ವಿಜಯನಗರ:ರಾಷ್ಟೀಯ ಮತದಾರರ ದಿನ ಆಚರಣೆ,ಭಾರತದ ಚುನಾವಣೆ ಜಗತ್ತಿನಲ್ಲಿಯೇ ಆದರ್ಶ: ಜಿಪಂ ಸಿಇಒ ಹರ್ಷಲ್ ನಾರಾಯಣ ಬೋಯಲ್

0
93

ಹೊಸಪೇಟೆ(ವಿಜಯನಗರ ಜಿಲ್ಲೆ),ಜ.25: ಭಾರತ ಚುನಾವಣಾ ಆಯೋಗ ಮತ್ತು ಜಿಲ್ಲಾಡಳಿತದ ಸಂಯುಕ್ತ ಆಶ್ರಯದಲ್ಲಿ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ 12ನೇ ರಾಷ್ಟ್ರೀಯ ಮತದಾರರ ದಿನವನ್ನು ಮಂಗಳವಾರ ಆಚರಿಸಲಾಯಿತು.
ನೆರೆದಿದ್ದ ಎಲ್ಲರಿಗೂ ಮತದಾನ ಪ್ರತಿಜ್ಞಾ ವಿಧಿ ಬೋಧಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಜಿಪಂ ಸಿಇಒ ಹರ್ಷಲ್ ನಾರಾಯಣ ಬೋಯಲ್ ಅವರು ಚುನಾವಣಾ ಆಯೋಗವು ಯುವಜನರಲ್ಲಿ ಮತದಾನದ ಮಹತ್ವ ಮತ್ತು ಪ್ರಾಮುಖ್ಯತೆಯನ್ನು ತಿಳಿಸುವ ಉದ್ದೇಶದಿಂದ ರಾಷ್ಟ್ರೀಯ ಮತದಾರರ ದಿನಾಚರಣೆ ಆಚರಿಸಲಾಗುತ್ತಿದೆ ಎಂದರು.
ಮತದಾನದ ಮಹತ್ವ ತಿಳಿಸುವ ಸದುದ್ದೇಶದಿಂದ ಶಾಲಾ-ಕಾಲೇಜುಗಳಲ್ಲಿ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿ ವಿಜೇತರಿಗೆ ಬಹುಮಾನ ವಿತರಿಸಲಾಗುತ್ತಿದೆ ಎಂದು ತಿಳಿಸಿದ ಜಿಪಂ ಸಿಇಒ ಹರ್ಷಲ್ ನಾರಾಯಣ ಬೋಯರ್‍ಅವರು ಮೊದಲನೇ ಮಹಾಯುದ್ದದ ಸಮಯದಲ್ಲಿ ಮಹಿಳೆಯರು ಮತದಾನ ದ್ವನಿ ಎತ್ತಿದ್ದರು. ನಮ್ಮ ಭಾರತ ಸಂವಿಧಾನದಲ್ಲಿ ಅಂಬೇಡ್ಕರವರು ಮತದಾನಕ್ಕೆ ಹೆಚ್ಚು ಮಹತ್ವ ನೀಡಿದ್ದಾರೆ ಎಂದರು.
ಭಾರತದ ಸಂವಿಧಾನ ವ್ಯವಸ್ಥೆ ಇಡೀ ಜಗತ್ತಿನಲ್ಲಿಯೇ ಅತ್ಯಂತ ವಿಶಿಷ್ಟವಾದುದು ಎಂದು ಅವರು ಬಣ್ಣಿಸಿದರು.
ಹೊಸಪೇಟೆ ಸಹಾಯಕ ಆಯುಕ್ತರಾದ ಸಿದ್ದಾರಾಮೇಶ್ವರವರು ಮಾತನಾಡುತ್ತಾ ಭಾರತ ಸಂವಿಧಾನದ ಚುನಾವಣಾ ವ್ಯವಸ್ಥೆ ಆದರ್ಶ ಮತ್ತು ಮಾದರಿಯಾಗಿದೆ. ಕಡ್ಡಾಯ ಮತದಾನ ಮತ್ತು ಮತದಾನದ ಪ್ರಾಮುಖ್ಯ ತಿಳಿಸುವ ಉದ್ದೇಶದಿಂದ ಮತದಾರರ ದಿನಾಚರಣೆ ಆಚರಿಸಲಾಗುತ್ತಿದೆ ಎಂದರು.
ಯುವಜನರು ಮತದಾನದ ಮಹತ್ವ ಅರಿತುಕೊಳ್ಳಬೇಕು;ಯಾವುದೇ ರೀತಿಯ ಆಮಿಷಕ್ಕೊಳಗಾಗದೇ ಯೋಗ್ಯ ಅಭ್ಯರ್ಥಿಗೆ ಮತದಾನ ಮಾಡಬೇಕು ಎಂದರು.
ರಾಷ್ಡೀಯ ಮತದಾರರ ದಿನಾಚರಣೆ ಪ್ರಯುಕ್ತ ಏರ್ಪಡಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರಗಳು ಹಾಗೂ ಬಹುಮಾನಗಳನ್ನು ವಿತರಿಸಲಾಯಿತು.
ಹೊಸದಾಗಿ ನೊಂದಣಿಯಾದ ಯುವಮತದಾರರಿಗೆ ಗುರುತಿನ ಚೀಟಿಗಳನ್ನು ಇದೇ ಸಂದರ್ಭದಲ್ಲಿ ವಿತರಿಸಲಾಯಿತು.
ಕಾಲೇಜು ವಿದ್ಯಾರ್ಥಿಗಳು ಮತದಾರರ ದಿನಾಚರಣೆ ಬಗ್ಗೆ ತಮ್ಮ ಅಭಿಪ್ರಾಯ ತಿಳಿಸಿದರು.
ಈ ಸಂದರ್ಭದಲ್ಲಿ ಹೊಸಪೇಟೆ ತಹಸೀಲ್ದಾರರಾದ ವಿಶ್ವನಾಥ ಹಾಗೂ ತಾಪಂ ಇಒ ವಿಶ್ವನಾಥ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಮತ್ತು ತಾಲೂಕುಮಟ್ಟದ ಅಧಿಕಾರಿಗಳು ಇದ್ದರು.

ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಣೆ:
ರಾಷ್ಟೀಯ ಮತದಾರರ ದಿನಾಚರಣೆಯ ನಿಮಿತ್ತ ಏರ್ಪಡಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರಗಳು ಹಾಗೂ ಬಹುಮಾನಗಳನ್ನು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಹರ್ಷಲ್ ನಾರಾಯಣ ಬೋಯಲ್ ಅವರು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಂಗಳವಾರ ವಿತರಿಸಿದರು.
ಕನ್ನಡ ವಿಷಯದ ಪ್ರಬಂಧಕ್ಕೆ ಗುಡೇಕೋಟೆ ಕೂಡ್ಲಿಗಿಯ ಕೆ.ಪಿ.ಎಸ್. ಶಾಲೆಯ ಪಿ.ಅಂಬರೀಶ್(ಪ್ರಥಮಸ್ಥಾನ),ಹಡಗಲಿಯ ಜಿ.ಹೆಚ್.ಎಸ್.ಹೀರೆಕೊಳಚಿ ಶಾಲೆಯ ಆರ್.ರಾಜಾಭಕ್ಷಿ(ತೃತೀಯ).
ಇಂಗ್ಲೀಷ್ ಪ್ರಬಂಧದಲ್ಲಿ ಹಗರಿಬೊಮ್ಮನಹಳ್ಳಿಯ ಆದರ್ಶ ವಿದ್ಯಾಲಯದ ಶ್ರಾವಣಿ.ಕೆ(ದ್ವಿತೀಯ), ಹೊಸಪೇಟೆಯ ದೀಪಾಯನ ಆಂಗ್ಲ ಮಾಧ್ಯಮ ಶಾಲೆಯ ರೋಹನ್ ಜೋಷಿ(ತೃತೀಯ).
ಭಿತ್ತಿ ಚಿತ್ರಸ್ಪರ್ಧೆಯಲ್ಲಿ ಜಿ.ಹೆಚ್.ಎಸ್. ಹಡಗಲಿ ವಸಂತ್ ಆರ್.ಎಸ್.(ದ್ವೀತಿಯ).ಡಾ. ಸರ್ವಪಲ್ಲಿ ರಾಧಕೃಷ್ಣ ಹಿರಿಯ ಪ್ರಾಥಮಿಕ ಶಾಲೆಯ ಕೆ.ಬಿ.ಆರ್ದಶ್(ತೃತೀಯ).
ರಸಪ್ರಶ್ನೆ ಸ್ವರ್ಧೆಯಲ್ಲಿ ಹರಪನಹಳ್ಳಿಯ ಎ.ಕೆ.ಸಿ.ಪಿ. ಇಂಗ್ಲೀಷ್ ಶಾಲೆಯ ರಂಜಿತಾ, ಭೂಮಿಕಾ(ತೃತೀಯ ಬಹುಮಾನ).

LEAVE A REPLY

Please enter your comment!
Please enter your name here