ವಿಎಸ್‍ಕೆ ವಿವಿಯಲ್ಲಿ ಉದಯೋನ್ಮುಖ ಪರಿಸರದಲ್ಲಿ ಸಾಮಾಜಿಕ ಕಾರ್ಯದ ಪಾತ್ರ ವಿಶೇಷ ಉಪನ್ಯಾಸ; ಗ್ರಾಮೀಣ ಜೊತೆಗೆ ನಗರೀಕರಣದಲ್ಲಾಗುತ್ತಿರುವ ಸಮಸ್ಯೆಗಳಿಗೆ ಹೆಚ್ಚಿನ ಆದ್ಯತೆ ನೀಡಿ: ಅಶ್ವಿನಿ ಸಕ್ಸೇನಾ

0
115

ಬಳ್ಳಾರಿ,ಫೆ.23 : ಜಾಗತೀಕರಣವು ಒಂದು ವ್ಯಾಪಕವಾದ ಪರಿಕಲ್ಪನೆಯಾಗಿದೆ. ಅದು ಇಂದು ಜಗತ್ತನ್ನು ಆಳುತ್ತಿದೆ. ಸ್ವಾತಂತ್ರ ಪೂರ್ವದಲ್ಲಿ ಶೇ.15ರಷ್ಟಿದ್ದ ನಗರೀಕರಣವು ಇಂದು ಶೇ.52ರಷ್ಟಿದೆ. ಸಾಮಾಜಿಕ ಕೆಲಸ ವಿದ್ಯಾರ್ಥಿಗಳಾದ ನಾವು ಗ್ರಾಮೀಣ ಭಾಗದ ಸಮಸ್ಯೆಗಳ ಜೊತೆಗೆ ನಗರೀಕರಣದಲ್ಲಾಗುವ ಸಮಸ್ಯೆಗಳಿಗೆ ಹೆಚ್ಚು ಆದ್ಯತೆ ಕೊಡಬೇಕು ಎಂದು ಜೆಎಸ್‍ಡಬ್ಲು ಫೌಂಡೆಶೆನ್‍ನ ಸಿಇಓ ಅಶ್ವಿನಿ ಸಕ್ಸೇನಾ ಅವರು ಹೇಳಿದರು.
ನಗರದ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಅಂಬೇಡ್ಕರ್ ಸಭಾಂಗಣದಲ್ಲಿ ನಡೆದ ಉದಯೋನ್ಮುಖ ಪರಿಸರದಲ್ಲಿ ಸಾಮಾಜಿಕ ಕಾರ್ಯದ ಪಾತ್ರ ವಿಶೇಷ ಉಪನ್ಯಾಸದಲ್ಲಿ ಅವರು ಮಾತನಾಡಿದರು.

ಜಾಗತೀಕರಣವು ಆರ್ಥಿಕ ಸಂಧರ್ಭದಲ್ಲಿ ಉಪಯೋಗಿಸಿದಾಗ ಸರಕುಗಳು, ಬಂಡವಾಳ, ಆರೋಗ್ಯ, ಕೃಷಿ, ಸೇವೆ ಮತ್ತು ನಗರೀಕರಣ ಕುರಿತಾಗಿದೆ. ಇನ್ನೊಂದು ಸಂದರ್ಭದಲ್ಲಿ ಆರ್ಥಿಕ ಬೆಳವಣಿಗೆಯ ಉದ್ಯಮ ಹಂತವನ್ನು ಬಯಸುತ್ತದೆ. ಜಾಗತಿಕ ಹವಾಮಾನದ ಸವಾಲುಗಳಾದ ಹವಾಮಾನ ಬದಲಾವಣೆ ಒಳ್ಳೆಯ ಬೆಳವಣಿಗೆಯಲ್ಲ. ಅದು ವೈಯಕ್ತಿಕ ಸ್ವಾತಂತ್ರ್ಯಕ್ಕಿರುವ ನಿರ್ಬಂದವನ್ನು ಕಡಿಮೆ ಮಾಡುತ್ತದೆ. ವ್ಯಕ್ತಿಗಳು ಪರಸ್ಪರ ಭಾಗಿಯಾಗುವ ಮೂಲಕ ಅತ್ಯುತ್ತಮ ಸಮಾಜ ನಿರ್ಮಾಣವನ್ನು ಮಾಡಬೇಕಾಗಿದೆ. ಪ್ರಸ್ತುತ ದಿನಗಳಲ್ಲಿ ನಾವು ಅವುಗಳ ಮೇಲೆ ಜಾಗೃತಿವಹಿಸಬೇಕಾಗಿದೆ ಎಂದರು.

ಜೆಎಸ್‍ಡಬ್ಲು ಫೌಂಡೆಶೆನ್‍ನ ವಿಶೇಷ ಯೋಜನೆಯ ಮುಖ್ಯ ಅಧಿಕಾರಿ ಡಾ. ವಿನೋದಕುಮಾರ ಪುರೋಹಿತ್ ಅವರು ಮಾತನಾಡಿ,ಪ್ರಸ್ತುತ ದಿನಮಾನದಲ್ಲಿ ನಮ್ಮನ್ನು ನಾವು ಸಮಯ, ಸಂದರ್ಭಕ್ಕೆ ತಕ್ಕ ಹಾಗೆ ಅಭಿವೃದ್ಧಿಗೆ ಮಾರ್ಪಡಿಸಿಕೊಳ್ಳಬೇಕಾಗಿದೆ. ಒಂದೆ ಉದ್ಯೋಗ ಆಧಾರಿತ ಕೆಲಸದ ಅವಲಂಬನೆಯಾಗದೆ ಎಲ್ಲ ಕ್ಷೇತ್ರದಲ್ಲೂ ಬೆಳವಣಿಗೆಯಾಗಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಸಿದ್ದು ಪಿ ಆಲಗೂರ ಮಾತನಾಡಿ, ರಾಷ್ಟ್ರೀಯ ಶಿಕ್ಷಣ ನೀತಿಯ ಮಹತ್ವಾಕಾಂಕ್ಷೆಯಂತೆ ಬಹುಶಿಸ್ತೀಯ ಕಲಿಕೆ ಹಾಗೂ ಕೈಗಾರಿಕೆಗಳ ಸಹಯೋಗ, ಇಂಟರ್‍ನಶೀಪ್‍ನ ಜ್ಞಾನ ಹಾಗೂ ಕಲಿಕೆಯ ವಿಧಾನಗಳು ಬಹು ಮುಖ್ಯವಾದ ಕೌಶಲ್ಯವಾಗಿದೆ. ಇದು ವಿದ್ಯಾರ್ಥಿಗಳ ಪರಿಪೂರ್ಣ ಅಭಿವೃದ್ಧಿಯ ಭಾಗವಾಗಿದೆ ಎಂದು ಹೇಳಿದರು

ಕಾರ್ಯಕ್ರಮದಲ್ಲಿ ವಿವಿಯ ಕುಲಸಚಿವರಾದ ಪ್ರೊ. ಎಸ್ ಸಿ ಪಾಟೀಲ್, ವಿತ್ತಾಧಿಕಾರಿಗಳಾದ ಡಾ. ಕೆ.ಸಿ.ಪ್ರಶಾಂತ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿವಿಧ ನಿಕಾಯಗಳ ಡೀನರು, ವಿವಿಧ ವಿಭಾಗಗಳ ಮುಖ್ಯಸ್ಥರು, ಸಂಯೋಜಕರು, ಸಂಶೋಧನಾ ವಿದ್ಯಾರ್ಥಿಗಳು, ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.

LEAVE A REPLY

Please enter your comment!
Please enter your name here