ಮೆಟ್ರಿಕಿ ಗ್ರಾಮದಲ್ಲಿ ಕೋವಿಡ್ ಲಸಿಕಾಕರಣ ಮತ್ತು ಮುಂಜಾಗ್ರತಾ ಕ್ರಮಗಳ ಕುರಿತು ಜಾಗೃತಿ ಜಾಥ,

0
647

ಸಂಡೂರು:ಪೆ:24:- ತಾಲೂಕಿನ ಮೆಟ್ರಿಕಿ ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಗ್ರಾಮ ಪಂಚಾಯತಿ ಮೆಟ್ರಿಕಿ, ಹಾಗೂ ಸ್ನೇಹ ಸಂಸ್ಥೆ ಕೂಡ್ಲಿಗಿ ಇವರ ಸಂಯುಕ್ತ ಆಶ್ರಯದಲ್ಲಿ ಕೋವಿಡ್ ಲಸಿಕಾಕರಣ ಮತ್ತು ಕೋವಿಡ್ ಮುಂಜಾಗ್ರತಾ ಕ್ರಮಗಳ ಕುರಿತು ಜಾಗೃತಿ ಜಾಥ ಹಮ್ಮಿಕೊಳ್ಳಲಾಗಿತ್ತು,

ಜಾಥಕ್ಕೆ ಚಾಲನೆ ನೀಡಿದ ಮೆಟ್ರಿಕಿ ಆರೋಗ್ಯ ಕೇಂದ್ರದ ಆಯುಶ್ ವೈದ್ಯಾಧಿಕಾರಿ ಡಾ. ಸಾಯಿರಾಮ್ ಮಾತನಾಡಿ ಹದಿನೈದು ವರ್ಷ ಮೇಲ್ಪಟ್ಟ ಎಲ್ಲಾ ವಯಸ್ಸಿನವರು ಕಡ್ಡಾಯವಾಗಿ ಎರಡೂ ಡೋಸ್ ಲಸಿಕೆ ಹಾಕಿಸಿಕೊಳ್ಳಬೇಕು, ಎರಡೂ ಡೋಸ್ ಹಾರಿಸಿಕೊಂಡರೆ ಮಾತ್ರ ವೈರಸ್ ಎಷ್ಟೇ ರೂಪಾಂತರ ಹೊಂದಿ ಬರಲಿ ದೇಹದಲ್ಲಿ ನಿರೋಧಕ ಶಕ್ತಿ ಹೆಚ್ಚಲಿದೆ, ರೂಪಾಂತರಿ ವೈರಸ್ ಬಂದರೂ ಪ್ರಾಣಪಾಯವಾಗದು ಎಂದು ತಿಳಿಸಿದರು, ಕೆಲವು ದಿನಗಳಿಂದ ಸ್ನೇಹ ಸಂಸ್ಥೆಯು ಈ ಭಾಗದ ಹಳ್ಳಿಗಳಲ್ಲಿ ಜಾಗೃತಿ ಮೂಡಿಸುವ ಕಾರ್ಯವು ಮೆಚ್ಚಿಗೆ ಸೂಚಿಸುವಂತಿದೆ, ಜನರು ಸಹ ಸಹಕಾರ ನೀಡುತ್ತಿದ್ದಾರೆ ಇದು ಎಲ್ಲಾ ಸಂಘ ಸಂಸ್ಥೆಗಳಿಗೆ ಮಾದರಿಯಾಗಿದೆ ಇದರಿಂದ ಆರೋಗ್ಯ ಇಲಾಖೆಗೆ ಅನುಕೂಲವಾಗಲಿದೆ ಎಂದು ತಿಳಿಸಿದರು, ಹಾಗೆ ಸ್ನೇಹ ಸಂಸ್ಥೆಯವರು ಆರೋಗ್ಯ ಕೇಂದ್ರಕ್ಕೆ ಒಂದು ವ್ಯಾಕ್ಸಿನ್ ಕ್ಯಾರಿಯರ್ ಮತ್ತು 600 ಪ್ಯಾರಾಸಿಟಾಮೋಲ್ ಮಾತ್ರೆಗಳನ್ನು ಕೊಡುಗೆಯಾಗಿ ನೀಡಿದ್ದಾರೆ ಇದು ಹೆಮ್ಮೆಯ ವಿಷಯವಾಗಿದೆ ಎಂದು ತಿಳಿಸಿದರು,

ಈ ಸಂದರ್ಭದಲ್ಲಿ ಮೆಟ್ರಿಕಿ ಗ್ರಾಮ ಪಂಚಾಯತಿ ಸದಸ್ಯರಾದ ಮಂಜುನಾಥ್, ಮುಖಂಡರಾದ ರಾಜಶೇಖರ್,ಡಾ. ಸಾಯಿರಾಮ್, ಡಾ.ಹರೀಶ್, ಕಾರ್ಯದರ್ಶಿ ಪ್ರಭಾಕರ್, ಸ್ನೇಹ ಸಂಸ್ಥೆಯ ಕೋಅರ್ಡಿನೇಟರ್ ಜಗದೀಶ್, ಮಮತಾ, ಮಂಜುನಾಥ್, ಸುಲೋಚನ, ತಾಯಮ್ಮ,ಶಿವಮ್ಮ, ಕೀರ್ತಿ, ಆರೋಗ್ಯ ಕೇಂದ್ರದ ಸಿಬ್ಬಂದಿ ಜಡೆಮ್ಮ, ಗೋವಿಂದ, ಆಶಾ ಕಾರ್ಯಕರ್ತೆಯರಾದ ಅನುಪಮಾ, ಗೌರಮ್ಮ, ಲಕ್ಷ್ಮಿ, ರತ್ನಮ್ಮ ಇತರರು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here