ಕೆ.ಆರ್ ಪೇಟೆಯ ಬೃಹತ್ ಉದ್ಯೋಗ ಮೇಳ ಯಶಸ್ವಿ,5 ಸಾವಿರಕ್ಕೂ ಹೆಚ್ಚು ಜನರಿಗೆ ಉದ್ಯೋಗ ದೊರಕಿಸಿದ ಸಾರ್ಥಕ ಭಾವ: ಸಚಿವ ಡಾ.ನಾರಾಯಣಗೌಡ

0
93

ಕೆ.ಆರ್ ಪೇಟೆಯಲ್ಲಿ ರೇಷ್ಮೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವ ಡಾ.ನಾರಾಯಣ ಗೌಡ ಅವರ ನೇತೃತ್ವದಲ್ಲಿ ಆಯೋಜಿಸಲಾಗಿದ್ದ, ಬೃಹತ್ ಉದ್ಯೋಗ ಮೇಳಕ್ಕೆ ಉನ್ನತ, ಐಟಿಬಿಟಿ, ಕೌಶಲ್ಯಾಭಿವೃದ್ಧಿ ಸಚಿವ ಡಾ.ಸಿಎನ್ ಅಶ್ವಥ್ ನಾರಾಯಣ್, ಮಂಡ್ಯ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯನವರು ಚಾಲನೆ ನೀಡಿದರು.

ಕೆಆರ್ ಪೇಟೆ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಸಂಜೀವಿನಿ-ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ, ಉದ್ಯೋಗ ವಿನಿಮಯ ಕಚೇರಿ, ಮಂಡ್ಯ ಹಾಗೂ ಕೆಆರ್ ಪೇಟೆ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಸಂಯುಕ್ತಾಶ್ರಯದಲ್ಲಿ ಬೃಹತ್ ಉದ್ಯೋಗ ಮೇಳವನ್ನು ಆಯೋಜಿಸಲಾಗಿತ್ತು.

ಬೃಹತ್ ಉದ್ಯೋಗ ಮೇಳದಲ್ಲಿ ಟೊಯೋಟಾ, ಹೋಂಡಾ, ಅಪೋಲೋ ಅಜೀಂ ಪ್ರೇಮ್ ಜೀ ಪೌಂಡೇಷನ್, ಆನಂದ ಗ್ರೂಪ್ ಸೇರಿದಂತೆ ಸುಮಾರು 80 ವಿವಿಧ ಪ್ರತಿಷ್ಠಿತ ಕಂಪನಿಗಳು ಆಗಮಿಸಿದ್ದವು.

ಸಚಿವ ಡಾ.ನಾರಾಯಣಗೌಡ ದಕ್ಷತೆಯ ಕಾರ್ಯಕ್ರಮಗಳಿಗೆ ಸಚಿವ ಗೋಪಾಲಯ್ಯ ಮೆಚ್ಚುಗೆ

ಆರೋಗ್ಯ ಶಿಬಿರ, ಉದ್ಯೋಗ ಮೇಳ ಸೇರಿದಂತೆ ಹತ್ತಾರು ಕಾರ್ಯಕ್ರಮಗಳ ಆಯೋಜಿಸುವ ಮೂಲಕ ಸಚಿವ ಡಾ.ನಾರಾಯಣಗೌಡ ಅವರು ತಮ್ಮ ದಕ್ಷತೆ ತೋರಿಸುತ್ತಿದ್ದಾರೆ. ಆರೋಗ್ಯ ಸೇವೆ, ಉದ್ಯೋಗ ಕೊಡಿಸುವುದು ಪುಣ್ಯದ ಕೆಲಸ. ಅಂತಹ ಕೆಲಸವನ್ನು ಸಚಿವ ನಾರಾಯಣಗೌಡರು ಉತ್ತಮವಾಗಿ ಮಾಡುತ್ತಿದ್ದಾರೆ. ಇವತ್ತು ನೂರಾರು ಕಂಪನಿಗಳು ಆಗಮಿಸಿದ್ದು, ಸಾವಿರಾರು ಉದ್ಯೋಗಗಳನ್ನು ಕೊಡಿಸಲು ನಾರಾಯಣಗೌಡರು ವ್ಯವಸ್ಥೆ ಮಾಡಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಹೇಳಿದರು.
ಗ್ರಾಮೀಣ ಪ್ರದೇಶದ ಬಡ ವಿದ್ಯಾರ್ಥಿಗಳು ಇದರ ಸದುಪಯೋಗ ಪಡಿಸಿಕೊಳ್ಳಿ. ಸುಮಾರು 80ಕ್ಕಿಂತ ಹೆಚ್ಚು ಕಂಪನಿಗಳು ಭಾಗಿಯಾಗಿವೆ. 5ಸಾವಿರ ಜನಕ್ಕೆ ಉದ್ಯೋಗ ಕೊಡಿಸಿ ಯಶಸ್ವಿಯಾಗಲಿ ಜಿಲ್ಲೆಯ ಅಭಿವೃದ್ಧಿಗಾಗಿ ಹಿರಿಯರ ಮಾರ್ಗ ದರ್ಶನದಂತೆ ಕೆಲಸವನ್ನು ಮಾಡುತ್ತೇವೆ. ಸಾವಿರಾರು ಜನರಿಗೆ ಉದ್ಯೋಗ ಸಿಗಲಿ ಎಂದು ಹಾರೈಸುತ್ತೇನೆ ಎಂದು ಹೇಳಿದರು.

ಸಚಿವ ಡಾ.ನಾರಾಯಣಗೌಡರಿಂದ ಹಲವು ಸ್ಪೂರ್ತಿದಾಯಕ ಕೆಲಸ: ಡಾ.ಸಿ.ಎನ್ ಅಶ್ವಥ್ ನಾರಾಯಣ್

ಸಚಿವ ಡಾ.ನಾರಾಯಣಗೌಡ ಅವರು ಒಂದಾದ ಮೇಲೆ ಒಂದು ಜನಪರ ಕಾರ್ಯಕ್ರಮ ಆಯೋಜಿಸುತ್ತಿದ್ದಾರೆ. ಇದು ನಮ್ಮೆಲ್ಲರಿಗೂ ಪ್ರೇರಣೆ, ಸ್ಫೂರ್ತಿ ಸಿಗುವ ಕೆಲಸ. ಇವತ್ತು ಸುಮಾರು 12 ಸಾವಿರ ಜನರು ಬಂದಿದ್ದಾರೆ. ಇದೊಂದು ರೆಕಾರ್ಡ್ ಬ್ರೇಕಿಂಗ್ ಕಾರ್ಯಕ್ರಮ ಎಂದು ಸಚಿವ ಡಾ.ಸಿಎನ್ ಅಶ್ವಥ್ ನಾರಾಯಣ್ ಅವರು ಹೇಳಿದರು.
ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಲಕ್ಷಾಂತರ ಉದ್ಯೋಗಳಿವೆ. ಮಕ್ಕಳು ತಮ್ಮ ಭವಿಷ್ಯವನ್ನು ಉತ್ತಮ ರೂಪಿಸಿಕೊಳ್ಳಬೇಕು. ಮಕ್ಕಳು ಕಲಿಯೋದಕ್ಕೆ ಎಲ್ಲಾ ರೀತಿಯ ಕಾರ್ಯಕ್ರಮಗಳನ್ನು ನೀಡುತ್ತಿದ್ದೇವೆ. ಉತ್ತಮ ಉದ್ಯೋಗಾವಕಾಶ ಪಡೆಯಲು ಅಗತ್ಯವಿರುವ ಕೌಶಲ್ಯ ತರಬೇತಿ ನೀಡಲಾಗುತ್ತಿದೆ. ಈ ವರ್ಷ ಎರಡೂವರೆ ಲಕ್ಷ ಜನರಿಗೆ ಕೌಶಲ್ಯ ತರಬೇತಿ ನೀಡುವ ಗುರಿ ಹೊಂದಲಾಗಿದೆ ಎಂದರು.
12 ಸಾವಿರಕ್ಕೂ ಹೆಚ್ಚು ಯುವಕ ಯುವತಿಯರು ಉದ್ಯೋಗ ಮೇಳದಲ್ಲಿ ಭಾಗವಹಿಸಿ ಅದರ ಸದುಪಯೋಗ ಪಡೆದು ಕೊಳ್ಳುತ್ತಿರುವುದು ಬಹಳ ಸಂತಸ ವಿಚಾರವಾಗಿದೆ ಉದ್ಯೋಗ ಮೇಳದ ಸುವರ್ಣಾವಕಾಶವು ಸದ್ಭಳಕೆ ಯಾಗಬೇಕು
ಇದೆ ವೇಳೆ ಕೆಆರ್ ಪೇಟೆಯ ಸರ್ಕಾರಿ ಎಂಜಿನಿಯರಿಂಗ್ ಕಾಲೇಜ್ ಉನ್ನತ್ತಿಕರಿಸಲು ಇದೇ ವರ್ಷ ಕ್ರಮವಹಿಸಲಾಗಿದೆ ಎಂದು ಹೇಳಿದರು. ಕೆ.ಆರ್ ಪೇಟೆಯ ಸಮಗ್ರ ಅಭಿವೃದ್ಧಿಗೆ ನಾರಾಯಣಗೌಡರ ಸಹೋದರನಾಗಿ ಅವರ ಹೆಗಲಿಗೆ ಹೆಗಲು ಕೊಟ್ಟು ಕೆಲಸ ಮಾಡುತ್ತೇನೆ ಎಂದು ಅಶ್ವಥ್ ನಾರಾಯಣ್ ಅವರು ಭರವಸೆ ನೀಡಿದರು.

ಪ್ರತಿಯೊಬ್ಬರಿಗೂ ಕೆಲಸ ಕೊಡಿಸಬೇಕು ಅನ್ನೋದು ಕನಸು: ಸಚಿವ ಡಾ.ನಾರಾಯಣಗೌಡ

ಮಂಡ್ಯ ಜಿಲ್ಲೆಯನ್ನು ಉತ್ತಮ ಸ್ಥಾನಕ್ಕೆ ತೆಗೆದುಕೊಂಡು ಹೋಗಬೇಕು ಎಂಬ ಕನಸನ್ನ ಹೊಂದಲಾಗಿದೆ. ಕೆಆರ್ ಪೇಟೆ ಹಿಂದುಳಿದ ತಾಲೂಕು ಆಗಿತ್ತು. ಇದನ್ನ ಅಭಿವೃದ್ಧಿಗೊಳಿಸಲು ಸಾಕಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ತಾಲೂಕಿನ ಯುವ ಜನತೆಗೆ ಉದ್ಯೋಗ ನೀಡಬೇಕು ಎಂಬ ಕನಸಿನೊಂದಿಗೆ ಉದ್ಯೋಗ ಮೇಳ ಆಯೋಜಿಸಲಾಗಿದೆ ಎಂದರು.
ಪ್ರತಿಯೊಬ್ಬರಿಗೂ ಕೆಲಸ ಕೊಡಬೇಕು. ಇವತ್ತು ಮಾತ್ರ ಉದ್ಯೋಗ ಮೇಳ ಅಲ್ಲ. ಮುಂದಿನ ದಿನಗಳಲ್ಲೂ ಉದ್ಯೋಗ ಮೇಳ ಆಯೋಜಿಸುವ ಮೂಲಕ ಎಲ್ಲರಿಗೂ ಕೆಲಸ ಕೊಡಿಸಲಾಗುತ್ತದೆ. ಸಚಿವ ಅಶ್ವಥ್ ನಾರಾಯಣ್, ಗೋಪಾಲಯ್ಯನವರ ಸಹಕಾರದೊಂದಿಗೆ ಕೆಆರ್ ಪೇಟೆಯನ್ನು ಉತ್ತಮ ಸ್ಥಾನಕ್ಕೆ ತೆಗೆದುಕೊಂಡು ಹೋಗಲಾಗುವುದು ಎಂದು ಸಚಿವ ಡಾ.ನಾರಾಯಣಗೌಡ ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿಗಳಾದ ಎಸ್.ಅಶ್ವತಿ, ಜಿ.ಪಂ.ಮುಖ್ಯಕಾರ್ಯನಿರ್ವಹಣಾಧಿಕಾರಿಗಳಾದ ಜಿ.ಆರ್.ಜೆ.ದಿವ್ಯಾಪ್ರಭು, ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿಗಳಾದ ಎನ್.ಯತೀಶ್, ಪಾಂಡವಪುರ ಉಪವಿಭಾಗಾಧಿಕಾರಿಗಳಾದ ಬಿ.ಸಿ.ಶಿವಾನಂದ ಮೂರ್ತಿ, ಕೆ.ಆರ್.ಪೇಟೆಯ ತಹಶೀಲ್ದಾರರಾದ ಎಂ.ವಿ ರೂಪಾ, ಮಾಜಿ ಜಿ.ಪಂ ಸದಸ್ಯರಾದ ಅಂಬರೀಶ್, ಕೆ.ಆರ್ ಪೇಟೆಯ ಕಾರ್ಯನಿರ್ವಹಣಾಧಿಕಾರಿ ಹೆಚ್.ಎಸ್.ಚಂದ್ರಶೇಖರ್ ಪುರಸಭೆ ಮುಖ್ಯಾಧಿಕಾರಿಗಳಾದ ಎಂ.ಕುಮಾರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here