ಸರ್ಕಾರಕ್ಕೆ ಉಗ್ರ ಹೋರಾಟದ ಎಚ್ಚರಿಕೆ ನೀಡಿದ ಕರ್ನಾಟಕ ಮುಸ್ಲಿಂ ಸಂಘದ ರಾಜ್ಯಾಧ್ಯಕ್ಷ ಎಲ್ ಎಸ್ ಬಶೀರ್ ಅಹಮ್ಮದ್

0
46

ಕೂಡ್ಲಿಗಿ: ರಾಜ್ಯ ಅಲ್ಪಸಂಖ್ಯಾತ ಮುಸ್ಲಿಮರ 2ಬಿ ಶೇ.4 ಮೀಸಲಾತಿ ಬದಲಾಗಿ ಶೇ.1೦ಕ್ಕೆ ಹೆಚ್ಚಿಸಿ ಈ ಕೂಡಲೇ ಜಾರಿಗೆ ತರಬೇಕೆಂದು ಕರ್ನಾಟಕ ಮುಸ್ಲಿಂ ಸಂಘದ ರಾಜ್ಯಧ್ಯಕ್ಷ ಎಲ್.ಎಸ್. ಬಶೀರ್ ಅಹಮ್ಮದ್ ಅಗ್ರಹಿಸಿದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಭಾನುವಾರ ನಡೆದ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದರು.

ಮುಸ್ಲಿಂರನ್ನು ಎದುರು ಹಾಕಿಕೊಂಡು ಸೋಲನ್ನು ಅನುಭವಿಸಿದ ಈ ಹಿಂದಿನ ಪಕ್ಷದಿಂದ ಈಗಿನ ಸರ್ಕಾರ ಪಾಠ ಕಲಿಯಬೇಕು. ಮುಸ್ಲಿಂ ಸಮುದಾಯ ಅಘೋಷಿತವಾಗಿ ಕಾಂಗ್ರೆಸ್ ಪಕ್ಷಕ್ಕೆ ತಲೆತಲಾಂತರದಿಂದ ಪವಿತ್ರ ಮತವನ್ನು ಹಾಕುವುದರ ಮೂಲಕ ಕಾಂಗ್ರೇಸ್ ಪಕ್ಷದ ಪರ ಗುರುತಿಸಿಕೊಂಡಿದೆ. ಆರ್ಥಿಕ, ಶೈಕ್ಷಣಿಕ, ಸಾಮಾಜಿಕ, ರಾಜಕೀಯವಾಗಿ ಹಿಂದುಳಿದ ಈ ಅಲ್ಪಸಂಖ್ಯಾತ ಸಮುದಾಯವನ್ನು ಯಾವುದೇ ಕಾರಣಕ್ಕೂ ಕಡೆಗಣಿಸದೆ, ಮುಸ್ಲಿಂಮರ 2ಬಿ ಶೇ.1೦ಕ್ಕೆ ಹೆಚ್ಚಿಸಿವುದರ ಮೂಲಕ ಸಂಪುಟದಲ್ಲಿ ತೀರ್ಮಾನಿಸಬೇಕು ಎಂದು ಒತ್ತಾಯಿಸಿದರು.
ಅಲ್ಲದೇ ನಮ್ಮ ಮನವಿಯನ್ನು ಕಡೆಗಣಿಸದರೆ , ಮುಂಬರುವ ಲೋಕಸಭಾ ಚುನಾವಣೆಯನ್ನು ನಮ್ಮ ಸಮುದಾಯ ಪಕ್ಷವನ್ನು ಬಹಿಷ್ಕರಿಸುತ್ತದೆ ಎಂದರು.

ಅದರಂತೆ ಹಜರತ್ ಟಿಪ್ಪು ಸುಲ್ತಾನ್ ನೆಲೆಬೀಡಾದ ಶ್ರೀರಂಗಪಟ್ಟಣವನ್ನು 3 ಸಾವಿರ ಕೋಟಿ ಅನುದಾನದೊಂದಿಗೆ ಪ್ರವಾಸಿ ತಾಣವಾಗಿಸಬೇಕು. ಹಜ್‌ಯಾತ್ರಿಗಳಿಗೆ ಶೇ10ರಷ್ಟು ಹೆಚ್ಚಿಸಿಬೇಕು. ವಕ್ಫ್ ಮಂಡಳಿಯಿಂದ ರಾಜ್ಯದ ಪ್ರತಿಯೊಂದು ಮಸೀದಿ, ದರ್ಗಾ, ಮದರಸಾಗಳಿಗೆ ಪ್ರತಿ ವರ್ಷಕ್ಕೆ 1೦ಲಕ್ಷ ರೂಪಾಯಿ ಅನುದಾನ ಬಿಡುಗಡೆ ಮಾಡಬೇಕು. ಮುಸ್ಲಿಂ ವಿದ್ಯಾರ್ಥಿಗಳಿಗೆ ಶಿಕ್ಷಣದಲ್ಲಿ ಮೀಸಲಾತಿ ಕಾಯ್ದೆಯನ್ನು ತರುವುದರ ಜೊತೆಯಲ್ಲಿ ಮುಸ್ಲಿಂ ಸರ್ಕಾರಿ ನೌಕರರಿಗೆ ಪ.ಜಾ/ಪ.ಪಂ ನೌಕರರಿಗೆ ನೀಡುವ ಮೀಸಲಾತಿಯನ್ನು ನೀಡಿ ಮುಂಬಡ್ತಿಯ ಕಾನೂನು ಜಾರಿಯಾಗಬೇಕೆಂದರು.

ಪ್ರತಿ ಹಳ್ಳಿಗಳಲ್ಲೂ ಮುಸ್ಲಿಂ ಸಮುದಾಯ ಇತರೆ ಸಮುದಾಯಗಳೊಡನೆ ಸಹೋದರ ಬಾಂಧವ್ಯಗಳನ್ನು ಹೊಂದಿದೆ, ಪ್ರತಿಯೊಂದು ಕಾರ್ಯಕ್ರಮದಲ್ಲಿ ಬೆರೆತು ಐಕತ್ಯೆಯೊಂದಿಗೆ ಸಹಬಾಳ್ವೆಯಿಂದ ಜೀವನ ಸಾಗಿಸಕೊಂಡು ಬಂದಿದೆ. ಮುಸ್ಲಿಂ ಕಾರ್ಮಿಕರಿಗೆ ಮಾತ್ರ ಮಲತಾಯಿ ಧೋರಣೆಯನ್ನು ಸರ್ಕಾರ ಅನುಸರಿಸುತ್ತಿದೆ ಇದು ವಿಷಾಧಾನೀಯ ಆದ್ದರಿಂದ ಗುಡಿ ಕೈಗಾರಿಕೆಗಳಿಗೆ ಸಾಲ ಸೌಲಭ್ಯವನ್ನು ಕಲ್ಪಿಸಬೇಕೆಂದರು.

ಸಂವಿಧಾನದ ಆಶಯದಂತೆ ಇಸ್ಲಾಂ ಧರ್ಮದ ಅನುಸಾರ ಹಿಜಾಬ್ ಧರಿಸಲು ಆವಕಾಶ ನೀಡುವ ಮೂಲಕ ಕಡ್ಡಾಯ ಕಾನೂನು ಜಾರಿಗೆಗೊಳಿಸಬೇಕೆಂದರು. ಇದರಂತೆ 20 ಅಂಶಗಳ ಬೇಡಿಕೆಯನ್ನು ಸರ್ಕಾರದ ಗಮನಕ್ಕೆ ಮಾಧ್ಯಮದ ಮೂಲಕ ತರುತ್ತಿದ್ದೇವೆ. ಈ ಬಗ್ಗೆ ಫೆಬ್ರವರಿ ಕೊನೆಯ ವಾರದಲ್ಲಿ ಉಜ್ಜಯನಿ ಗ್ರಾಮದಲ್ಲಿ ಅಸಂಖ್ಯಾತ ಅಲ್ಪಸಂಖ್ಯಾಯತರು ಸೇರಿ ಸರ್ಕಾರವನ್ನು ಎಚ್ಚರಿಸುವುದರ ಮೂಲಕ ಮುಸ್ಲಿಂ ಸಮಾಜಕ್ಕೆ ಆಗಿರುವ ಅನ್ಯಾಯವನ್ನು ಸರಿಪಡಿಸುವಂತೆ ಉಗ್ರ ಹೋರಾಟವನ್ನು ರಾಜ್ಯಧ್ಯಂತ ಮಾಡುತ್ತೇವೆಂದು ಎಲ್.ಎಸ್. ಬಶೀರ್ ಅಹಮ್ಮದ್ ತಿಳಿಸಿದರು.

ಈ ಸಂಧರ್ಭದಲ್ಲಿ ಕರವಾಳಿ ಕರ್ನಾಟಕದ ಹಿರಿಯ ವಕೀಲ ಸಾಹಿದುಲ್ಲಾ, ಮಹಮ್ಮದ್ ಶಹಿಪುಲ್ಲಾ, ಚಿತ್ರದುರ್ಗದ ಮೋಸಿನ್ ಸಾಹೇಬ್, ಕುಂದಾಪುರದ ಯಾಸೀನ್ ಸಾಹೇಬ್, ಗುಡೇಕೋಟೆ ನೌಷಾದ್, ಶೈಪುಲ್ಲಾ, ಜಪ್ರುದ್ಧೀನ್, ರಹೆಮಾನ್, ಇಮ್ಮಾನ್, ಮೌಲಿ ಸಾಹೇಬ್ ಸೇರಿದಂತೆ ರಾಜ್ಯದಿಂದ ವಿವಿದಡೆ ಆಗಮಿಸಿದ ಮುಸ್ಲಿಂ ಮುಖ್ಯಸ್ಥರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here