ಬನ್ನಿಹಟ್ಟಿ ಗ್ರಾಮದಲ್ಲೊಬ್ಬ ಅಪರೂಪದ ವ್ಯಕ್ತಿ ಜಡಿಯಪ್ಪ..!!

0
988

ಸಂಡೂರು/ತೋರಣಗಲ್ಲು:ಜ:10:- ಎಳೆ ನೀರು ಮಾರುವ ವ್ಯಾಪಾರಿಯೊಬ್ಬ ತನ್ನ ನಿಸ್ವಾರ್ಥ ಸೇವೆಯಿಂದ ತೋರಣಗಲ್ಲು ಆಸ್ಪತ್ರೆಯಲ್ಲಿಯ ಒಳರೋಗಿಗಳು ಹಾಗೂ ಹೊರರೋಗಿಗಳಿಗೆ ಉಚಿತವಾಗಿ ನೂರೈವತ್ತು ಎಳನೀರು ಕಾಯಿ ಹಂಚಿ ಎಲ್ಲರ ಮನದಲ್ಲಿ ಒಬ್ಬ ಅಪರೂಪದ ವ್ಯಕ್ತಿ ಕಾಣಿಸಿಕೊಂಡಿದ್ದಾನೆ, ಅ ವ್ಯಕ್ತಿ ಯಾರು ಗೊತ್ತಾ ಅವರೇ ನಮ್ಮ ಬನ್ನಿಹಟ್ಟಿ ಜಡಿಯಪ್ಪ,

ಸಂಡೂರು ತಾಲೂಕಿನ ತೋರಣಗಲ್ಲು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಇಂದು ನಡೆದ ಘಟನೆ, ತಾಲೂಕಿನ ಬನ್ನಿಹಟ್ಟಿ ಗ್ರಾಮದ ಪರಸಪ್ಪನ ಮಗ ಜೆಡಿಯಪ್ಪ ಎನ್ನುವ ವ್ಯಕ್ತಿ ತನ್ನ ಅಳಿಯನೊಂದಿಗೆ ಎಂದಿನಂತೆ ಎಳೆನೀರು ಮಾರಲು ತೋರಣಗಲ್ಲು ಗ್ರಾಮಕ್ಕೆ ಬಂದಾಗ ಅವರ ಅಳಿಯ ಪಂಪಾಪತಿಗೆ ಇಂದು ಎಳನೀರು ಮಾರಾಟ ಮಾಡುವುದು ಬೇಡ ರೋಗಿಗಳಿಗೆ ಉಚಿತವಾಗಿ ಕೊಡೋಣವೆಂದು ಕೇಳಿದನಂತೆ ಅದಕ್ಕೆ ಪಂಪಾಪತಿ ನಿಮ್ಮ ಇಚ್ಚೆ ಸರಿ ಎಂದು ಒಪ್ಪಿಗೆ ಸೂಚಿಸಿದನಂತೆ,

ಅದರಂತೆ ತೋರಣಗಲ್ಲು ಆರೋಗ್ಯ ಕೇಂದ್ರಕ್ಕೆ ಬಂದು ಅಧಿಕಾರಿಗಳನ್ನು ವಿಚಾರಿಸಲಾಗಿ ನಿಮ್ಮ ಆಪೇಕ್ಷೆಯನ್ನು ತಡೆಯುವುದು ಬೇಡ ಹೆರಿಗೆಯಾದ ಒಳರೋಗಿಗಳಿಗೆ ಮಾತ್ರ ಕೊಡಿ ಎಂದು ಸಲಹೆ ನೀಡಿದರಂತೆ, ಅದಕ್ಕೆ ಒಪ್ಪದ ಜಡಿಯಪ್ಪ ಒಳ ಮತ್ತು ಹೊರ ರೋಗಿಗಳು, ಲಸಿಕೆ ಪಡೆಯಲು ಬಂದವರಿಗೂ ಹಾಗೂ ಆಸ್ಪತ್ರೆಯ ಅರೈಕೆಯ ಸಿಬ್ಬಂದಿಯವರಿಗೂ ನೂರೈವತ್ತು ಎಳೆನೀರು ಹಂಚಿ ಸಂತಸ ಪಟ್ಟಿದ್ದಾನೆ, ಅಗಾಗ ಪಂಡರಾಪುರ ಭಕ್ತಾಧಿಗಳಿಗೆ ಈ ರೀತಿ ಎಳನೀರು, ಉಪಹಾರ ಒದಗಿಸುವ ಕಾರ್ಯ ಮಾಡುತ್ತಿರುವ ಇಂತಹ ಅಪರೂಪದ ವ್ಯಕ್ತಿಯನ್ನು ಜನತೆ ನೋಡಿ ಶುಭವಾಗಲಿ ಎಂದು ಹಾರೈಸಿದರು

LEAVE A REPLY

Please enter your comment!
Please enter your name here