ಸಂಡೂರು ಪಟ್ಟಣದ ಶ್ರೀ ಶಂಕರಮಠದಲ್ಲಿ ಬ್ರಾಹ್ಮಣ ಸಮಾಜದದಿಂದ ಬಡ ಜನರಿಗೆ 200 ದಿನಸಿ ಆಹಾರದ ಕಿಟ್ ಗಳ ವಿತರಣೆ

0
191

ಬಳ್ಳಾರಿ ಜಿಲ್ಲೆ ಸಂಡೂರು ತಾಲೂಕಿನಲ್ಲಿ ಕೋವಿಡ್ ಸೋಂಕು ತಂದಿಟ್ಟಿರುವ ಆತಂಕ ಹಾಗೂ ಲಾಕ್ಡೌನ್ ಆಗಿರುವ ಸಮಯದಲ್ಲಿ ಮಂಟಪ-ಮಂದಿರ-ಮಸೀದಿ-ಚರ್ಚ್ ಗಳಲ್ಲಿ ಸೇವೆಸಲ್ಲಿಸುತ್ತಿರುವ ಆರ್ಥಿಕವಾಗಿ ಹಿಂದುಳಿದಿರುವ ಕುಟುಂಬಗಳಿಗೆ ಅನುಕೂಲವಾಗಲೆಂದು ಅಕ್ಕಿ ಬೇಳೆ ಉಪ್ಪುಇತ್ಯಾದಿ ಸೇರಿದಂತೆ ಆಹಾರದ ದಿನಸಿಗಳನ್ನು ಒಳಗೊಂಡ 200 ಕಿಟ್ ಗಳನ್ನು ಹಂಚಲಾಗಿದೆ

ಸಮಾಜದ ಮುಖಂಡರು ಮಾತನಾಡುತ್ತ ನಮ್ಮ ಬ್ರಾಹ್ಮಣ ಸಮಾಜದಿಂದ ಇದು ಅತ್ಯಲ್ಪ ಸೇವೆಯಾಗಿದೆ ನಮ್ಮ ಸಮಾಜದಿಂದ ಇನ್ನು ಹೆಚ್ಚು ಕಿಟ್ ಗಳನ್ನು ಕೊಡುವ ಯೋಜನೆ ಇದೆ ಕಷ್ಟ ದಲ್ಲಿ ಸಿಲುಕಿ ಕೊಂಡವರಿಗೆ ಒಂದು ಅಲ್ಪ ಸೇವೆಯ
ಉದ್ದೇಶದಿಂದ ಈ ಕಾರ್ಯವನ್ನು ನಡೆಸುತ್ತಿದ್ದೇವೆ ಎಂದು ಅಭಿಪ್ರಾಯ ಹಂಚಿಕೊಂಡರು.

ಈ ಸಂದರ್ಭದಲ್ಲಿ ಸಂಡೂರು ತಾಲೂಕಿನ ತಹಶೀಲ್ದಾರ್ ರಶ್ಮಿ ಹಾಗೂ ಹಾಲೇಶ್,
ಚಿದಂಬರಂ ನಾನಾವಟೆ, ರಘುಪತಿ ಶಾನಭೋಗ್, ವೆಂಕಟೇಶ್ ತಾಮ್ರಪಾಣಿ, ಗುರುರಾಜ ಶರಫ್, ಶ್ರೀನಿಧಿ ಶಾನಭೋಗ್, ಎಚ್ ಕೆ ರಘು, ರಾಘವೇಂದ್ರ ಜೋಶಿ, ಶ್ರೀಕುಮಾರ ಶಾಸ್ತ್ರಿ, ಔದುಂಬರ ಭಟ್ಟ, ರವಿಪ್ರಸಾದ್ ಶಾನಭೋಗ್ ಇತರರು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here