ಹೊಸಪೇಟೆಯಲ್ಲಿ ರಾಷ್ಟ್ರೀಯ ಹೆಣ್ಣು ಮಗುವಿನ ದಿನಾಚರಣೆ

0
99

ಹೊಸಪೇಟೆ(ವಿಜಯನಗರ)ಜ.25: ಸಾರ್ವಜನಿಕ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಪೊಲೀಸ್ ಇಲಾಖೆ ಹಾಗೂ ಮಕ್ಕಳ ಸಹಾಯವಾಣಿ ಕೇಂದ್ರ, ಡಾನ್‌ಬೋಸ್ಕೊ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ಹೊಸಪೇಟೆ ನಗರದ ಟಿ.ಬಿ.ಡ್ಯಾಂನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಸರ್ಕಾರಿ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿನಿಯರೊಂದಿಗೆ ರಾಷ್ಟ್ರೀಯ ಹೆಣ್ಣು ಮಗುವಿನ ದಿನಾಚರಣೆ ಮಂಗಳವಾರ ಆಚರಿಸಲಾಯಿತು.
ಸಮಾಜದಲ್ಲಿ ತಮ್ಮ ಜೀವನವನ್ನು ಉತ್ತಮಗೊಳಿಸಲು ಸಮಾಜದಲ್ಲಿ ಬಾಲಕಿಯರ ಸ್ಥಾನವನ್ನು ಉತ್ತೇಜಿಸಲು ಇದನ್ನು ಆಚರಿಸಲಾಗುತ್ತದೆ. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿನಿಯರಿಗೆ ಮಕ್ಕಳ ಹಕ್ಕುಗಳು ಹಾಗೂ ಕಾಯಿದೆಗಳ ಕುರಿತು ಜಾಗೃತಿ ಮೂಡಿಸಲಾಯಿತು.
ಮುಖ್ಯ ಅತಿಥಿಗಳಾಗಿ ಅಗಮಿಸಿದ್ದ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಎಳೆನಾಗಪ್ಪ ಅವರು ಬಾಲಕಿಯರು ಸಾಮಾನ್ಯವಾಗಿ ತಮ್ಮ ಜೀವನದಲ್ಲಿ ಎದುರಿಸುವ ವಿಭಿನ್ನ ರೀತಿಯ ಸಾಮಾಜಿಕ ತಾರತಮ್ಯ ಮತ್ತು ಶೋಷಣೆಗಳನ್ನು ತೆಗೆದುಹಾಕುವ ಅವಶ್ಯಕತೆಯಿದೆ ಎಂದರು.
ಸಮಾಜದಲ್ಲಿ ಬಾಲಕಿಯರ ಅವಶ್ಯಕತೆಗಳ ಕುರಿತು ಜಾಗೃತಿಯನ್ನು ಹೆಚ್ಚಿಸಲು, ವಿವಿಧ ರಾಜಕೀಯ ಮತ್ತು ಸಮುದಾಯದ ನಾಯಕರು ಸಮಾನ ಶಿಕ್ಷಣ ಮತ್ತು ಮೂಲಭೂತ ಸ್ವಾತಂತ್ರö್ಯಕ್ಕಾಗಿ ಸಾರ್ವಜನಿಕವಾಗಿ ಚರ್ಚೆ ನಡೆಸುತ್ತಿದ್ದಾರೆ. ಹೆಣ್ಣು ಮಕ್ಕಳು ತಮ್ಮ ಎಲ್ಲಾ ಹಕ್ಕುಗಳು ಹಾಗೂ ಕಾನೂನು ಹಕ್ಕುಗಳು ಮತ್ತು ಜೀವನದ ಸತ್ಯಗಳನ್ನು ತಿಳಿದಿರಲೇಬೇಕು. ಅವರು ಉತ್ತಮ ಶಿಕ್ಷಣ , ಪೌಷ್ಟಿಕತೆ ಮತ್ತು ಆರೋಗ್ಯ ರಕ್ಷಣೆ ಹಕ್ಕುಗಳನ್ನು ಹೊಂದಿದ್ದಾರೆ, ನಮ್ಮ ದೇಶದಲ್ಲಿ ಮಾಹಿಳಾ ಸಾಕ್ಷರತಾ ಪ್ರಮಾಣ ಇನ್ನೂ ಶೇ.53.87ರಷ್ಟು ಮತ್ತು ಯುವತಿಯರಲ್ಲಿ ಮೂರನೇ ಒಂದು ಭಾಗದಷ್ಟು ಪೌಷ್ಟಿಕತೆ ಕೊರತೆ ಇದೆ. ಸಂತಾನೋತ್ಪತ್ತಿ ವಯಸ್ಸಿನ ಮಹಿಳೆಯರು ಸಮಾಜದಲ್ಲಿ ಲಿಂಗ ತಾರತಮ್ಯ ಮತ್ತು ಆರೋಗ್ಯ ಸೇವೆಗಳಿಗೆ ಸೀಮಿತ ಪ್ರದೇಶದ ಕಾರಣದಿಂದಾಗಿ ವಿವಿಧ ರೋಗಗಳಿಂದ ರಕ್ತಹೀನತೆಯಂದ ಬಳುತ್ತಿದ್ದಾರೆ ಎಂದರು.
ಟಿ.ಬಿ.ಡ್ಯಾಮ್ ಸರಕಾರಿ ಪ್ರೌಢಶಾಲೆಯ ನಿವೃತ್ತ ಮುಖ್ಯಗುರು ಪ್ರಭಾಕರ್ ಅವರು ಅಧ್ಯಕ್ಷತೆ ವಹಿಸಿದ್ದರು.
ಮಕ್ಕಳ ಸಹಾಯವಾಣಿ ಕೇಂದ್ರದ ಸಂಯೋಜಕ ಚಿದಾನಂದ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಟಿ.ಬಿ.ಡ್ಯಾಂ ಪೊಲೀಸ್ ಠಾಣೆಯ ಸಹಾಯಕ ಉಪನಿರೀಕ್ಷಕ ಆನಂದ, ಸಹಶಿಕ್ಷಕರಾದ ರಾಮ್ ಮೋಹನ್ ರೆಡ್ಡಿ, ವೇಲಾಂಗಣಿಮೇರಿ, ನಾಗರತ್ನ ಮತ್ತಿತರರು ಇದ್ದರು.
ನೇತ್ರಾವತಿ ನಿರೂಪಿಸಿದರು.

LEAVE A REPLY

Please enter your comment!
Please enter your name here