ಕೊರೋನಾ ಸಂದರ್ಭದಲ್ಲಿ ಸೇವಾದಳ ಶಿಕ್ಷಕರ ಸೇವೆ ಶ್ಲಾಘನೀಯ. ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಸಿ ಸಿದ್ದಪ್ಪ.

0
77

ದಾವಣಗೆರೆ ಮಾ.11: ಕೊರೋನಾ ಲಾಕ್ ಡೌನ್ ಸಂದರ್ಭದಲ್ಲಿ ಸೇವಾದಳ ಶಿಕ್ಷಕರ ಸೇವೆ ಶ್ಲಾಘನೀಯವಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಬಿ.ಸಿ.ಸಿದ್ದಪ್ಪ ಹೇಳಿದರು. ಇಂದು ಹರಿಹರ ತಾಲ್ಲೂಕು ದೇವರಬೆಳಕೆರೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ನಡೆದ ಭಾರತ ಸೇವಾದಳದ ತಾಲ್ಲೂಕು ಮಟ್ಟದ ಶಿಕ್ಷಕರ ಕಾರ್ಯಾಗಾರ ಮತ್ತು ಕೊರೊನಾ ಜಾಗೃತಿ ಶಿಬಿರವನ್ನು ಅವರು ಉದ್ಘಾಟಿಸಿ ಮಾತನಾಡಿದರು.

ಲಾಕ್ ಡೌನ್ ಸಂದರ್ಭದಲ್ಲಿ ನಾನು ನೋಡಲ್ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದು ನನ್ನ ತಂಡದಲ್ಲಿ ಸೇವಾದಳ ಶಿಕ್ಷಕರು ಸೇವೆ ಸಲ್ಲಿಸಿದ್ದಾರೆ. ಪ್ರಮುಖ ರಸ್ತೆಗಳನ್ನು ಬಂದ್ ಮಾಡಿ ಸಾರ್ವಜನಿಕರು ಒಂದು ಊರಿನಿಂದ ಮತ್ತೊಂದು ಊರಿಗೆ ಹೋಗದಂತೆ ಶಿಸ್ತಿನಿಂದ ಕೊರೋನಾ ನಿಯಮವನ್ನು ಪಾಲಿಸಲಾಯಿತು. ಸೇವೆ ಸಲ್ಲಿಸುವಾಗ ಬಿಸಿಲು, ಹಸಿವು, ಬಾಯಾರಿಕೆಯ ಜೊತೆಗೆ ಕೋರನಾ ಭಯ ನಮಗೂ ಆವರಿಸಿ ನಮ್ಮ ಕುಟುಂಬದವರನ್ನು ಸಹ ಸಂಪೂರ್ಣವಾಗಿ ಆವರಿಸಿತ್ತು. ಕರ್ತವ್ಯ ಮುಗಿಸಿ ಮನೆಗೆ ಹೋದಾಗಲೂ ಕೂಡ ಮನೆಯವರ ಜೊತೆಗೆ ಬೆರೆಯುವುದು ತುಂಬಾ ಕಷ್ಟವಾಗಿತ್ತು. ಜಿಲ್ಲಾಡಳಿತ, ಪೆÇಲೀಸ್ ಇಲಾಖೆ, ಆರೋಗ್ಯ ಇಲಾಖೆಯ ಜೊತೆಗೆ ಶಿಕ್ಷಣ ಇಲಾಖೆ ಸೇರಿ ಕೊರೋನಾ ಸಂದರ್ಭದಲ್ಲಿ ಸಲ್ಲಿಸಿದ ಸೇವೆ ಶ್ಲಾಘನೀಯವಾಗಿದೆ. ನಮ್ಮ ಶಿಕ್ಷಣ ಇಲಾಖೆಯಲ್ಲಿ ಕೂಡ ಹಲವಾರು ಜನರು ಕೊರೋನಾದಿಂದ ಮೃತಪಟ್ಟರು. ಸೇವಾದಳ ಸಂಘಟಕರಾದ ಎಂ.ಅಣ್ಣಯ್ಯ, ಕೆ.ಟಿ. ಜಯಪ್ಪ, ಟಿ.ಎಸ್. ಕುಮಾರಸ್ವಾಮಿ, ಗೋಪಾಲಪ್ಪ, ಹನುಮಂತಪ್ಪ ಇವರ ಸೇವೆಯನ್ನು ಸ್ಮರಿಸಬೇಕಾಗಿದೆ ಎಂದರು.
ವೈದ್ಯಾಧಿಕಾರಿಗಳಾದ ಡಾ.ರಮೇಶ್ ರವರು ಮಾತನಾಡಿ ಕೋರೋನ ಹೇಗೆ ಮಾನವನ ದೇಹವನ್ನು ಪ್ರವೇಶ ಮಾಡುತ್ತದೆ ಅದು ಬಂದನಂತರ ಹೇಗೆ ಮಾನವನಲ್ಲಿ ಬದಲಾವಣೆಯಾಗುತ್ತದೆ ಎಂಬುದನ್ನು ತಿಳಿಸಿದರು. ಕೊರೋನ ಹರಡದಂತೆ ಮಾಸ್ಕ್ ಧರಿಸಬೇಕು, ಸ್ಯಾನಿಟೈಸರ್ ಉಪಯೋಗಿಸಬೇಕು, ಬಿಸಿ ನೀರು ಕುಡಿಯಬೇಕು, ಬಿಸಿ ಆಹಾರವನ್ನು ಸೇವಿಸಬೇಕು, ಯೋಗ ಪ್ರಾಣಾಯಾಮವನ್ನು ಮಾಡಬೇಕು, ಹಸಿರು ಸೊಪ್ಪು, ತರಕಾರಿಯನ್ನು ಉಪಯೋಗಿಸಬೇಕು ಇದರ ಜೊತೆಗೆ ಸಾಮಾಜಿಕ ಅಂತರವನ್ನು ಯಾವಾಗಲೂ ಕಾಯ್ದುಕೊಳ್ಳಬೇಕೆಂದು ತಿಳಿಸಿದರು.
ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಎ.ಪಿ.ಠಾಕೂರ್ ರವರು ಮಾಸ್ಕ್ ಸ್ಯಾನಿಟೈಸರ್ ವಿತರಣೆ ಮಾಡಿ ಶಾಲೆಗಳಲ್ಲಿ ಸೇವಾದಳ ಚಟುವಟಿಕೆ ಇನ್ನುಮುಂದೆ ಆರಂಭಿಸುವಂತೆ ಶಿಕ್ಷಕರಿಗೆ ಕರೆ ನೀಡಿದರು.

ಈ ಸಂದರ್ಭದಲ್ಲಿ ಸೇವಾದಳದ ಹಿರಿಯ ಕಾರ್ಯಕರ್ತ ದಿವಂಗತ ಎಸ್. ಆರ್.ಮಠ ಇವರ ಧರ್ಮಪತ್ನಿಯನ್ನು ಸನ್ಮಾನಿಸಿ ಗೌರವಿಸಲಾಯಿತು. ಶ್ರೀಮತಿ ಲತಾ ಎಸ್ಡಿಎಂಸಿ ಅಧ್ಯಕ್ಷರು, ಎಂ ಅಣ್ಣಯ್ಯ ವಲಯ ಸಂಘಟಕರು, ಟಿ.ಎಸ್. ಕುಮಾರಸ್ವಾಮಿ ದೈಹಿಕ ಶಿಕ್ಷಕರು, ಮಂಜುಳ ದೈಹಿಕ ಶಿಕ್ಷಣಾಧಿಕಾರಿ, ಕಾರ್ಯಕ್ರಮದಲ್ಲಿ ವಿವಿಧ ಶಾಲೆಗಳಿಂದ ಬಂದ ಶಿಕ್ಷಕರು, ಗ್ರಾಮಪಂಚಾಯತಿಯ ಸದಸ್ಯರು, ಎಸ್ಡಿಎಂಸಿ ಸದಸ್ಯರು ಗ್ರಾಮಸ್ಥರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here