ನಿಯಮ ಉಲ್ಲಂಘಿಸಿದ್ರೇ ಐಪಿಸಿ ಹಾಗೂ ವಿಪತ್ತು ನಿರ್ವಹಣಾ ಅಧಿನಿಯಮದ ಅಡಿ ಕ್ರಮ,ಓಮಿಕ್ರಾನ್ ತಡೆಗೆ ವಿಜಯನಗರ ಜಿಲ್ಲೆಯಲ್ಲಿ ಸರಕಾರದ ನಿರ್ದೇಶನಗಳ ಕಟ್ಟುನಿಟ್ಟಾಗಿ ಜಾರಿ:ಜಿಲ್ಲಾಧಿಕಾರಿ ಅನಿರುದ್ಧ ಶ್ರವಣ್

0
118

ಹೊಸಪೇಟೆ(ವಿಜಯನಗರ ಜಿಲ್ಲೆ),ಜ.07: ವಿಜಯನಗರ ಜಿಲ್ಲೆಯಲ್ಲಿ ಕೋವಿಡ್ 3ನೇ ಅಲೆ(ಒಮಿಕ್ರಾನ್) ಹರಡದಂತೆ ತಡೆಗಟ್ಟಲು ಸರಕಾರ ಹೊರಡಿಸಿರುವ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿ ಜಿಲ್ಲಾಧಿಕಾರಿ ಅನಿರುದ್ಧ ಶ್ರವಣ್ ಅವರು ಆದೇಶ ಹೊರಡಿಸಿದ್ದಾರೆ.
ಈ ಕುರಿತು ಆದೇಶ ಹೊರಡಿಸಿರುವ ಅವರು ಸರ್ಕಾರದ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ರಾಜ್ಯದಲ್ಲಿ ಕೋವಿಡ್-19 3ನೇ ಅಲೆ(ಓಮಿಕ್ರಾನ್)ಯ ಪ್ರಕರಣಗಳು ದಿನೇ ದಿನೇ ಗಣನೀಯವಾಗಿ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ರಾಜ್ಯ ಸರ್ಕಾರವು 3ನೇ ಅಲೆಯನ್ನು ನಿಯಂತ್ರಿಸಲು ಹಾಗೂ ರಾಜ್ಯದ ಸಾರ್ವಜನಿಕರ ಆರೋಗ್ಯ ಹಿತದೃಷ್ಠಿಯಿಂದ ಜಾರಿಗೊಳಿಸಬೇಕಾದ ನಿಯಂತ್ರಣ ಕ್ರಮಗಳ ಬಗ್ಗೆ ಸೂಚನೆಗಳನ್ನು ನೀಡಿದೆ. ಆದ ಕಾರಣ ಜಿಲ್ಲೆಯ ಸಾರ್ವಜನಿಕರ ಆರೋಗ್ಯ ಹಿತದೃಷ್ಠಿಯಿಂದ ಜಿಲ್ಲೆಯಲ್ಲಿ ಕೋವಿಡ್-19 3ನೇ ಅಲೆಯ ಪ್ರಕರಣಗಳನ್ನು ನಿಯಂತ್ರಿಸಲು ಸರ್ಕಾರದ ಆದೇಶದಲ್ಲಿ ನೀಡಿರುವ ಕೋವಿಡ್-19 ನಿಯಂತ್ರಣ ಕ್ರಮಗಳನ್ನು ವಿಜಯನಗರ ಜಿಲ್ಲೆಯಾದ್ಯಂತ ಕಟ್ಟುನಿಟ್ಟಾಗಿ ಜ.19ರ ಬೆಳಗ್ಗೆ 5ರವರೆಗೆ ಜಾರಿಗೊಳಿಸಲಾಗಿದೆ ಎಂದು ಅವರು ಆದೇಶದಲ್ಲಿ ತಿಳಿಸಿದ್ದಾರೆ.
ಅಸ್ತಿತ್ವದಲ್ಲಿರುವ ಮಾರ್ಗಸೂಚಿಗಳ ಅನುಸಾರ ರಾಜ್ಯಾದ್ಯಂತ ರಾತ್ರಿ 10ರಿಂದ ಮರುದಿನ ಬೆಳಿಗ್ಗೆ 05ರವರೆಗೆ ‘ರಾತ್ರಿ ಕಫ್ರ್ಯೂ’ವನ್ನು ಮುಂದುವರೆಸಲಾಗಿದೆ. ಈ ಅವಧಿಯಲ್ಲಿ ಎಲ್ಲಾ ಕಚೇರಿಗಳು ವಾರದಲ್ಲಿ ಐದು ದಿನ ಸೋಮವಾರದಿಂದ ಶುಕ್ರವಾರದವರೆಗೆ ಕಾರ್ಯನಿರ್ವಹಿಸುತ್ತವೆ. ಶುಕ್ರವಾರ ರಾತ್ರಿ 10:00 ಗಂಟೆಯಿಂದ ಸೋಮವಾರ ಬೆಳಿಗ್ಗೆ 05:00 ಗಂಟೆಯವರೆಗೆ ‘ವಾರಾಂತ್ಯದ ಕಫ್ರ್ಯೂ’ವನ್ನು ಜಾರಿಗೊಳಿಸಲಾಗಿದೆ. ವಾರಾಂತ್ಯದ ಕಫ್ರ್ಯೂ ಅವಧಿಯಲ್ಲಿ ತುರ್ತು ಕಾರ್ಯಗಳಿಗೆ ಜನರ ಅಗತ್ಯತೆಗಳನ್ನು ಪೂರೈಸಲು ಸಾರ್ವಜನಿಕ ಸಾರಿಗೆಗಳು ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕರ ನಿರ್ದೇಶನಗಳನುಸಾರ ಕಾರ್ಯಾಚರಿಸುವುದಕ್ಕೆ ಅವರು ಆದೇಶದಲ್ಲಿ ತಿಳಿಸಿದ್ದಾರೆ.
ಪಬ್‍ಗಳು / ಕ್ಲಬ್‍ಗಳು/ ರೆಸ್ಟೋರೆಂಟ್‍ಗಳು / ಬಾರ್‍ಗಳು / ಹೋಟೆಲ್‍ಗಳು / ಹೋಟೇಲುಗಳ ಊಟದ ಸ್ಥಳಗಳು ಇತ್ಯಾದಿಗಳು ಕೋವಿಡ್ ಸಮುಚಿತ ವರ್ತನೆಗಳನ್ನು ಕಡ್ಡಾಯವಾಗಿ ಪಾಲಿಸುವ ಷರತ್ತಿಗೊಳಪಟ್ಟು ಆಸನ ಸಾಮಥ್ರ್ಯದ ಶೇ.50 ರಷ್ಟು ಮಾತ್ರ ಕಾರ್ಯಾಚರಿಸುವುದು ಮತ್ತು ಇಂತಹ ಸ್ಥಳಗಳಲ್ಲಿ ಪೂರ್ಣಪ್ರಮಾಣದ ಕೋವಿಡ್-19 ಲಸಿಕೆಯನ್ನು ಪಡೆದಿರುವವರಿಗೆ ಮಾತ್ರ ಪ್ರವೇಶಕ್ಕೆ ಅನುಮತಿಸಲಾಗಿದೆ. ಕೋವಿಡ್ ಲಸಿಕೆ ಪಡೆಯದೇ ಇರುವ ವ್ಯಕ್ತಿಗಳಿಗೆ ಪರವೇಶ ಸಂಪೂರ್ಣ ನಿರ್ಬಂಧಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಸಿನಿಮಾ ಹಾಲ್‍ಗಳು/ ಮಲ್ಟಿಪ್ಲೆಕ್ಸ್/ ಸಿನಿಮಾ ಮಂದಿರಗಳು/ ರಂಗ ಮಂದಿರಗಳು/ ಸಭಾಭವನಗಳು ಕೋವಿಡ್ ಸಮುಚಿತ ವರ್ತನೆಗಳನ್ನು ಕಡ್ಡಾಯವಾಗಿ ಪಾಲಿಸುವ ಷರತ್ತಿಗೊಳಪಟ್ಟು ಆಸನ ಸಾಮಥ್ರ್ಯದ ಶೇ.50 ರಷ್ಟು ಮಾತ್ರ ಕಾರ್ಯಾಚರಿಸುವುದು ಮತ್ತು ಇಂತಹ ಸ್ಥಳಗಳಲ್ಲಿ ಪೂರ್ಣಪ್ರಮಾಣದ ಕೋವಿಡ್-19 ಲಸಿಕೆಯನ್ನು ಪಡೆದಿರುವವರಿಗೆ ಮಾತ್ರ ಪ್ರವೇಶಕ್ಕೆ ಅನುಮತಿಸುವುದು. ಕೋವಿಡ್-19 ಸಮುಚಿತ ವರ್ತನೆಗಳನ್ನು ಹಾಗೂ ಅಸ್ತಿತ್ವದಲ್ಲಿರುವ ಸರ್ಕಾರದ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸುವ ಷರತ್ತಿಗೊಳಪಟ್ಟು ಹೋರಾಂಗಣಗಳಲ್ಲಿ 200 ಜನರು ಮೀರದಂತೆ ಹಾಗೂ ಒಳಾಂಗಣಗಳಲ್ಲಿ 100 ಜನರು ಮೀರದಂತೆ ಮದುವೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಅನುಮತಿಸಿದೆ.
ಧಾರ್ಮಿಕ ಸ್ಥಳಗಳಲ್ಲಿ ದರ್ಶನಕ್ಕೆ ಮಾತ್ರ ಅವಕಾಶ ಕಲ್ಪಿಸಿದೆ. ಯಾವುದೇ ಸೇವೆ ಇತ್ಯಾದಿಗಳಿಗೆ ಅವಕಾಶವಿಲ್ಲ. ಯಾವುದೇ ಸಮಯದಲ್ಲಿ ಪೂರ್ಣಪ್ರಮಾಣದ ಕೋವಿಡ್-19 ಲಸಿಕೆಯನ್ನು ಪಡೆದಿರುವ 50 ಜನರ ಮಾತ್ರ ಪ್ರವೇಶಕ್ಕೆ ಅನುಮತಿ ಇರುತ್ತದೆ ಎಂದು ವಿವರಿಸಿರುವ ಅವರು ಮಾಲ್‍ಗಳು, ವಾಣಿಜ್ಯ ಸಂಕೀರ್ಣಗಳು, ಎಲ್ಲಾ ಏಕ ಕಟ್ಟಡದಲ್ಲಿನ ಅಂಗಡಿಗಳು ಮತ್ತು ವಾಣಿಜ್ಯ ಸ್ಥಳಗಳು ವಾರದ ದಿನಗಳಲ್ಲಿ ಎಂದಿನಂತೆ ಕಾರ್ಯನಿರ್ವಹಿಸತಕ್ಕದ್ದು ಎಂದಿದ್ದಾರೆ.
ಈಜುಕೊಳಗಳು ಮತ್ತು ಜಿಮ್‍ಗಳು ಸಾಮಥ್ರ್ಯದ ಶೇ.50 ರಷ್ಟು ಮಾತ್ರ ಕಾರ್ಯಾಚರಿಸತಕ್ಕದ್ದು ಆದರೆ, ಪೂರ್ಣಪ್ರಮಾಣದ ಕೋವಿಡ್ ಲಸಿಕೆಯನ್ನು ಪಡೆದಿರುವವರಿಗೆ ಮಾತ್ರ ಪ್ರವೇಶಕ್ಕೆ ಅನುಮತಿಸುವುದು. ಕ್ರೀಡಾ ಸಂಕೀರ್ಣಗಳು ಮತ್ತು ಆಟದ ಮೈದಾನಗಳು ಸಾಮಥ್ರ್ಯದ ಶೇ.50 ರಷ್ಟು ಮಾತ್ರ ಕಾರ್ಯಾಚರಿಸುವುದು.ಎಲ್ಲಾ ರೀತಿಯ ರ್ಯಾಲಿಗಳನ್ನು, ಧರಣಿಗಳನ್ನು, ಮುಷ್ಕರಗಳನ್ನು ನಿಬರ್ಂಧಿಸಿದೆ ಎಂದು ಅವರು ಆದೇಶದಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here