ವೆ ಬಿಎಲ್ಒ ಸರ್ವೆ ಕೊರೋನಾ ಸರ್ವೆ ಪೋಷಣಾ ಟ್ರ್ಯಾಕ, ಆರೋಗ್ಯ ಇಲಾಖೆ ಸರ್ವೆ ಮನೆಮನೆ ಸಮೀಕ್ಷೆ ಸರ್ವೆ ಭಾಗ್ಯಲಕ್ಷ್ಮಿ ಅರ್ಜಿ ಮಾತೃವಂದನಾ ಅರ್ಜಿ ಎಂ ಪಿ ಆರ್ ವರದಿ ಶಾಲೆ ಬಿಟ್ಟ ಮಕ್ಕಳ ಸರ್ವೆ ಹಾಗೂ ಇನ್ನಿತರ ಯಾವುದೇ ವರದಿಯನ್ನು ಅಂಗನವಾಡಿ ಕಾರ್ಯಕರ್ತೆಯರು ಇಲಾಖೆ ಸರ್ಕಾರಕ್ಕೆ ಕೊಡುವುದಿಲ್ಲ

ರಾಜ್ಯ ಸರ್ಕಾರ ಬಜೆಟ್ ನಲ್ಲಿ ಕಾರ್ಯಕರ್ತೆ ಹಾಗೂ ಸಹಾಯಕಿಯರಿಗೆ ಬಿಡಿಗಾಸನ್ನು ಕೊಡದೆ ಅನ್ಯಾಯ ಮಾಡಿದೆ ಇಲಾಖೆಯ ಶಿಫಾರಸು ಮಾಡಿರುವ ಬೇಡಿಕೆಗಳನ್ನು ಈಡೇರಿಸುವವರೆಗೂ ಇಲಾಖೆಯ ಕೊಡುವ ಯಾವುದೇ ವರದಿಗಳನ್ನು ಸಲ್ಲಿಸಿದಂತೆ ತೀರ್ಮಾನದಂತೆ ಪ್ರತಿಭಟನೆ ಕರೆ ನೀಡಿದ್ದೇವೆ ಎಂದು ಮಾನ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಸಂಡೂರು ತಾಲೂಕು ಪಂಚಾಯತ್ ಮತ್ತು
ಮಾನ್ಯ ತಹಶೀಲ್ದಾರ್ ಮೇಡಂ ಅವರಿಗೂ ಮತ್ತು ಅಭಿವೃದ್ಧಿ ಯೋಜನಾಧಿಕಾರಿ ಗಳಿಗೆ ಮನವಿ ಸಲ್ಲಿಸಲಾಯಿತು

ಶಾಲೆ ಬಿಟ್ಟ ಮಕ್ಕಳ ಸರ್ವೆ ಮಾಡುವುದು ಬಹಳ ಒತ್ತಡ ವಾಗಿರುವುದರಿಂದ ನಾವು ಈ ಮೂವರ ತಾಲೂಕು ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು

ಮೊದಲು ಮನವಿ ಸಲ್ಲಿಸಿದ ಪತ್ರಿಗಳು
1, ಈ ಹಿಂದೆ ಕೂಡ ಮಾನ್ಯ ಸಚಿವರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕರ್ನಾಟಕ ಸರ್ಕಾರ
2, ಮಾನ್ಯ ಆಯುಕ್ತರು ಬಳ್ಳಾರಿ ಮಹಾನಗರ ಪಾಲಿಕೆ ಬಳ್ಳಾರಿ
3, ಉಪನಿರ್ದೇಶಕರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಬಳ್ಳಾರಿ
4, ಮಾನ್ಯ ಜಿಲ್ಲಾಧಿಕಾರಿಗಳಿಗೆ
5, ಮಾನ್ಯ ತಹಶೀಲ್ದಾರರು ಸಂಡೂರು
6, ಮಾನ್ಯ ಶಿಶು ಅಭಿವೃದ್ಧಿ ಅಧಿಕಾರಿಗಳು ಸಂಡೂರು

ನಮ್ಮ ಪ್ರತಿಭಟನೆಗೆ ಅಧಿಕಾರಿಗಳು ಸ್ಪಂದಿಸಬೇಕು ಎಂದು ಮನವಿ ಪತ್ರದಲ್ಲಿ ಎಐಟಿಯುಸಿ ನ ಮುಖಂಡರು ಹಾಗೂ ನೌಕರರು ಮನವಿ ಮಾಡಿಕೊಂಡಿದ್ದಾರೆ.

ಈ ಸಂಧರ್ಭದಲ್ಲಿ ಅಧ್ಯಕ್ಷರಾದ ಜಿ.ನಾಗರತ್ನಮ್ಮ, ಕಾರ್ಯದರ್ಶಿಯಾದ ಜಿ.ಈರಮ್ಮ ತಾಲೂಕು ಮುಖಂಡರಾದ ಟಿ.ಕವಿತಾ, ಗಂಗಮ್ಮ, ಚಂದ್ರಕಲಾ, ಮೀನಾಕ್ಷಿ, ತಾಯಕ್ಕ, ವೆಂಕಟಲಕ್ಷ್ಮಿ, ಪೂರ್ಣಿಮಾ, ಇತರರು ಉಪಸ್ಥಿತರಿದ್ದರು.

ವರದಿ:- ಗಂಡುಗಲಿ ಗೋಪಾಲ್

LEAVE A REPLY

Please enter your comment!
Please enter your name here