ರಕ್ತವನ್ನು ಕೃತಕವಾಗಿ ತಯಾರಿಸಲು ಸಾಧ್ಯವಿಲ್ಲ ಮನುಷ್ಯರೇ ದಾನವಾಗಿ ಕೊಡಬೇಕಿದೆ; ಶಿವಪ್ಪ

0
300

ಸಂಡೂರು: ಜೂನ್: 14: ತೋರಣಗಲ್ಲು ರೈಲ್ವೆ ನಿಲ್ದಾಣದ ಹೆಚ್.ಎಲ್.ಸಿ ಗಾರ್ಡನ್ ನಲ್ಲಿ ವೈದ್ಯ ವಿಜ್ಞಾನಿ ಕಾರ್ಲ್ ಲ್ಯಾಂಡ್ ಸ್ಟೈನರ್ ಅವರ ಜನ್ಮದಿನ ಅಂಗವಾಗಿ “ವಿಶ್ವ ರಕ್ತದಾನಿಗಳ ದಿನಾಚರಣೆ”ಕುರಿತು ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು

ಸಂಡೂರು ತಾಲೂಕಿನ ತೋರಣಗಲ್ಲು ರೈಲ್ವೆ ನಿಲ್ದಾಣದ ಹೆಚ್.ಎಲ್.ಸಿ ಗಾರ್ಡನ್ ನಲ್ಲಿ ವೈದ್ಯ ವಿಜ್ಞಾನಿ ಕಾರ್ಲ್ ಲ್ಯಾಂಡ್ ಸ್ಟೈನರ್ ಅವರ ಜನ್ಮದಿನ ಅಂಗವಾಗಿ “ವಿಶ್ವ ರಕ್ತದಾನಿಗಳ ದಿನಾಚರಣೆ”ಯನ್ನು ಆಚರಿಸಿ ಈ ಕುರಿತು ರಕ್ತದಾನದ ಮಹತ್ವ ಕುರಿತು ಯುವಕರಿಗೆ ಜಾಗೃತಿ ಮೂಡಿಸಲಾಯಿತು,

ಈ ಕಾರ್ಯಕ್ರಮದ ಉದ್ದೇಶ ಕುರಿತು ಮಾತನಾಡಿದ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ, ರಕ್ತದ ವರ್ಗಿಕರಣ ಶಾಸ್ತ್ರದಲ್ಲಿ ವೈದ್ಯ ವಿಜ್ಞಾನಿಗಳಾದ ಡಾ. ಕಾರ್ಲ್ ಲ್ಯಾಂಡ್ ಸ್ಟೈನರ್ ಅವರ ಅಪಾರ ಕೊಡುಗೆ ನೆನೆಯಲು ಅವರ ಜನ್ಮದಿನವನ್ನು 2005 ರಿಂದ ವಿಶ್ವ ರಕ್ತದಾನಿಗಳ ದಿನವನ್ನಾಗಿ ಅಚರಿಸಿ, ರಕ್ತದಾನ ಮಾಡಿದ ಮಹನೀಯರಿಗೆ ಕೃತಜ್ಞತೆಗಳನ್ನು ಅರ್ಪಿಸುವುದು ಮತ್ತು ಯುವ ಜನತೆಯನ್ನು ರಕ್ತದಾನ ಮಾಡವಂತೆ ಪ್ರೇರೇಪಿಸುವ ಕಾರ್ಯವನ್ನು ಮಾಡುವ ಉದ್ದೇಶವಾಗಿದ್ದು,

ರಕ್ತವನ್ನು ಕೃತಕವಾಗಿ ತಯಾರಿಸಲು ಸಾಧ್ಯವಿಲ್ಲ, ಮನುಷ್ಯರೇ ದಾನವಾಗಿ ಕೊಡಬೇಕಿದೆ, ಹಲವಾರು ಸಂದರ್ಭಗಳಲ್ಲಿ ಅಂದರೆ ರಕ್ತ ಹೀನತೆ ಹೊಂದಿದ ಗರ್ಭಿಣಿಯರಿಗೆ, ಗಂಡಾಂತರ ಹೆರಿಗೆ ಯಾಗುವ ಸಂದರ್ಭದಲ್ಲಿ,ಅಫಘಾತ ಸಂಭವಿಸಿದಾಗ, ಹಿಮೋಫಿಲಿಯಾ, ಥ್ಯಾಲಾಸೀಮಿಯದಂತಹ ಹಲವಾರು ಕಾಯಿಲೆಗಳಿಂದ ಬಳಲುವ ರೋಗಿಗಳಿಗೆ ರಕ್ತದ ಅವಶ್ಯಕತೆ ಇರುತ್ತದೆ, 18-60 ವರ್ಷ ದೊಳಗಿನ ವಯಸ್ಸಿನ 45 kg ತೂಕವಿರುವ, 12.5 ಗ್ರಾಂ ಹೆಚ್.ಬಿ ಇರುವ ಆರೋಗ್ಯವಂತರು ಪ್ರತಿ ಮೂರು ತಿಂಗಳಿಗೊಮ್ಮೆ ರಕ್ತದಾನ ಮಾಡ ಬಹುದು, ಮಹಿಳೆಯರು ನಾಲ್ಕು ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದು, ರಕ್ತದಾನ ಮಾಡುವುದರಿಂದ ಕ್ಯಾನ್ಸರ್, ಯಕೃತ್, ಹೃದಯ ಸಂಬಂಧಿ ಕಾಯಿಲೆಗಳು ತಡೆಯಬಹುದು, ಹೊಸ ರಕ್ತಕಣಗಳು ಉತ್ಪತ್ತಿಯಾಗುತ್ತವೆ, ಆರೋಗ್ಯವನ್ನು ವೃದ್ಧಿಸುತ್ತದೆ ಎಂದು ತಿಳಿಸಿದರು,

ಕಾರ್ಯವನ್ನು ಕಾರ್ಯಕ್ರಮಗಳ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ, 2023 ರ ಘೋಷ ವಾಕ್ಯದಂತೆ “ರಕ್ತನೀಡಿ, ಪ್ಲಾಸ್ಮಾ ನೀಡಿ, ಜೀವನವನ್ನು ಇತರರೊಂದಿಗೆ ಹಂಚಿಕೊಳ್ಳಿ, ಆಗಾಗ ಹಂಚಿಕೊಳ್ಳಿ” ಎಂಬ ವಾಕ್ಯವನ್ನು ಸಾರೋಣ ಎಂದು ತಿಳಿಸಿದರು,

ಈ ಸಂದರ್ಭದಲ್ಲಿ ಆರ್.ಕೆ.ಎಸ್.ಕೆ ಆಪ್ತ ಸಮಾಲೋಚಕ ಪ್ರಶಾಂತ್ ಕುಮಾರ್, ಆರೋಗ್ಯ ಸುರಕ್ಷಣಾಧಿಕಾರಿ ಭಾಗ್ಯಲಕ್ಷ್ಮಿ, ಆಶಾ ಕಾರ್ಯಕರ್ತೆ ಶ್ರೀದೇವಿ,ಹುಲಿಗೆಮ್ಮ, ಆಶಾ,ಪದ್ಮಾವತಿ,ತೇಜಮ್ಮ,ಕಾವೇರಿ,ವೆಂಕಟಲಕ್ಷ್ಮಿ,ಗೋವಿಂದಮ್ಮ,ರೇಖಾ, ಯುವಕರಾದ ಧೀರಜ್, ವಾಸುದೇವ್,ಯು.ತಿಪ್ಪೇಸ್ವಾಮಿ, ಸೂಗಪ್ಪ,ದಾಮೋಧರ್,ನಾಗಪ್ಪ, ಟಿ.ತಿಪ್ಪೇಸ್ವಾಮಿ,ಕೆ.ಹೆಚ್.ಪಿ.ಟಿ ಸ್ವಯಂ ಸೇವಕಿ ಉಮಾದೇವಿ,ರಾಧ, ಲಲಿತಾ,ಮಹಾಲಕ್ಷ್ಮಿ, ಸಾಹಸ್ ಸಂಸ್ಥೆ ಮೇಲ್ವಿಚಾರಕ ಮಂಜುನಾಥ್, ಅಂಬಮ್ಮ, ಸರೋಜಮ್ಮ, ಇತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here