2 ಕೋಟಿ ವೆಚ್ಚದ ಸಿಸಿ ಕಾಮಗಾರಿಗೆ ಶಾಸಕ ಎಂ.ಎಸ್. ಸೋಮಲಿಂಗಪ್ಪ ಭೂಮಿ ಪೂಜೆ.

0
148

-ಬಸಯ್ಯ ಗೆಣಿಕೆಹಾಳು ಮಠ್

ಬಳ್ಳಾರಿ:14:ಮಾ:-ಕುರುಗೋಡು ಸಮೀಪದ ಸಿರಿಗೇರಿಗ್ರಾಮದ ಹೊಸೂರಿನ ಎಸ್.ಕಾಲೋನಿ ಸೇರಿದಂತೆ ರಾರಾವಿ,ಕೊತ್ತಲಚಿಂತೆ ಗ್ರಾಮಗಳಲ್ಲಿ ಲೋಕೋಪಯೋಗಿ ಇಲಾಖೆಯ 5054 ಎಸ್‌ಸಿಪಿ ಅಡಿಯಲ್ಲಿ ಮಂಜೂರಾದ ಅಂದಾಜು ಮೊತ್ತ 2 ಕೋಟಿ ರುಪಾಯಿಗಳಲ್ಲಿ ಸಿ.ಸಿ ರಸ್ತೆಗೆ ಭಾನುವಾರ ಭೂಮಿ ಪ್ರಜೆ ನರೆವೇರಿಸಿದರು.

ತದನಂತರ ಮಾತನಾಡಿದ ಶಾಸಕ ಎಮ್.ಎಸ್.ಸೋಮಲಿಂಗಪ್ಪ ಬಳ್ಳಾರಿ ಜಿಲ್ಲೆಯ ಹಗರಿಯಲ್ಲಿ ಕೃಷಿ ವಿಶ್ವವಿದ್ಯಾಲಯಕ್ಕೆ ಬಜೆಟ್‌ಲ್ಲಿ ಅನುಮೋಧನೆ ನೀಡಿರುವ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಗೆ ಅಭಿನಂದನೆಗಳು ಸಲ್ಲಿಸುತ್ತೇನೆ.1906 ರಲ್ಲಿ ಬ್ರಿಟೀಶ್ ಸರ್ಕಾರ 300 ಎಕರೆ ಕೃಷಿ ಚಟುವಟಿಕೆಗೆ ನಿಗದಿಯಾಗಿತ್ತು.ಈಗ ಅಲ್ಲಿ ಕೃಷಿ ವಿಶ್ವವಿದ್ಯಾಲಯ ಆಗುತ್ತದೆ.ನಮ್ಮ ಸರ್ಕಾರ ಯಶಸ್ವಿಯಾಗಿ ಹೆಜ್ಜೆ ಇಡುತ್ತದೆ.ನೂರಾರು ಸಮಸ್ಯೆಗಳು ಇವೆ ಅದಕ್ಕೆ ಹಂತ ಹಂತವಾಗಿ ಬಗೆಹರಿಸುತ್ತಾ ಹೋಗಬೇಕು.

ಕೃಷಿ ಸಚಿವರಾದ ಬಿ.ಸಿ.ಪಾಟೇಲ್ ಕೂಡ ಸಾಥ್ ನೀಡಿ ಸಹಕರಿಸಿದರು.ನಮಗೆ ಡಿ.ಎಮ್.ಎಫ್ ಹಾಗೂ ಶಾಸಕರ ನಿಧಿಯಲ್ಲಿ ಹಣವಿದೆ.ಗ್ರಾಮದ ಇತಿಹಾಸದ ಕೆರೆ ಅಭಿವೃದ್ಧಿಗೆ,ಏತಾನೀರಾವರಿಗೆ,ಬ್ರಿಡ್ಜ್ಗಳ ನಿರ್ಮಾಣಕ್ಕೆ ತಾಲ್ಲೂಕಿನಲ್ಲಿ ಹಲವಾರು ಅಭಿವೃದ್ಧಿ ಕೆಲಸಗಳು ಆಗಬೇಕಾಗಿವೆ ಶೀಘ್ರದಲ್ಲೇ ಅವುಗಳನ್ನು ಕೈಗೆತ್ತುಕೊಳ್ಳುವೆ ಎಂದು ವಿಶ್ವಾಸದಿಂದ ನುಡಿದರು.

ಈ ಸಂದರ್ಭದಲ್ಲಿ ಮುಖಂಡರಾದ ನೆನಕ್ಕಿ ವಿರುಪಾಕ್ಷಿ,ಜೆ.ಮಲ್ಲಿಕಾರ್ಜುನಗೌಡ,ಡ್ರೈವರ್ ಹುಲುಗಪ್ಪ,ಅಮರೇಶ್ ಗೌಡ,ಅಡಿವೆಯ್ಯ ಸ್ವಾಮಿ,ಬಕಾಡೆ ಈರಯ್ಯ,ನಾಗರಾಜ್ ಗೌಡ ,ಬಕಾಡೆ ಕೊಮಾರಿ,ರಾಮಚಂದ್ರಪ್ಪ ಸ್ಥಳೀಯ ಗ್ರಾಮ ಪಂ ಅದ್ಯಕ್ಷರು, ಉಪಾದ್ಯಕ್ಷರು,ಸದಸ್ಯರುಗಳು,ಹಿರಿಯ ಮುಖಂಡರುಗಳು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here