ಸಂಡೂರು ತಾಲೂಕಿನ 145 ಕ್ಷಯ ರೋಗಿಗಳಿಗೆ ಪೌಷ್ಟಿಕ ಆಹಾರದ ಸಾಮಾಗ್ರಿಗಳ ಕಿಟ್ ವಿತರಣೆ ಹೆಮ್ಮೆ ತಂದಿದೆ; ಡಿ.ಟಿ.ಒ ಡಾ.ಇಂದ್ರಾಣಿ,

0
421

ಸಂಡೂರು: ಆ: 22: ತಾಲೂಕಿನ ಆರೋಗ್ಯಾಧಿಕಾರಿಗಳ ಸಭಾಂಗಣದಲ್ಲಿ ಜಿಲ್ಲಾ ಕ್ಷಯರೋಗ ನಿರ್ಮೂಲನೆ ಕಾರ್ಯಕ್ರಮದಡಿ ಕರ್ನಾಟಕ ಹೆಲ್ತ್ ಪ್ರೋಮೋಷನಲ್ ಟ್ರಸ್ಟ್ ಸಹಯೋಗದಲ್ಲಿ ನಡೆದ ಕಾರ್ಯಕ್ರಮದಲ್ಲಿ, ಸಂಡೂರು ತಾಲೂಕಿನ ಒಟ್ಟು 145 ಜನರು ಕ್ಷಯರೋಗಕ್ಕೆ ಚಿಕಿತ್ಸೆ ಪಡೆಯುತ್ತಿದ್ದು ಅವರೆಲ್ಲರಿಗೂ ನಿಕ್ಷಯ್ ಮಿತ್ರ ಯೋಜನೆಯಡಿ ಸಂಡೂರಿನ
“ಶ್ರೀ ಕುಮಾರಸ್ವಾಮಿ ಮಿನರಲ್ ಎಕ್ಸ್ ಪೋರ್ಟ್ ಪ್ರೈವೇಟ್ ಲಿಮಿಟೆಡ್, ಸಂಡೂರು, ಇವರಿಂದ ದತ್ತು ಸ್ವೀಕರಿಸಿ ಆರು ತಿಂಗಳವರೆಗೆ ಪೌಷ್ಟಿಕಾಹಾರ ಸಾಮಾಗ್ರಿಗಳನ್ನು ನೀಡಲು ಮುಂದೆ ಬಂದಿದ್ದು ಇಂದು ಬಂಡ್ರಿ ಮತ್ತು ತಾರಾನಗರ ಆರೋಗ್ಯ ಕೇಂದ್ರಗಳ ವ್ಯಾಪ್ತಿಯ 60 ಕ್ಷಯರೋಗಿಗಳಿಗೆ ಕಿಟ್ ವಿತರಣೆ ಮಾಡಲಾಯಿತು, ಈ ಸಂದರ್ಭದಲ್ಲಿ ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿ ಡಾ.ಇಂದ್ರಾಣಿ ಅವರು ಮಾತನಾಡಿ ಪೌಷ್ಟಿಕಾಹಾರ ಸೇವನೆಯಿಂದ ಕ್ಷಯರೋಗಿಗಳ ಬೇಗ ಗುಣಮುಖರಾಗುವಂತೆ ಮಾಡುವುದಲ್ಲದೇ ಸಹಜ ಜೀವನ ನಡೆಸಲು ಆತ್ಮ ಸ್ಥೈರ್ಯ ತುಂಬುವ ಇಂತಹ ಕಾರ್ಯ ಸಂತಸ ತರುತ್ತದೆ, ತಾಲೂಕಿನ ಎಲ್ಲಾ ರೋಗಿಗಳನ್ನು ದತ್ತು ಸ್ವೀಕರಿಸಿದ್ದು, ಸಂಸ್ಥೆಯ ಹೃದಯ ವಿಶಾಲತೆಗೆ ಸಾಕ್ಷಿಯಾಗಿದೆ, ಇದು ಜಿಲ್ಲೆಗೆ ಹೆಮ್ಮೆ ಎನಿಸಿದೆ ಎಂದು ಅವರು ತಿಳಿಸಿದರು,

ಈ ಸಂದರ್ಭದಲ್ಲಿ “ಶ್ರೀ ಕುಮಾರಸ್ವಾಮಿ ಮಿನರಲ್ ಎಕ್ಸ್ ಪೋರ್ಟ್ ಪ್ರೈವೇಟ್ ಲಿಮಿಟೆಡ್ ನ ಸಿ.ಎಸ್.ಆರ್ ನ ಹೆಚ್.ಆರ್ ವ್ಯವಸ್ಥಾಪಕಿಯಾದ ಶ್ರೀಮತಿ ಮಾಲತಿ ಕಾರ್ಕಿ ಅವರು 60 ರೋಗಿಗಳಿಗೆ ಕಿಟ್ ವಿತರಣೆ ಮಾಡಿ ಮಾತನಾಡಿ ಈ ಅವಕಾಶ ಮಾಡಿಕೊಟ್ಟಿದ್ದಕ್ಕೆ ಇಲಾಖೆಗೆ ವಂದನೆಗಳನ್ನು ತಿಳಿಸುತ್ತಾ ರೋಗಿಗಳ ಬೆಂಬಲವಾಗಿ ನಿಲ್ಲಲು ಸಮಸ್ತರೂ ಕೈಜೋಡಿಸಬೇಕಿದೆ, ಹೀಗೆ ಎಲ್ಲರೂ ಕೈಜೋಡಿಸಿದಾಗ “ಕ್ಷಯ ಮುಕ್ತ ರಾಷ್ಟ್ರ” ಕನಸು ನನಸಾಗುವ ಕಾಲ ಸಮೀಪಸಲಿದೆ ಎಂದು ತಿಳಿಸಿದರು,

ಈ ಸಂದರ್ಭದಲ್ಲಿ ಸಾರ್ವಜನಿಕ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ರಾಮಶೆಟ್ಟಿ, ತಾಲೂಕು ಆರೋಗ್ಯಾಧಿಕಾರಿ ಡಾ. ಭರತ್ ಕುಮಾರ್, ಡಾ.ಕಿರಣ್ ಕುಮಾರ್, ಡಿ.ಪಿ.ಸಿ ಅರ್ಚನಾ,ಪ್ರಕಾಶ್, ಗೋಪಾಲ್, ಪಂಪಾಪತಿ, ಕೆ.ಹೆಚ್.ಪಿ.ಟಿ ಸುನಿತಾ,ರಾಜು,ಕಾಸಿಂ,ಸಿಬ್ಬಂದಿ ಮತ್ತು ಸ್ವಯಂ ಸೇವಕರು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here