12-14 ವರ್ಷ ವಯಸ್ಸಿನ ಮಕ್ಕಳಿಗೆ ಕಾರ್ಬಿವ್ಯಾಕ್ಸ್ ಲಸಿಕಾಕರಣ ಕಾರ್ಯಕ್ರಮಕ್ಕೆ ಚಾಲನೆ,

0
639

ಸಂಡೂರು:ಮಾ:17:- ತಾಲೂಕಿನ ತಾರಾನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಇಂದು ತಾರಾನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಕಿತ್ತೂರು ರಾಣಿ ಚೆನ್ನಮ್ಮ ಹಿರಿಯ ಪ್ರಾಥಮಿಕ ಶಾಲೆಯ ಹನ್ನೆರಡ ರಿಂದ ಹದಿನಾಲ್ಕು ವರ್ಷಗಳ ವಯಸ್ಸಿನ ಮಕ್ಕಳು ಆರೋಗ್ಯ ಕೇಂದ್ರಕ್ಕೆ ಅಂಜಿಕೆ ಇಲ್ಲದೆ ಬಂದು ಕಾರ್ಬಿವ್ಯಾಕ್ಸ್ ಲಸಿಕೆ ಪಡೆದರು,

ಈ ಸಂದರ್ಭದಲ್ಲಿ ಡಾ. ಹರೀಶ್ ಮಾತನಾಡಿ 10-14 ವಯಸ್ಸಿನ ಮಕ್ಕಳಿಗೆ ನೀಡುತ್ತಿರುವ ಕಾರ್ಬಿವ್ಯಾಕ್ಸ್ ಲಸಿಕೆಯನ್ನು ಸರ್ಕಾರ ಪರಿಚಯಿಸಲಾಗಿದ್ದು, ಈ ಲಸಿಕೆಯು ಮೂರನೇ ಲಸಿಕೆಯಾಗಿದೆ, ಹಿಂದೆ 15 -18 ವರ್ಷ ವಯಸ್ಸಿನ ಮಕ್ಕಳಿಗೆ ಕೋವ್ಯಾಕ್ಸಿನ್ ನೀಡಲಾಗಿತ್ತು, ಯಾವುದೇ ಮಕ್ಕಳಿಗೆ ಎ.ಇ.ಎಫ್.ಯ ಪ್ರತಿಕೂಲ ಘಟನೆಗಳು ಕಂಡು ಬಂದಿರಲಿಲ್ಲ, ಈಗ ಕಾರ್ಬಿವ್ಯಾಕ್ಸ್ ಎರಡು ಮೂರು ದಿನಗಳು ನಿಗಾವಣೆಯಲ್ಲಿ ಮಕ್ಕಳಿಗೆ ಲಸಿಕೆ ನೀಡಲಾಗುತ್ತಿದೆ, ಯಾವುದೇ ಪ್ರತಿಕೂಲ ಘಟನೆ ಕಂಡುಬರದಿದ್ದರೆ ಅವರವರ ಶಾಲೆಗಳಲ್ಲೆ ಮಕ್ಕಳಿಗೆ ಕಾರ್ಬಿವ್ಯಾಕ್ಸ್ ಲಸಿಕೆ ನೀಡಲಾಗುತ್ತದೆ, ಎಲ್ಲಾ ಮಕ್ಕಳು ಆರೋಗ್ಯ ಕೇಂದ್ರಕ್ಕೆ ಬರಲು ಕಷ್ಟವಾಗುವ ಕಾರಣ ಇತರೆ ಹಳ್ಳಿಗಳ ಶಾಲೆಯ ಮಕ್ಕಳು ಎರಡು ಮೂರು ದಿನ ಕಾಯಬೇಕಾಬೇಗುತ್ತದೆ,

ಇಂದು ಲಸಿಕೆ ಪಡೆದ ಮಕ್ಕಳಿಗೆ ಯಾವುದೇ ಪ್ರತಿಕೂಲ ಘಟನೆ ಸಂಭವಿಸಿಲ್ಲ ಎಲ್ಲರೂ ಸಂಕೋಚವಿಲ್ಲದೆ ಲಸಿಕೆ ಪಡೆದು ತಮ್ಮ ಅನುಭವವನ್ನು ಮಕ್ಕಳು ಹಂಚಿಕೊಂಡಿದ್ದಾರೆ, ಭಯ ಪಡೆದೆ ಬಂದು ಲಸಿಕೆ ಪಡೆಯಿರಿ, ನಮಗೂ ಲಸಿಕೆ ಲಭ್ಯವಿದೆ, ಉಳಿದಂತೆ ಎಲ್ಲಾ ಮಕ್ಕಳಿಗೂ ಲಸಿಕೆ ಬೇಗ ಲಸಿಕೆ ದೊರೆಯಲಿ ಎಂದು ಮಕ್ಕಳು ತಿಳಿಸಿದ್ದಾರೆ ಎಂದು ಅವರು ತಿಳಿಸಿದರು,

ಈ ಸಂದರ್ಭದಲ್ಲಿ ಶಾಲೆಯ ಶಿಕ್ಷಕರು, ಡಾ.ಹರೀಶ್, ಹಿರಿಯ ಆರೋಗ್ಯ ಸುರಕ್ಷಣಾಧಿಕಾರಿ ರೀಟಾ, ಶುಶ್ರೂಷಣಾಧಿಕಾರಿ ಈಶ್ವರಪ್ಪ, ಗೌರಮ್ಮ, ಫಾರ್ಮಸಿ ಅಧಿಕಾರಿ ದೀಪಾ, ಇತರರು ಹಾಜರಿದ್ದರು

LEAVE A REPLY

Please enter your comment!
Please enter your name here