ಹಳ್ಳಿಹಳ್ಳಿಗೂ ಆರೋಗ್ಯ ಸೇವೆ ಒದಗಿಸುವ ಸೇವೆ ಆತ್ಮತೃಪ್ತಿ ತಂದಿದೆ ಡಾ.ಶೋಭಾ.

0
398

ಸಂಡೂರು:ಜ:01:-ಅಮೃತವಾಹಿ ಯೋಜನೆ ಮೂಲಕ ಪೈಲೆಟ್ ಪ್ರಾಜೆಕ್ಟ್ ಆಗಿ ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನಲ್ಲಿ ಎನ್.ಎಮ್.ಡಿ.ಸಿ ಅನುದಾನದಲ್ಲಿ ಹನ್ನೊಂದು ಮೊಬೈಲ್ ಮೆಡಿಕಲ್ ಯುನಿಟ್ ವಾಹನಗಳ ಸೇವೆಯನ್ನು ಕಳೆದ 2021ರ ಜನವರಿ 2 ರಂದು ಮಾನ್ಯ ಶಾಸಕರಾದ ಶ್ರೀ ಇ ತುಕಾರಾಂ ಅವರು ಮತ್ತು ಸಚಿವರಾದ ಶ್ರೀ ಆನಂದ್ ಸಿಂಗ್ ಅವರು ಉದ್ಘಾಟನೆ ಮಾಡಿ ಪ್ರತಿ ಹಳ್ಳಿಗೂ ಸೇವೆಗಳನ್ನು ನೀಡಲು ಸೂಚಿಸಿದ್ದರು ಅದರಂತೆ ಇಂದಿಗೆ ಒಂದು ವರ್ಷ ಪೂರ್ಣಗೊಳಿಸಿದ ಸಂಭ್ರಮವನ್ನು ಸಂಡೂರು ಪಟ್ಟಣದಲ್ಲಿ ಮೆಟ್ರಿಕಿ, ಭುಜಂಗನಗರ, ಸೋವೇನಹಳ್ಳಿಯ ವ್ಯಾಪ್ತಿಯ ಮೂರು ಮೊಬೈಲ್ ಮೆಡಿಕಲ್ ಯುನಿಟ್ ಗಳ ವೈದ್ಯರು,ಫಾರ್ಮಸಿಸ್ಟ್, ಸ್ಟಾಫ್ ನರ್ಸ್,ಲ್ಯಾಬ್ ಟೆಕ್ನಾಲಜಿಸ್ಟ್, ಎ.ಎನ್.ಎಮ್, ಮತ್ತು ವಾಹನ ಚಾಲಕರು ಕೆಕ್ ಕಟ್ ಮಾಡಿ ಸಂಭ್ರಮ ಹಂಚಿಕೊಂಡರು,

ಈ ಸಂದರ್ಭದಲ್ಲಿ ಮಾತನಾಡಿದ ಡಾ.ಶೋಭ ವಾಹನಗಳಿಗೆ ಹಳ್ಳಿಯ ಜನರಿಂದ ಉತ್ತಮ ಸ್ಪಂದನೆ ಉಂಟಾಗಿದೆ, ಗುಣಾತ್ಮಕ ಸೇವೆಯನ್ನು ಜನರಿಗೆ ನೀಡುತ್ತಿದ್ದೇವೆ.
ನಿಗದಿತ ವಾರ ತಮ್ಮ ಗ್ರಾಮಕ್ಕೆ ವೈದ್ಯರು ಬರುವುದನ್ನು ಜನ ಕಾಯುತ್ತಾರೆ ಆರೋಗ್ಯ ಸೇವೆಗಳೊಂದಿಗೆ ಕೋವಿಡ್ ನಿಯಂತ್ರಣ ಕಾರ್ಯವನ್ನು ಮಾಡಿದ್ದೇವೆ, ಕೋವಿಡ್ ವ್ಯಾಕ್ಸಿನೇಷನ್‌ ಮಾಡಲು ಸಹ ನಮಗೆ ಅವಕಾಶ ಇಲಾಖೆ ಮಾಡಿಕೊಟ್ಟಿದೆ,ಜನರಿಗೆ ಉತ್ತಮ ಔಷಧಗಳನ್ನು ಪೂರೈಸುತ್ತಿದ್ದೇವೆ ಇದರಿಂದ ಜನರಿಗೆ ಉತ್ತಮ ಸೇವೆ ನೀಡುತ್ತಿದ್ದೆವೆ ಎನ್ನುವ ತೃಪ್ತಿ ನಮ್ಮೆಲ್ಲರಿಗೂ ಇದೆ, ಕೋವಿಡ್ ಎರಡನೇ ಅಲೆಯಲ್ಲಿ ಜಿಲ್ಲೆಯ ಬೇರೆ ಬೇರೆ ತಾಲೂಕಿಗೂ ನಿಯೋಜನೆ ಮಾಡಿದ್ದರು ಆಗಲೂ ನಾವು ಹೆಮ್ಮೆಯಿಂದ ಕರ್ತವ್ಯ ನಿರ್ವಹಣೆ ಮಾಡಿದ್ದೇವೆ ಇದು ನಮಗೆ ಮತ್ತಷ್ಟು ಸಂತಸ ತಂದಿದೆ, ಇಂತಹ ಉತ್ತಮ ಸೇವೆಯನ್ನು ಜಿಲ್ಲೆಯ ಎಲ್ಲಾ ತಾಲೂಕಿಗೂ ವಿಸ್ತರಿಸಬೇಕಿದೆ ಎಂದು ತಿಳಿಸಿದರು,

ಈ ಸಂದರ್ಭದಲ್ಲಿ ಸ್ಕಾಡ್ ವೆಸ್ ಮೊಬೈಲ್ ಮೆಡಿಕಲ್ ಯುನಿಟ್ ನ ಡಾ.ಶೋಭಾ, ಜಿ.ಎನ್.ಎಮ್ ಪವಿತ್ರ,ಲಕ್ಷ್ಮಿ, ಫಾರ್ಮಸಿಸ್ಟ್ ಶೃತಿ,ಪವಿತ್ರ, ಲ್ಯಾಬ್ ಟೆಕ್ನಾಲಜಿಸ್ಟ್ ನಾಗವೇಣಿ,ಅನುಪಮಾ, ಎ.ಎನ್.ಎಮ್ ಲತಾ,ರಶ್ಮಿ,ನೌಷದ್, ರಜಿಯಾ, ಶರತ್ ಕುಮಾರ್ ಇತರರು ಸಿಹಿ ಹಂಚಿ ಸಂಭ್ರಮಿಸಿದರು

LEAVE A REPLY

Please enter your comment!
Please enter your name here