ಅಗ್ನಿ ದುರಂತಗಳು,ಅಗ್ನಿ ಅನಾಹುತಗಳು ತಡೆಯುವಿಕೆ ಕಾರ್ಯಾಗಾರ

0
72

ಬಳ್ಳಾರಿ,ಫೆ.24 ; ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ವಲ್ಡ್ ವಿಷನ್ ಮತ್ತು ಅಗ್ನಿಶಾಮಕ ಇಲಾಖೆ ಸಂಯುಕ್ತಾಶ್ರಯದಲ್ಲಿ ಅಗ್ನಿ ದುರಂತಗಳ ಬಗ್ಗೆ ಅರಿವು ಮತ್ತು ಅಗ್ನಿ ಅನಾಹುತಗಳು ತಡೆಯುವ ದಿನಾಚಾರಣೆ ನಿಮಿತ್ತ ಒಂದು ದಿನದ ವಿಶೇಷ ಕಾರ್ಯಗಾರವು ರೆಡ್ ಕ್ರಾಸ್ ಕಚೇರಿಯ ಸಭಾಂಗಣದಲ್ಲಿ ಮಂಗಳವಾರ ನಡೆಯಿತು.
.2010ರ ಫೆ.23ರಂದು ಬೆಂಗಳೂರು ನಗರದ ಕಾಲ್ಟನ್ ಟೋವರ್ ನಲ್ಲಿ ನಡೆದ ಅಗ್ನಿದುಂತದಲ್ಲಿ ಅನೇಕ ಜನರ ಪ್ರಾಣವನ್ನು ಕಳೆದುಕೊಂಡವರ ನನಪಿನಲ್ಲಿ ಈ ದಿನಚಾರಣೆಯನ್ನು ಆಚರಿಸಲಾಗುತ್ತಿದೆ.
ಪ್ರಥಮ ಚಿಕಿತ್ಸೆ, ಅಗ್ನಿ ದುರಂತಗಳ ಬಗ್ಗೆ ವಿಶೇಷವಾಗಿ ಅರಿವು ಮೂಡಿಸಲಾಯಿತು. ಈ ಕಾರ್ಯಗಾರದಲ್ಲಿ ಬಳ್ಳಾರಿ ತಾಲೂಕಿನ ಸುಮಾರು 27 ಹಳ್ಳಿಗಳ ಗ್ರಾಮ ಪಂಚಾಯತಿ ಸದಸ್ಯರುಗಳು ತರಬೇತಿ ಪಡೆದರು.
ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕಾರ್ಯದರ್ಶಿಗಳಾದ ಎಂ.ಎ.ಷಕೀಬ್ ಮತ್ತು ಸರ್ವ್ ತರಬೇತುದಾರರಾದ ಬೇಪಾರ್ ಮಹಮ್ಮದ್ ಇಜಾಜ್ ಅವರು ತರಬೇತುದಾರರಿಗೆ ವಿಶೇಷ ಉಪನ್ಯಾಸವನ್ನು ನೀಡಿದರು.
ಕಾರ್ಯಗಾರದಲ್ಲಿ ಬಸವರಾಜ, ಅಗ್ನಿಶಾಮಕ ಅಧಿಕಾರಿಗಳು, ವಲ್ಡ್ ವಿಷನ್‍ನ ಪ್ರೇಮಲತಾ, ಪ್ರೋಜೆಕ್ಟ್ ಆಫೀಸರ್, ವಿವಿಧ ಗ್ರಾಮಗಳ ಸದಸ್ಯರು ಮತ್ತು ಇತರರು ಇದ್ದರು.

LEAVE A REPLY

Please enter your comment!
Please enter your name here