ಬಾಲ್ಯ ವಿವಾಹ ನಿಷೇಧ ಕಾಯ್ದೆ 2006ರ ಕುರಿತು ಜಾಗೃತಿ..!!

0
790

ಸಂಡೂರು: ಮಾ: 14: ಬಾಲ್ಯ ವಿವಾಹ ನಿಷೇಧ ಕಾಯ್ದೆ 2006ರ ಕುರಿತು ಜಾಗೃತಿ ಕಾರ್ಯಕ್ರಮ, ತಾಲೂಕಿನ ತೋರಣಗಲ್ ರೈಲ್ವೆ ನಿಲ್ದಾಣ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿರುವ ಅಂಗನವಾಡಿ ಕೇಂದ್ರದಲ್ಲಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿಇಲಾಖೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಬಾಲ್ಯ ವಿವಾಹ ನಿಷೇಧ ಕಾಯ್ದೆ 2006ರ ಕುರಿತು ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು,

ಈ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ ಅವರು ಹದಿಹರೆಯದ ಹೆಣ್ಣುಮಕ್ಕಳಿಗೆ ಬಾಲ್ಯವಿವಾಹದಿಂದ ಮಹಿಳೆಯರ ಆರೋಗ್ಯದ ಮೇಲೆ ಉಂಟಾಗುವ ಪರಿಣಾಮಗಳು, ಮತ್ತು ಅಪಾಯಗಳ ಬಗ್ಗೆ ಅರಿವು ಮೂಡಿಸಲಾಯಿತು, ದೊಡ್ಡ ಕುಟುಂಬ, ಬಡತನ, ಶಿಕ್ಷಣದ ಕೊರತೆ, ಹಿರಿಯರ ಆಸೆ ಪೂರೈಸುವ ಸಲುವಾಗಿ ಮದುವೆ ಮಾಡುವುದು, ಒಂದು ಮದುವೆ ಖರ್ಚಿನಲ್ಲಿ ಇದೊಂದು ಮುಗಿದರೆ ಹಣ ಉಳಿತಾಯವಾಗುವ ಕಾರಣ ಒಡ್ಡಿ, ಬಾಲ್ಯ ವಿವಾಹ ಮಾಡಿದರೆ ಅಂತವರಿಗೆ ಕಾಯ್ದೆಯನ್ವಯ ಎರಡು ವರ್ಷಗಳ ಜೈಲು ಶಿಕ್ಷೆ ಒಂದು ಲಕ್ಷ ರೂಪಾಯಿ ದಂಡ ವಿಧಿಸಲಾಗುವುದು ಬಾಲ್ಯ ವಿವಾಹಕ್ಕೆ ಸಹಕಾರ ನೀಡಿದ ಅಥವಾ ಪ್ರೇರಣೆ ನೀಡಿದ ಎಲ್ಲರಿಗೂ ಕಾಯ್ದೆಯ ಅನ್ವಯ ಶಿಕ್ಷೆ ವಿಧಿಸಲಾಗುವುದು, ಹಣ ಉಳಿತಾಯಕ್ಕಾಗಿ ಸಾಮೂಹಿಕ ಮದುವೆಗಳಲ್ಲಿ ವಯಸ್ಸಿನ ವೈದ್ಯಕೀಯ ಪ್ರಮಾಣ ಪತ್ರ ಕಡ್ಡಾಯ ಮಾಡಲಾಗಿದೆ,ಕಾನೂನಿನಂತೆ ಎಲ್ಲರೂ ಪಾಲನೆ ಮಾಡಬೇಕು,

ಇದೆಲ್ಲಕ್ಕೂ ಮುಖ್ಯವಾಗಿ 18 ವರ್ಷಕ್ಕಿಂತ ಮೊದಲು ಮದುವೆಯಾದರೆ ಹೆಣ್ಣಿಗೆ ದೇಹದ ಅಂಗಾಂಗಗಳ ಬೆಳವಣಿಗೆ ಪೂರ್ಣಪ್ರಮಾಣದಲ್ಲಿ ಆಗಿರುವುದಿಲ್ಲ ಅಂತಹದರಲ್ಲಿ ಗರ್ಭಧರಿಸುವುದು ಅಪಾಯಕರ ಸೂಚಕ ಹೆರಿಗೆ ಸಮಯದಲ್ಲಿ ಕಷ್ಟಕರವಾಗುವುದು ಕಡಿಮೆ ತೂಕದ ಅಪೌಷ್ಟಿಕ ಮಗು ಜನಿಸುವುದು ಅಥವಾ ಸತ್ತು ಹುಟ್ಟುವ ಮಗು ಜನಿಸುವುದು, ಹೆರಿಗೆ ಸಮಯದಲ್ಲಿ ತಾಯಿ ಮರಣ ಸಂಭವಿಸಬಹುದು ಈ ಎಲ್ಲಾ ಅಪಾಯಗಳನ್ನು ತಡೆಗಟ್ಟಲು ಹೆಣ್ಣಿಗೆ 18 ವರ್ಷ ತುಂಬಿದ ನಂತರ ಮದುವೆ ಮಾಡುವುದು 19 ವರ್ಷದ ನಂತರ ಗರ್ಭಧರಿಸುವುದು ಆದಲ್ಲಿ ಹೆಣ್ಣು ಸುರಕ್ಷಿತವಾಗಿರಲು ಸಾಧ್ಯವಿದೆ, ಮಕ್ಕಳ ಹಕ್ಕುಗಳನ್ನು ರಕ್ಷಣೆ ಮಾಡುವುದು ಎಲ್ಲರ ಕರ್ತವ್ಯವಾಗಿದೆ, ಯಾವುದೇ ಸಂದರ್ಭದಲ್ಲಿ ತಮ್ಮ ಮನೆಯಲ್ಲಿ ಆಗಲೇ ಅಕ್ಕ ಪಕ್ಕದ ಮನೆಯಲ್ಲಿ ಆಗಲೇ ಹೆಣ್ಣಿಗೆ 18 ವರ್ಷ ಗಂಡಿಗೆ 21 ವರ್ಷದೊಳಗೆ ಮದುವೆ ಮಾಡುವ ಪ್ರಸಂಗಗಳು ಏನಾದರೂ ಕಂಡು ಬಂದರೆ ಮಕ್ಕಳ ಸಹಾಯವಾಣಿ 1098 ಗೆ ಕರೆ ಮಾಡಿ ವಿಷಯ ತಿಳಿಸಿದರೆ, ತಕ್ಷಣ ಕಾವಲು ಸಮಿತಿಯು ಮದುವೆಯಾಗುವುದನ್ನು ನಿಲ್ಲಿಸಲು ಸಾಧ್ಯವಾಗುತ್ತದೆ, ಇದರಿಂದ ಶಿಶುಗಳು ಮತ್ತು ತಾಯಿ ಮರಣಗಳನ್ನು ತಡೆಗಟ್ಟಬಹುದು ಎಂದು ತಿಳಿಸಿದರು,

ಇದೇ ಸಂದರ್ಭದಲ್ಲಿ ಶಾಲೆಯ ಶಿಕ್ಷಕಿ ಕೃಷ್ಣಕುಮಾರಿಯವರು ಮಾತನಾಡಿ ಬಾಲಕಿಯರಿಗೆ ಪೂರ್ಣ ಶಿಕ್ಷಣ ಕೊಡಿಸಿದರೆ ತಂತಾನೆ ಬಾಲ್ಯ ವಿವಾಹವಾಗುವುದು ತಡೆಯಬಹುದು, ಮಕ್ಕಳ ಹಕ್ಕಿನಂತೆ 18 ವರ್ಷದವರೆಗೆ ಪೂರ್ಣ ಪ್ರಮಾಣದ ಶಿಕ್ಷಣವನ್ನು ಕೊಡಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ತಿಳಿಸಿದರು,

ಬಾಲ್ಯ ವಿವಾಹ ತಡೆ ಬಗ್ಗೆ ಪ್ರತಿಜ್ಞೆ ಕೈಗೊಳ್ಳಲಾಯಿತು, ಈ ಕಾರ್ಯಕ್ರಮದಲ್ಲಿ ಕಿಶೋರಿಯರು, ವಿದ್ಯಾರ್ಥಿನಿಯರು, ಅಂಗನವಾಡಿ ಕಾರ್ಯಕರ್ತೆಯರಾದ ರೇಣುಕಾ, ವೆಂಕಟ ಬಾಯಿ, ಆಶಾ ಕಾರ್ಯಕರ್ತೆ ವೆಂಕಟಲಕ್ಷ್ಮಿ, ಮತ್ತು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ ಇತರರು ಹಾಜರಿದ್ದರು

LEAVE A REPLY

Please enter your comment!
Please enter your name here