ಬೂತಲದಿನ್ನಿ ಗ್ರಾಮದ ಜಾಮಿಯಾ ಮಸೀದಿ ಆವರಣದಲ್ಲಿ ಪಕ್ಷಿಗಳಿಗೆ ನೀರಿನ ಅರವಟ್ಟಿಗೆ ಕಟ್ಟಿ, 108 ಸಸಿ ನೆಡುವ ಕಾರ್ಯಕ್ಕೆ ಚಾಲನೆ

0
219

ಜಗಜ್ಯೋತಿ ಬಸವೇಶ್ವರರ ಜಯಂತಿ ಹಾಗೂ ರಂಜಾನ್ ಹಬ್ಬದ ಅಂಗವಾಗಿ ವನಸಿರಿ ಫೌಂಡೇಶನ್ ವತಿಯಿಂದ ಸಿಂಧನೂರು ತಾಲೂಕಿನ ಬೂತಲದಿನ್ನಿ ಗ್ರಾಮದ ಜಾಮಿಯಾ ಮಸೀದಿ ಆವರಣದಲ್ಲಿರುವ ಗಿಡಗಳಿಗೆ ಮಣ್ಣಿನ ಮಡಿಕೆ ಕಟ್ಟಿ, ಮೂಕ ಪಕ್ಷಿಗಳಿಗೆ ನೀರುಣಿಸುವ ಕಾಯಕ ಜೊತೆಗೆ ಹಳ್ಳಿ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ 21 ಸಸಿ ನೆಟ್ಟು ಜೊತೆಗೆ 108 ಸಸಿ ನೆಡುವ ಕಾಯಕಕ್ಕೆ ಚಾಲನೆ ಕೊಡಲಾಯಿತು.

ಶಿವುಕುಮಾರ್ ಹಿರೇಮಠ್ ಬೆಂಗಳೂರು ಅವರ ಸಹಕಾರದೊಂದಿಗೆ ಈ ಕಾರ್ಯಕ್ಕೆ ಭೂತಲದಿನ್ನಿ ಗ್ರಾಮದ ಯುವಕರ ಕೈಜೋಡಿಸಿದರು. ಈ ಸಂದರ್ಭದಲ್ಲಿ ಅಮರೇಗೌಡ ಮಲ್ಲಾಪುರ್ ವನಸಿರಿ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ, ಶೆಕ್ಷಾವಲಿ ಪ್ರಾಂಶುಪಾಲರು ಶಂಕರ ಟ್ರಸ್ಟ್ ಕಾಲೇಜ್,ಮುತ್ತು ಪಟೇಲ್, ಗಪೂರ್ ಸಾಬ್ ಮಾಜಿ ಗ್ರಾಮ ಪಂಚಾಯತಿ ಸದಸ್ಯ, ಪ್ರದೀಪ್ ಪೂಜಾರಿ, ವೀರೇಶ್ ಮಲ್ಲಾಪುರ್, ವೀರೇಶ್ jk, ಬಸವರಾಜ್ pwd ಕ್ಯಾಂಪ್, ಶರಣಯ್ಯ, ಸಿದ್ದನಗೌಡ, ನಾಗರಾಜ ಪೂಜಾರಿ, ಇನ್ನು ಮುಂತಾದ ಯುವಕರಿದ್ದರು.

ವರದಿ: ಅವಿನಾಶ ದೇಶಪಾಂಡೆ

LEAVE A REPLY

Please enter your comment!
Please enter your name here