ಡೆಂಗ್ಯೂ ವಿರೋಧ ಮಾಸಾಚರಣೆ ಕುರಿತು ಜಾಗೃತಿ

0
698

ಸಂಡೂರು:ಜುಲೈ:07:- ತಾಲೂಕಿನ ತೋರಣಗಲ್ಲು ರೈಲ್ವೆ ನಿಲ್ದಾಣ ಗ್ರಾಮದ ಬಾಬಾ ನಗರದಲ್ಲಿ ಡೆಂಗ್ಯೂಜ್ವರ ನಿಯಂತ್ರಣ ಕುರಿತು ಗುಂಪು ಸಭೆಗಳ ಮೂಲಕ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು, ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ, ಪ್ರತಿ ವರ್ಷ ಜುಲೈ ತಿಂಗಳನ್ನು ಡೆಂಗ್ಯೂ ಮಾಸಾಚರಣೆ ಎಂದು ಆಚರಿಸಲಾಗುತ್ತದೆ, ಸಧ್ಯ ಮಳೆ ಪ್ರಾರಂಭವಾಗಿದೆ ನೀರಿನಲ್ಲಿ ಸೊಳ್ಳೆಗಳು ಇಟ್ಟ ಮೊಟ್ಟೆಗಳು ಮಳೆನೀರು ತಾಗಿ ಮರಿಯಾಗಿ ಅಡಲ್ಟ್ ಸೊಳ್ಳೆಗಳಾಗಿ ತಮ್ಮ ವಂಶಾಭಿವೃದ್ಧಿ ಮಾಡಿಕೊಳ್ಳಲು ಒಬ್ಬರಿಂದೊಬ್ಬರಿಗೆ ಸೊಳ್ಳೆಗಳು ಕಚ್ಚುವುದರಿಂದ ರೋಗ ಒಬ್ಬರಿಂದೊಬ್ಬರಿಗೆ ಹರಡುತ್ತದೆ, ಲಾರ್ವಾ ಹಂತದಲ್ಲೆ ಸೊಳ್ಳೆಗಳ ನಿಯಂತ್ರಣ ಮಾಡಬೇಕು, ವಾರಕ್ಕೊಮ್ಮೆ ನೀರು ಶೇಖರಣೆ ಮಾಡುವ ತೊಟ್ಟಿ,ಬ್ಯಾರಲ್,ಡ್ರಮ್, ಗಡಿಗೆಗಳನ್ನು ಸ್ವಚ್ಛವಾಗಿ ಬ್ರಷ್ ನಿಂದ ತೊಳೆದು ಒಣಗಿಸಿ ನೀರು ತುಂಬಿಸಿ ಮುಚ್ಚಿಡ ಬೇಕು,
ಘನತ್ಯಾಜ್ಯ ಎಳೆನೀರು ಚಿಪ್ಪು,ಬಾಟಲ್, ಟೈರ್,ಟ್ಯೂಬ್,ಡಬ್ಬಿ ಮುಂತಾದುವುಗಳನ್ನು ವಿಲೆವಾರಿ ಮಾಡಬೇಕು, ಸ್ವಯಂ ರಕ್ಷಣೆ ವಿಧಾನಗಳಾದ ಸೊಳ್ಳೆ ನಿರೋಧಕ ಕ್ರೀಮ್ ಲೇಪನಾ, ಸೊಳ್ಳೆ ಬತ್ತಿ, ಕಾಯಿಲ್ ಬಳಸುವುದು, ಮೈತುಂಬ ಬಟ್ಟೆ ಧರಿಸುವುದು, ಹಗಲು ಮಲಗುವಾಗಲೂ ಸೊಳ್ಳೆ ಪರದೆಗಳನ್ನು ಬಳಸುವುದು ತಪ್ಪದೇ ಮಾಡಬೇಕು, ಡೆಂಗ್ಯೂ ಜ್ವರ ರೋಗ ಲಕ್ಷಣಗಳಾದ ಶೀಘ್ರವಾಗಿ ವಿಪರೀತ ಜ್ವರ, ತಲೆನೋವು,ಕಣ್ಣಿನ ಹಿಂಭಾಗ ನೋವು, ಮೀನಗಂಡ ನೋವು, ದೇಹದ ಮೇಲೆ ರಕ್ತದ ಗಂದೆಗಳು ಯಾವುದಾದರೂ ಲಕ್ಷಣಗಳು ಕಾಣಿಸಿ ಕೊಂಡಾಗ ತಪಸಣೆಗೆ ಒಳಗಾಗ ಬೇಕು, ನಿರ್ಲಕ್ಷ್ಯ ಮಾಡಿದರೆ ರಕ್ತಸ್ರಾವ ವಾಗಿ ಪ್ಲೇಟ್ ಲೇಟ್ ಗಳ ಸಂಖ್ಯೆ ಕಡಿಮೆಯಾಗಿ ಅಪಸ್ಮಾರಹಂತ ತಲುಪಿ ಮರಣವೂ ಸಂಭವಿಸ ಬಹುದು,

ಡೆಂಗ್ಯೂಗೆ ಸೂಕ್ತ ಚಿಕಿತ್ಸೆ ಇರದಿದ್ದರೂ ಲಕ್ಷಣಗಳಾದರಿತ ಚಿಕಿತ್ಸೆ ನೀಡಿ ವಾಸಿ ಮಾಡಬಹುದು, ಮಖ್ಯವಾಗಿ ಡೆಂಗ್ಯೂ ತಡೆಯಲು ಲಸಿಕೆಯಾಗಲಿ ಸೂಕ್ತ ಚಿಕಿತ್ಸೆ ಇರದಿದ್ದರೂ ಮುಂಜಾಗ್ರತೆಯೇ ಮದ್ದು, ಸೊಳ್ಳೆಗಳನ್ನು ನಿಯಂತ್ರಿಸಿ, ಸ್ವಯಂ ರಕ್ಷಣೆ ಮಾಡಿಕೊಂಡಲ್ಲಿ ಡೆಂಗ್ಯೂ ಜ್ವರದಿಂದ ಮುಕ್ತಿ ಪಡೆಯಬಹುದು, ಇಲಾಖೆಗೆ ಸಮುದಾಯವೂ ಕೈಜೋಡಿಸಿದಾಗ ಮಾತ್ರ ಡೆಂಗ್ಯೂ ಮುಕ್ತ ರಾಷ್ಟ್ರ ನಿರ್ಮಾಣ ರೂಪಿಸಲು ಸಾಧ್ಯ ಎಂದು ಅವರು ತಿಳಿಸಿದರು,

ಈ ಕಾರ್ಯಕ್ರಮದಲ್ಲಿ ಆಶಾ ಕಾರ್ಯಕರ್ತೆ ಶ್ರೀದೇವಿ, ಹುಲಿಗೆಮ್ಮ, ಪದ್ಮಾ, ಮಂಜುಳಾ, ಸಾರ್ವಜನಿಕರಾದ ಮೌಲಾಸಾಬ್, ಜಯಪ್ರದ,ಅಶ್ವಿನಿ, ಗೀತಾ,ಗೌಸಿಯಾ, ಹಸೀನಾ,ಫಾತಿಮಾ, ಮಾಬುಸಾಬ್ ಪುರಸಭೆ ಸಿಬ್ಬಂದಿ ತಿಪ್ಪೇಸ್ವಾಮಿ, ಹನುಮಂತ ಇತರರು ಹಾಜರಿದ್ದರು

LEAVE A REPLY

Please enter your comment!
Please enter your name here