ಬಂಡ್ರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಸಾಮೂಹಿಕ ಸೀಮಂತ ಕಾರ್ಯಕ್ರಮ…!!!

0
923

ಸಂಡೂರು: ಮಾ: 9: ಪ್ರಧಾನಮಂತ್ರಿ ಮಾತೃ ವಂದನಾ ಕಾರ್ಯಕ್ರಮ ಅಂಗವಾಗಿ ಬಂಡ್ರಿ ಗ್ರಾಮದಲ್ಲಿ ಗರ್ಭಿಣಿ ಮಹಿಳೆಯರಿಗೆ ಆರೋಗ್ಯ ತಪಾಸಣೆ ಮತ್ತು ಹೆಚ್ಐವಿ ಪರೀಕ್ಷೆ, ಹಾಗೂ ಸೀಮಂತ ಕಾರ್ಯವನ್ನು ಆರೋಗ್ಯ ಇಲಾಖೆಯಿಂದ ಹಮ್ಮಿಕೊಳ್ಳಲಾಗಿತ್ತು

ಬಳ್ಳಾರಿ ಜಿಲ್ಲೆ ಸಂಡೂರು ತಾಲೂಕಿನ ಬಂಡ್ರಿ ಆರೋಗ್ಯ ಕೇಂದ್ರದಲ್ಲಿ,
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಳ್ಳಾರಿ, ರಾಜ್ಯ ಏಡ್ಸ್ ಪ್ರಿವೆನ್ಷನ್ ಸೊಸೈಟಿ ಮತ್ತು ಜಿಲ್ಲಾ ಹೆಚ್ ಐ ವಿ /ಏಡ್ಸ್ ನಿಯಂತ್ರಣ ಮತ್ತು ನಿರ್ವಾಹಕ ಘಟಕ ಬಳ್ಳಾರಿ, ಮತ್ತು ತಾಲೂಕು ಆರೋಗ್ಯಾಧಿಕಾರಿಗಳ ಕಾರ್ಯಾಲಯ ಸಂಡೂರು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಬಂಡ್ರಿ ಇವರ ಸಂಯುಕ್ತ ಆಶ್ರಯದಲ್ಲಿ ದಿನಾಂಕ 09.03. 2022 ರಂದು “ಪ್ರಧಾನಮಂತ್ರಿ ಮಾತೃ ವಂದನಾ ದಿನಾಚರಣೆ” ಯ ಅಂಗವಾಗಿ ಗರ್ಭಿಣಿಯರಿಗಾಗಿ ಹೆಚ್ಐವಿ/ ಏಡ್ಸ್ ವಿಚಾರಗಳ ಅರಿವು ಹಾಗೂ ತಾಯಿಯಿಂದ ಮಗುವಿಗೆ ಎಚ್ಐವಿ ಸೋಂಕು ಹರಡುವಿಕೆ ನಿರ್ಮೂಲನೆ ಆಂದೋಲನ ಕುರಿತು ಜಾಗೃತಿ ಕಾರ್ಯಕ್ರಮ ಮತ್ತು ಹೆಚ್.ಐ.ವಿ ಪರೀಕ್ಷೆ ಮತ್ತು ಸೀಮಂತ ಕಾರ್ಯವನ್ನು ಹಮ್ಮಿಕೊಳ್ಳಲಾಗಿತ್ತು,
ಈ ಜಾಗೃತಿ ಕಾರ್ಯಕ್ರಮದಲ್ಲಿ ಬಂಡ್ರಿ ಪ್ರಾಥಮಿಕ ಕೇಂದ್ರದ ವ್ಯಾಪ್ತಿಯ ಗರ್ಭಿಣಿ ಮಹಿಳೆಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಈ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ತಾಲ್ಲೂಕು ಆರೋಗ್ಯ ಅಧಿಕಾರಿಗಳಾದ ನವೀನ್ ಕುಮಾರ್ ಹುಟ್ಟುವ ಮಕ್ಕಳಿಗೆ ಎಚ್ಐವಿ ಸೋಂಕು ಬರದಂತೆ ತಡೆಗಟ್ಟಲು ಗರ್ಭಿಣಿ ಇರುವಾಗಲೇ ಹೆಚ್ಐವಿ ಪರೀಕ್ಷೆ ಮಾಡಿಸಿಕೊಳ್ಳಬೇಕು, ಹೆಚ್ ಐ ವಿ ಹರಡುವ ನಾಲ್ಕು ವಿಧಾನಗಳಾದ ಅಸುರಕ್ಷಿತ ಲೈಂಗಿಕ ಕ್ರಿಯೆ, ಅಸುರಕ್ಷಿತ ರಕ್ತ ಪಡೆಯುವ, ಬ್ಲೇಡ್, ಸಿರಂಜು ಇತರೆ ಹರಿತ ವಸ್ತುಗಳ ಅಸುರಕ್ಷತೆ, ಮತ್ತು ಗರ್ಭಿಣಿಯಿಂದ ಹುಟ್ಟುವ ಶಿಶುವಿಗೆ ಹರಡುವ ವಿಧಾನಗಳ ಬಗ್ಗೆ ವಿವರಿಸಿ ಮಾಹಿತಿ ನೀಡಿದರು,

ಡಾ.ಭರತ್ ಕುಮಾರ್ ಮಾತನಾಡಿ, ಅಪಾಯಕಾರಿ ಗರ್ಭಿಣಿಯರ ಪತ್ತೆಗಾಗಿ ಪ್ರಧಾನಮಂತ್ರಿ ಸುರಕ್ಷಿತ ಮಾತೃತ್ವ ಅಭಿಯಾನದ ಅಡಿಯಲ್ಲಿ ಗರ್ಭಿಣಿ ಸ್ತ್ರೀಯರ ಆರೋಗ್ಯ ತಪಾಸಣೆಯನ್ನು ಪ್ರತಿ ತಿಂಗಳು 9ನೇ ತಾರೀಕಿನಂದು ಎಲ್ಲಾ ಕೇಂದ್ರಗಳಲ್ಲಿ ನಡೆಯುತ್ತಿದೆ, ಪ್ರತಿ ತಿಂಗಳು ಗರ್ಭಿಣಿ ಮಹಿಳೆಯರ ಆರೋಗ್ಯ ತಪಾಸಣೆ ಮಾಡಲಾಗುತ್ತಿದೆ, ಸುರಕ್ಷಿತ ಹೆರಿಗೆ ಮತ್ತು ಮಗುವಿನ ಸಂರಕ್ಷಣೆಯ ಉದ್ದೇಶವನ್ನು ಇಟ್ಟುಕೊಂಡು ಯಾವುದೇ ತಾಯಿ ಮರಣ ಅಥವಾ ಶಿಶು ಮರಣವಾಗದಂತೆ ಎಚ್ಚರಿಕೆ ವಹಿಸಲಾಗುವುದು ಎಂದು ತಿಳಿಸಿದರು,

ಡಾ. ಚಂದ್ರಪ್ಪ ಮಾತನಾಡಿ ಗರ್ಭಿಣಿಯರಿಗೆ ಸರ್ಕಾರದಿಂದ ನೆರವೆರಿಸುವ ಸೀಮಂತ ಕಾರ್ಯದ ಉದ್ದೇಶ ಮತ್ತು ಮಹತ್ವದ ಬಗ್ಗೆ ತಿಳಿಸಿದ ನಂತರ ಸೀಮಂತ ಕಾರ್ಯ ನೆರವೇರಿಸಿದರು, ಹಾಗೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಗರ್ಭಿಣಿ ಮಹಿಳೆಯರಿಗೆ ಹೆಚ್ ಐ ವಿ/ ಏಡ್ಸ್ ಸೋಂಕು ಕುರಿತು ಸುರಕ್ಷತೆಯ ಕರಪತ್ರ ವಿತರಣೆ ಮಾಡಲಾಯಿತು

ಈ ಸಂದರ್ಭದಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾ.ನವೀನ್ ಕುಮಾರ್, ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ಭರತ್ ಕುಮಾರ್ ಡಾ.ಚಂದ್ರಪ್ಪ, ಹಿರಿಯ ಆರೋಗ್ಯ ಸುರಕ್ಷಾ ಅಧಿಕಾರಿ ಪದ್ಮಾವತಿ, ಅನುಷಾ, ಐಸಿಟಿಸಿ ಕೌನ್ಸಿಲರ್ ಮರೇಗೌಡ, ಅಮ್ಜದ್, ಆಶಾ ಕಾರ್ಯಕರ್ತೆ ಪಾಪಮ್ಮ, ಈರಮ್ಮ,ಭೀಮವ್ವ, ಕಾಳಮ್ಮ, ಮಂಗಳ, ಇತರರು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here