ಎಂತಹುದೇ ಕ್ಲಿಷ್ಟಕರ ಸಂದರ್ಭದಲ್ಲಿಯೂ ಜನಮನದ ದನಿಯಾಗುವೆವು : ಆನಂದಣ್ಣ ಯಂಗ್ ಬ್ರಿಗೆಡ್ ಅಧ್ಯಕ್ಷ ಕರವೇ ಕಿರಣ್

0
103

ಶಿವಮೊಗ್ಗ : ನಗರದಲ್ಲಿ ವಿವಿಧ ಹಂತಗಳಲ್ಲಿ ಪರಿಸ್ಥಿತಿಗಳ ಅನುಸಾರವಾಗಿ ಹಸಿವು ಹಾಗೂ ಜೈವಿಕತೆ ವ್ಯಾಪಿಸುವುದರ ವಿರುದ್ದ ಜನಸೇವೆಗೆ ಸ್ವಯಂ ಪ್ರೇರಿತವಾಗಿ ರಾಜ್ಯಸರ್ಕಾರದ ಮಾರ್ಗಸೂಚಿ ಅನ್ವಯವೇ ತೊಡಗಿಸಿಕೊಳ್ಳುತ್ತೇವೆ ಎಂದು ಶನಿವಾರ ಬೆಳಿಗ್ಗೆ ಸೂರ್ಯಗಗನ ಪತ್ರಿಕಾ ಕಾರ್ಯಾಲಯದ ಎದುರು “ಅಹಾರ ಕಿಟ್” ವಿತರಿಸಿ ಕರವೇ ಕಿರಣ್ ಮಾತನಾಡುತ್ತಿದ್ದರು.
ಅವರು ಈ ಸಂದರ್ಭದಲ್ಲಿ ಮಾತನಾಡಿ ಕೊರೋನಾ ವೈರಸ್ ದೇಶದಲ್ಲಿ ಕಾಡುತ್ತಿರುವ ಹಿನ್ನಲೆಯಲ್ಲಿ ರಾಜ್ಯ ಅತೀ ಸಂಕಷ್ಠದ ಸ್ಥಿತಿಗೆ ಬಂದು ತಲುಪಿದೆ ಈಗಾಗಲೇ ಕಟ್ಟುನಿಟ್ಟಿನ ಕ್ರಮಕ್ಕಾಗಿ ಲಾಕ್ಡೌನ್ ವಿಧಿಸಲಾಗಿದೆ ಈ ಸಂದರ್ಭದಲ್ಲಿ ಜೀವನ ಕ್ಲಿಷ್ಕಕರವಾಗಿದೆ.
ಹೀಗಾಗಿ ಕರವೇ ಯುವಸೇನೆ ಹಾಗೂ ಆನಂದಣ್ಣ ಯಂಗ್ ಬ್ರಿಗೆಡ್ ವತಿಯಿಂದ ಮೊದಲ ಹಂತದಲ್ಲಿ ವಿವಿಧ ರಂಗಗಳು ಹಾಗೂ ಶ್ರಮಿಕ ವರ್ಗದ ತಲಾ ಐದು ಜನರಂತೆ ವಿಶೇಷವಾಗಿ ಸಿದ್ದಗೊಳಿಸಲಾದ “ಪುಡ್ ಕಿಟ್” ಗಳನ್ನು ವಿತರಿಸಲಾಗುತ್ತಿದೆ ಎಂದು ಕರವೇ ಯುವಸೇನೆಯ ಜಿಲ್ಲಾಧ್ಯಕ್ಷರಾದ ಕರವೇ ಕಿರಣ್ ತಿಳಿಸಿದರು, ಈ ಸಂದರ್ಭದಲ್ಲಿ ಕರವೇ ಶಿವಕುಮಾರ್, ಗಣೇಶ್, ಆಟೋ ಜಯಪ್ಪ ಸೇರಿದಂತೆ ಪತ್ರಕರ್ತರುಗಳಾದ ಗಾರಾ.ಶ್ರೀನಿವಾಸ್. ಷಡಾಕ್ಷರಿ, ಸುರೇಂದ್ರ ಬಿ.ಟಿವಿ ವರದಿಗಾರರಾದ ಅನಿಲ್, ಪತ್ರಿಕಾ ಹಂಚಿಕೆದಾರರಾದ ಮಾಲತೇಶ್. ವರದಿಗಾರರು ಹಾಗೂ ಡಿಟಿಪಿ ಆಪರೇಟರ್ ರೂಪರವರುಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here