ಕಾಮ್ರೇಡ್ ಮಂಜುಳಾ ಹವಾಲ್ದಾರ್ (55 ವರ್ಷ) ಇನ್ನಿಲ್ಲ.

0
88

ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಒಕ್ಕೂಟದ ರಾಜ್ಯ ಸಂಘಟನಾ ಕಾರ್ಯದರ್ಶಿಯಾಗಿದ್ದ ಕಾಮ್ರೇಡ್ ಮಂಜುಳಾ ರವರು ಕೊರೊನಾ ದಿಂದ ನೆನ್ನೆ ರಾತ್ರಿ ದಿನಾಂಕ: 5.5.2021ರಂದು ಸರ್ಕಾರಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಶ್ವಾಸಕೋಶದ ಸೋಂಕಿನ ಕಾರಣ ಅವರಿಗೆ ಆಸ್ಪತ್ರೆ ಅವಶ್ಯವಿತ್ತು. ಆದರೆ, ಸಕಾಲದಲ್ಲಿ ಹಾಸಿಗೆ ಆಕ್ಸಿಜನ್ ಸಿಗದೇ ಕೊನೆಗೆ ಹರಪನಹಳ್ಳಿಯ ಸರ್ಕಾರಿ ಆಸ್ಪತ್ರೆಯಲ್ಲಿ ಸೇರಿಸಲಾಗಿತ್ತು.

ಹಗರಿಬೊಮ್ಮನಹಳ್ಳಿಯ ತಂಬ್ರಹಳ್ಳಿಯವರಾದ ಅವರು ವಿದ್ಯಾರ್ಥಿ ಜೀವನದಿಂದಲೂ ಹಲವು ಹೋರಾಟಗಳಲ್ಲಿ ಭಾಗಿಯಾಗುತ್ತಾ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕ ವೃತ್ತಿಗೆ ಸೇರಿದ ನಂತರವೂ ಜನವಾದಿ ಮಹಿಳಾ ಸಂಘಟನೆಯಲ್ಲೂ ಸಕ್ರಿಯರಾಗಿದ್ದರು.

ನೌಕರರ ಒಕ್ಕೂಟದಲ್ಲಿ ದಶಕಕ್ಕೂ ಹೆಚ್ಚು ಕಾಲ ಹಗರಿಬೊಮ್ಮನಹಳ್ಳಿ ವ್ಯಾಪ್ತಿಯಲ್ಲಿ ಸಂಘಟನೆ ಕಟ್ಟಲು ಶ್ರಮಿಸಿದ್ದರು.
ರಾಜ್ಯ ಮಹಿಳಾ ಉಪಸಮಿತಿ ಸದಸ್ಯರಾಗಿದ್ದ ಅವರು ಇತ್ತೀಚೆಗೆ ದಾವಣಗೆರೆ ಕೊಂಡಜ್ಜಿಯಲ್ಲಿ ನಡೆದ ರಾಜ್ಯ ಸಮ್ಮೇಳನದಲ್ಲಿ ಸಂಘಟನಾ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದರು.

ಕಾಮ್ರೇಡ್ ಮಂಜುಳಾ ರವರ ಮೊದಲ ಮಗಳು ಅನುಪಮಾ ಜೈವಿಕರಸಾಯನ ವಿಜ್ಞಾನದಲ್ಲಿ ಪಿಹೆಚ್.ಡಿ ಪಡೆದು ಫ್ರಾನ್ಸಿನ ಮೇಡಂ ಮೇರಿ ಕ್ಯೂರಿ ವಿಶ್ವವಿದ್ಯಾನಿಲಯದಲ್ಲಿ ಉಪನ್ಯಾಸಕರಾಗಿದ್ದಾರೆ. ಎರಡನೇ ಮಗಳು ಪೂರ್ಣಿಮಾ ಅದೇ ವಿಷಯದಲ್ಲಿ ವ್ಯಾಸಂಗ ಮುಗಿಸಿ ಬೆಂಗಳೂರಿನಲ್ಲಿ ಉಪನ್ಯಾಸಕರಾಗಿದ್ದಾರೆ.

ಕಾಮ್ರೇಡ್ ಮಂಜುಳಾರವರ ಅಕಾಲಿಕ ಮರಣ ಅವರ ಕುಟುಂಬ ವರ್ಗಕ್ಕೆ ಮಾತ್ರವಲ್ಲ, ನೌಕರರ ಒಕ್ಕೂಟ ಮತ್ತು ಜನಪರ ಚಳುವಳಿಗೆ ತುಂಬಲಾರದ ನಷ್ಟವಾಗಿದೆ.

ಈ ಸಂದರ್ಭದಲ್ಲಿ ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಒಕ್ಕೂಟವು ಕಾಮ್ರೇಡ್ ಮಂಜುಳಾ ರವರ ಕುಟುಂಬ ವರ್ಗದವರಿಗೆ ಸಾಂತ್ವನ ಹೇಳಬಯಸುತ್ತದೆ ಮತ್ತು ಕಾಮ್ರೇಡ್ ಮಂಜುಳಾ ರವರಿಗೆ ಕ್ರಾಂತಿಕಾರಿ ನಮನಗಳನ್ನು ಸಲ್ಲಿಸುತ್ತದೆ.

LEAVE A REPLY

Please enter your comment!
Please enter your name here