ಹಂಪಿಯಲ್ಲಿ “ದೇವಯಾತನಂ-ಭಾರತೀಯ ದೇವಾಲಯ ವಾಸ್ತುಶಿಲ್ಪ ಅದ್ಭುತ ಮಹಾಕಾವ್ಯ’’ ಕುರಿತ ಅಂತಾರಾಷ್ಟ್ರೀಯ ಸಮ್ಮೇಳನ ಫೆ.25ರಿಂದ

0
133

ಹೊಸಪೇಟೆ(ವಿಜಯನಗರ ಜಿಲ್ಲೆ),ಫೆ.24: ರಾಷ್ಟ್ರವ್ಯಾಪಿ ನಡೆಯುತ್ತಿರುವ ಆಜಾದಿ ಕಾ ಅಮೃತ ಮಹೋತ್ಸವದ ಭಾಗವಾಗಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ(ಎಎಸ್‍ಐ)ಯು ಹಂಪಿಯಲ್ಲಿ ಇದೇ ಫೆ.25 ಮತ್ತು 26ರಂದು ಎರಡು ದಿನಗಳ ಕಾಲ “ದೇವಯಾತನಂ-ಭಾರತೀಯ ದೇವಾಲಯ ವಾಸ್ತುಶಿಲ್ಪ ಅದ್ಭುತ ಮಹಾಕಾವ್ಯ’’ ಕುರಿತ ಅಂತಾರಾಷ್ಟ್ರೀಯ ಸಮ್ಮೇಳನವನ್ನು ಆಯೋಜಿಸಲಾಗಿದೆ.
ಕೇಂದ್ರ ಪ್ರವಾಸೋದ್ಯಮ,ಸಂಸ್ಕøತಿ ಸಚಿವರಾದ ಜಿ. ಕಿಶನ್ ರೆಡ್ಡಿ ಅವರು ಫೆ.25ರಂದು ಬೆಳಗ್ಗೆ 9:30ಕ್ಕೆ ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ. ಕರ್ನಾಟಕ ಸರ್ಕಾರದ ಪ್ರವಾಸೋದ್ಯಮ ಸಚಿವ ಆನಂದ್‍ಸಿಂಗ್, ಲೋಕಸಭಾ ಸದಸ್ಯರಾದ ವೈ.ದೇವೇಂದ್ರಪ್ಪ ಮತ್ತು ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವರಾದ ಶಶಿಕಲಾ ಜೊಲ್ಲೆ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿರಲಿದ್ದಾರೆ.
ದೇವಾಲಯವು ಭಾರತೀಯ ಜೀವನದ ಅವಿಭಾಜ್ಯ ಅಂಗವಾಗಿದೆ ಮತ್ತು ಅದರ ಪೂರಕ ವ್ಯವಸ್ಥೆಯು ಅನಾದಿ ಕಾಲದಿಂದಲೂ ತನ್ನದೇ ಆದ ರೀತಿಯಲ್ಲಿ ಪುರುಷ ಮತ್ತು ಪ್ರಕೃತಿ ಎರಡರ ಅಭಿವ್ಯಕ್ತಿಯಾಗಿ ಗ್ರಹಿಸಲ್ಪಟ್ಟಿದೆ ಮತ್ತು ಬ್ರಹ್ಮಾಂಡದ ಕನ್ನಡಿಯಾಗಿ ಕಂಡುಬರುತ್ತದೆ. ದೇವಾಲಯದ ನಿರ್ಮಾಣವು ಉಪಖಂಡದಲ್ಲಿ ಮಾತ್ರವಲ್ಲದೆ ಆಗ್ನೇಯ ಮತ್ತು ಪೂರ್ವ ಏಷ್ಯಾದಂತಹ ಹತ್ತಿರದ ನೆರೆಹೊರೆ ರಾಷ್ಟ್ರಗಳಿಗೂ ಪ್ರಯಣಿಸಿದೆ. ಆದ್ದರಿಂದ, ದೇವಾಲಯದ ವಾಸ್ತುಶಿಲ್ಪದ ಕಲೆ ಮತ್ತು ತಂತ್ರವು ಹೇಗೆ ಹರಡಿತು ಎಂಬುದು ಆಸಕ್ತಿಕರ ಅಧ್ಯಯನವಾಗಿದೆ. ಭಾರತವು ಇತರ ಪ್ರದೇಶಗಳಿಗೆ ಮತ್ತು ಸ್ಥಳೀಯ ಅಗತ್ಯತೆಗಳಿಗೆ ಸರಿಹೊಂದುವಂತೆ ಈ ಕಲೆಯನ್ನು ಹೇಗೆ ಮಾರ್ಪಡಿಸಲಾಗಿದೆ ಮತ್ತು ಅದು ಹೇಗೆ ಹೊಸ ವಾಸ್ತುಶಿಲ್ಪದ ಶೈಲಿಗಳ ಅಭಿವೃದ್ಧಿಗೆ ಸ್ಫೂರ್ತಿ ನೀಡುತ್ತದೆ ಎಂಬುದು ಮುಖ್ಯವಾಗಿದೆ.
ಸಮ್ಮೇಳನಕ್ಕೆ ಆಯ್ಕೆಮಾಡಿರುವ ಸ್ಥಳ ಹಂಪಿಯು ಕ್ರಿ.ಶ 1336 ರಿಂದ 1556 ವರೆಗೆ ಎರಡು ಶತಮಾನಕ್ಕೂ ಅಧಿಕ ಕಾಲ ವಿಜಯನಗರದ ಮಹಾ ಮಧ್ಯಕಾಲೀನ ಯುಗದ ಸಾಮ್ರಾಜ್ಯದ ರಾಜಧಾನಿಯಾಗಿ ಸೇವೆ ಸಲ್ಲಿಸಿತ್ತು. ಸಮ್ಮೇಳನವು ದೇವಾಲಯಗಳ ತಾತ್ವಿಕ, ಧಾರ್ಮಿಕ, ಸಾಮಾಜಿಕ, ಆರ್ಥಿಕ, ತಾಂತ್ರಿಕ, ವೈಜ್ಞಾನಿಕ, ಕಲೆ ಮತ್ತು ವಾಸ್ತುಶಿಲ್ಪದ ಅಂಶಗಳನ್ನು ಚರ್ಚಿಸುವ ಗುರಿಯನ್ನು ಹೊಂದಿದೆ. ಅಲ್ಲದೆ, ನಾಗರ, ವೇಸರ, ದ್ರಾವಿಡ, ಕಳಿಂಗಾ ಮತ್ತು ಇತರ ದೇವಾಲಯಗಳ ವಾಸ್ತುಶಿಲ್ಪದ ನಾನಾ ಶೈಲಿಗಳ ಉದಯ ಮತ್ತು ಅಭಿವೃದ್ಧಿಯ ಕುರಿತು ಸಂವಾದ ನಡೆಸಲು ಸಮ್ಮೇಳನ ಉದ್ದೇಶಿಸಿದೆ.
ಆಗ್ನೇಯ ಏಷ್ಯಾದ ದೇಶಗಳ ಸುಮಾರು 30 ಹೆಸರಾಂತ ವಿದ್ವಾಂಸರು ಮತ್ತು ರಾಯಭಾರಿಗಳು ಪ್ರಾಚೀನ ದೇವಾಲಯದ ವಾಸ್ತುಶಿಲ್ಪದ ಬಗ್ಗೆ ತಮ್ಮ ಜ್ಞಾನವನ್ನು ಹಂಚಿಕೊಳ್ಳಲು ಸಮ್ಮೇಳನದಲ್ಲಿ ಭಾಗವಹಿಸುತ್ತಿದ್ದಾರೆ.
ಇದೇ ಸಂದರ್ಭದಲ್ಲಿ ದೇಶಾದ್ಯಂತ ಇರುವ 75 ದೇವಾಲಯಗಳ ಕಿರುಪುಸ್ತಕವನ್ನು ಬಿಡುಗಡೆ ಮಾಡಲಾಗುವುದು.
ಆಜಾದಿ ಕಾ ಅಮೃತ್ ಮಹೋತ್ಸವ ಆಚರಣೆಯು ಭಾರತದ ಸಾಮಾಜಿಕ-ಸಾಂಸ್ಕೃತಿಕ, ರಾಜಕೀಯ ಮತ್ತು ಆರ್ಥಿಕ ಗುರುತು ಮತ್ತು ಸ್ವಾತಂತ್ರ್ಯದ ನಂತರದ ಪ್ರಗತಿಯನ್ನು ಗುರುತಿಸುವುದಾಗಿದೆ. ಶತಮಾನಗಳಿಂದ ದೇವಾಲಯಗಳು ಸಮಾಜ ಮತ್ತು ಸಂಸ್ಕøತಿಗೆ, ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ, ಕಲೆ ಮತ್ತು ಆರ್ಥಿಕತೆಗೆ, ಆಚರಣೆಗಳು ಮತ್ತು ಸಂಪ್ರದಾಯಗಳಿಗೆ, ಭಕ್ತಿ ಮತ್ತು ಆಧ್ಯಾತ್ಮಿಕತೆಗೆ, ಭೂತ ಮತ್ತು ಭವಿಷ್ಯಕ್ಕೆ ಕೇಂದ್ರಬಿಂದುವಾಗಿದೆ. ಈ ಸಂದರ್ಭದಲ್ಲಿ ನಾವು ನಮ್ಮ ವೈಭವದ ಸಂಪ್ರದಾಯಗಳು ಮತ್ತು ಹಿಂದಿನ ಸಂಸ್ಕೃತಿಯನ್ನು ಪ್ರಸ್ತುತ ಮತ್ತು ಭವಿಷ್ಯದೊಂದಿಗೆ ಸಂಯೋಜಿಸಲು ಇದು ಸೂಕ್ತ ಸಮಯವಾಗಿದೆ.

LEAVE A REPLY

Please enter your comment!
Please enter your name here