ಹಳೆ ವಿದ್ಯಾರ್ಥಿಗಳಿಂದ ‘ಗುರುವಂದನೆ’ ಮತ್ತು ಸ್ನೇಹಕೋತ್ಸವ

0
158

ವಿಜಯನಗರ:ಡಿ:13:ಕಮಲಾಪುರ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದ ಗುರುವಂದನಾ ಮತ್ತು ಸ್ನೇಹಕೋತ್ಸವ ಕಾರ್ಯಕ್ರಮವನ್ನು ನಿವೃತ್ತ ಶಿಕ್ಷಕರಾದ ಶ್ರೀಧರಮೂರ್ತಿ ಉದ್ಘಾಟಿಸಿದರು

‘ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳುವ ಮೂಲಕ ಸಮಾಜದ ಗೌರವಕ್ಕೆ ಪಾತ್ರರಾಗುವುದೇ ವಿದ್ಯಾರ್ಥಿಗಳು ಶಿಕ್ಷಕರಿಗೆ ನೀಡುವ ಬಹುದೊಡ್ಡ ಕೊಡುಗೆ’ ಎಂದು ನಿವೃತ್ತ ಶಿಕ್ಷಕ ಶ್ರೀಧರಮೂರ್ತಿ ಅಭಿಪ್ರಾಯಪಟ್ಟರು.

ವಿಜಯನಗರ ಜಿಲ್ಲೆ ಹೊಸಪೇಟೆ ತಾಲೂಕ ಕಮಲಾಪುರ ಸರ್ಕಾರಿ ಪ್ರೌಢಶಾಲೆಯಲ್ಲಿ 1990 – 1991 ನೇ ಸಾಲಿನಲ್ಲಿ ಕಲಿತ ಹಳೆ ವಿದ್ಯಾರ್ಥಿಗಳು ಹಮ್ಮಿಕೊಂಡಿದ್ದ ‘ಗುರುವಂದನಾ ಮತ್ತು ಸ್ನೇಹಕೋತ್ಸವ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದಅವರು,
ಅಕ್ಷರ ಕಲಿಸಿದ ಗುರುಗಳ ಕುರಿತು ವಿದ್ಯಾರ್ಥಿಗಳು ಹೊಂದಿದ ಗೌರವ, ಪ್ರೀತಿ, ವಿಶ್ವಾಸ ಪ್ರಚುರ ಪಡಿಸಲು ಹಾಗೂ ಹಳೆ ವಿದ್ಯಾರ್ಥಿಗಳು 30 ವರ್ಷಗಳ ಅನಂತರ ಒಂದೆಡೆ ಸೇರಿ ವಿದ್ಯಾರ್ಥಿ ಜೀವನದ ನೆನೆಪುಗಳನ್ನು ಮೆಲುಕು ಹಾಕಲು ಇದೊಂದು ಒಳ್ಳೆಯ ಸಂದರ್ಭ’ ಎಂದರು.

ನಿವೃತ್ತ ಶಿಕ್ಷಕರಾದ ಶ್ರೀಧರಮೂರ್ತಿ, ನಾಗೇಶ್, ಬಾಲಚಂದ್ರ, ನಾನೋಹರ್, ಮಿತಿಲಾಬಾಯಿ, ಒಂಕಾರಪ್ಪ, ಸುರೇಖಾ ಅವರನ್ನು ಹಳೆ ವಿದ್ಯಾರ್ಥಿಗಳು ಸನ್ಮಾನಿಸಿ ಗೌರವ ಸಲ್ಲಿಸಿದರು.

ಈಸಂಧರ್ಭದಲ್ಲಿ ವಿದ್ಯಾರ್ಥಿಗಳಾದ ಮಂಜುನಾಥ, ಶಶಿಧರ್ ಜೀರ್, ಸುಭಾನ್, ದಿನೇಶ್, ಸಾಹೇರ್ ಹುಸೇನ್, ರಸೂಲ್, ಜಿ. ಸುನಿತಾ, ಸುರೇಖಾ, ಸುನೀತಾ ಬಾಯಿ, ಸವಿತಾ, ಶಿವಲೀಲಾ, ಅಪರ್ಣ, ಸೀತಾ, ಲಕ್ಷ್ಮಿ,, ಜಲಜಾಕ್ಷಿ, ಇತರರು ಪಾಲ್ಗೊಂಡಿದ್ದರು.

ವರದಿ: ಪಿ ವಿ ಕಾವ್ಯ

LEAVE A REPLY

Please enter your comment!
Please enter your name here