ಬಳ್ಳಾರಿಯ ಎಐಡಿಎಸ್ಓ,ಎಐಡಿವೈಓ ಮತ್ತು ಎಐಎಂಎಸ್ಎಸ್ ಸಂಘಟನೆಗಳ ವತಿಯಿಂದ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿಪತ್ರ ಸಲ್ಲಿಕೆ

0
136

ಬಳ್ಳಾರಿ:ಆಗಸ್ಟ್:28;ದಿನಾಂಕ:೨೭-೦೮-೨೦೨೧ ರಂದು ಬಳ್ಳಾರಿಯ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಎಐಡಿಎಸ್ಒ, ಎಐಡಿವೈಒ ಮತ್ತು ಎಐಎಂಎಸ್ಎಸ್ ಸಂಘಟನೆಗಳ ವತಿಯಿಂದ ಪ್ರತಿಭಟನೆ ನಡೆಸಿ ಮಾನ್ಯ ಜಿಲ್ಲಾಧಿಕಾರಿಗಳ ಮೂಲಕ ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿಪತ್ರ ಸಲ್ಲಿಸಲಾಯಿತು.
ಎಐಎಂಎಸ್ಎಸ್ ಜಿಲ್ಲಾಧ್ಯಕ್ಷರಾದ ಎ.ಶಾಂತಾ ಮಾತನಾಡಿ ಮೈಸೂರಿನಲ್ಲಿ ಹಾಡಹಗಲೇ ಡಕಾಯಿತಿ ನಡೆಸಿ ಶೂಟೌಟ್ ಮಾಡಿದ ಪ್ರಕರಣವು ಜನರ ಮನಸ್ಸಿನಿಂದ ಮಾಸುವ ಮುಂಚೆಯೇ, ವಿದ್ಯಾರ್ಥಿನಿಯ ಮೇಲೆ ಸಾಮೂಹಿಕ ಅತ್ಯಾಚಾರ ನಗರದಲ್ಲಿ ನಡೆದಿರುವುದು ಜನತೆಯನ್ನು ಬೆಚ್ಚಿಬೀಳಿಸಿದೆ. ನಿಮಗೆ ತಿಳಿದಿರುವಾಗೆ ಚಾಮುಂಡಿಬೆಟ್ಟದ ತಪ್ಪಲಿನಲ್ಲಿ ವಿದ್ಯಾರ್ಥಿನಿಯೊಬ್ಬಳು, ತನ್ನ ಸ್ನೇಹಿತನೊಂದಿಗೆ ವಾಹನದಲ್ಲಿ ಹೋಗುತ್ತಿರವಾಗ ಪುಂಡರ ಗುಂಪೊಂದು ಅವರನ್ನು ಅಡ್ಡಗಟ್ಟಿ, ಸ್ನೇಹಿತನ ಮೇಲೆ ದಾಳಿ ನಡೆಸಿ, ವಿದ್ಯಾರ್ಥಿನಿಯ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿದ್ದಾರೆ. ಈ ಘಟನೆಯಲ್ಲಿ ಅತ್ಯಾಚಾರ ಮಾಡಿರುವ ಅಪರಾಧಿಗಳನ್ನು ಈ ಕೂಡಲೇ ಪತ್ತೆ ಹಚ್ಚಿ ಅವರಿಗೆ ನಿದರ್ಶನೀಯಾ ಶಿಕ್ಷೆ ನೀಡಬೇಕೆಂದು ಆಗ್ರಹಿಸಿದರು. ಎಐಡಿಎಸ್ಒ ಜಿಲ್ಲಾಧ್ಯಕ್ಷರಾದ ಗುರಳ್ಳಿ ರಾಜ ಮಾತನಾಡಿ, ಕಾಲೇಜು ವಿದ್ಯಾರ್ಥಿನಿಯರು ಪ್ರೇಕ್ಷಣೀಯಾ ಸ್ಥಳಗಳಿಗೆ ಹೋದಾಗ ಹುಡುಗರು ಹಿಂಬಾಲಿಸುವುದು ಹಾಗೂ ಚುಡಾಯಿಸುವುದು ಎಲ್ಲೆಡೆ ನಡೆಯುತ್ತಲೇ ಇದೆ. ಹಾಗಾಗಿ ಇಂತಹ ನಿರ್ಬಿಡ ಸ್ಥಳಗಳಲ್ಲಿ ಪೊಲೀಸ್ ವಾಹನದ ಗಸ್ತು ಆಗಬೇಕು. ಒಂದೆಡೆ ಮೈಸೂರು ಶಿಕ್ಷಣಿಕ ಕೇಂದ್ರವಾಗಿದ್ದು, ಬೇರೆ ರಾಜ್ಯಗಳಿಂದ ವಿದ್ಯಾರ್ಥಿನಿಯರು ವಿದ್ಯಾಭ್ಯಾಸಕ್ಕೆ ಬರುತ್ತಾರೆ. ಮತ್ತೊಂದೆಡೆ ಇಂತಹ ಘಟನೆಗಳಿಂದ ಪೋಷಕರು ಅವರ ವಿದ್ಯಾಭ್ಯಾಸಕ್ಕಾಗಿ ಇಲ್ಲಿಗೆ ಕಳುಹಿಸಿಲು ಹಿಂದದೇಟಾಕಬಹುದು, ಕೆಲವರು ಶಿಕ್ಷಣವನ್ನೇ ಮೊಟಕುಗೊಳಿಸಬಹುದು. ವಿದ್ಯಾರ್ಥಿನಿ-ಮಹಿಳೆಯರ ಮೇಲಿನ ಅಪರಾಧಗಳ ಸಂಖ್ಯೆ ಹೆಚ್ಚಾಗುತ್ತಿರುವುದು ಆತಂಕಕಾರಿಯಾಗಿದೆ. ಆದ್ದರಿಂದ ಇಂತಹ ಘಟನೆಗಳು ಮತ್ತೆ ಮರುಕಳಿಸಿದಂತೆ ಆಡಳಿತವರ್ಗವು ಹಾಗೂ ಪೊಲೀಸ್ ಇಲಾಖೆ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು. ಎಲ್ಲ ವಿದ್ಯಾರ್ಥಿನಿಯರಿಗೂ ಸೂಕ್ತವಾದ ಭದ್ರತೆಯನ್ನು ಒದಗಿಸಬೇಕು ಎಂದು ಎಐಡಿಎಸ್ಒ, ಎಐಡಿವೈಒ ಮತ್ತು ಎಐಎಂಎಸ್ಎಸ್ ಬಳ್ಳಾರಿ ಜಿಲ್ಲಾ ಸಮಿತಿಗಳು ಸರ್ಕಾರಕ್ಕೆ ಆಗ್ರಹಿಸಿದವು.
ಬೇಡಿಕೆಗಳು:
1.ಅಪರಾಧಿಗಳನ್ನು ಕೂಡಲೇ ಪತ್ತೆ ಹಚ್ಚಿ ನಿದರ್ಶನೀಯಾ ಶಿಕ್ಷೆಯನ್ನು ನೀಡಬೇಕು.
2.ಪೊಲೀಸ್ ವಾಹನದ ಗಸ್ತು ಅವಶ್ಯಕತೆ ಇರುವ ಕಡೆ ಮಾಡಬೇಕು.
3.ವಿದ್ಯಾರ್ಥಿನಿಯರಿಗೆ ಸೂಕ್ತ ಭದ್ರತೆಯನ್ನು ಒದಗಿಸಬೇಕು.
4.ಜಸ್ಟೀಸ್ ವರ್ಮ ಆಯೋಗದ ಶಿಫಾರಸುಗಳನ್ನು ಜಾರಿಗೊಳಿಸಿ.
5.ಅಶ್ಲೀಲ‌ ಸಿನಿಮಾ ಸಾಹಿತ್ಯಗಳನ್ನು ನಿಶೇಧಿಸಿ.

ವಂದನೆಗಳೊಂದಿಗೆ,

ಪ್ರತಿಭಟನೆಯ ಅಧ್ಯಕ್ಷತೆ ಯನ್ನು ಎಐಡಿವೈಒ ಜಿಲ್ಲಾ ಕಾರ್ಯದರ್ಶಿಗಳಾದ ಜಗದೀಶ್ ನೇಮಕಲ್ ವಹಿಸಿದ್ದರು. ಕಾರ್ಯಕರ್ತರುಗಳಾದ ಈಶ್ವರಿ.ಕೆ ಎಂ, ವಿಜಯಲಕ್ಷ್ಮಿ, ಈರಣ್ಣ, ವಿದ್ಯಾವತಿ, ರೇಖಾ, ಶಾಂತಿ, ಸಿದ್ದು ಇನ್ನಿತರರು ಹಾಗೂ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ವರದಿ:-ಮಹೇಶ್

LEAVE A REPLY

Please enter your comment!
Please enter your name here