ಕುರುಗೋಡು ಪಿಎಸ್‌ಐ ಮೌನೇಶ್ ರಾಥೋಡ್ ಹಾಗೂ ಪೇದೆ ಅಮಾನತು

0
398

ಕುರುಗೋಡು ತಾಲ್ಲೂಕಿನ ವದ್ದಟ್ಟಿ ಗ್ರಾಮದ ಭತರ್ ಕುಮಾರ್ ಎನ್ನುವ ವ್ಯಕ್ತಿಯನ್ನು ವಿಚಾರಣೆಗೆ ಕರೆತಂದು ಬಂಧಿಸುವಲ್ಲಿ ಎಫ್ ಐ ಆರ್ ದಾಖಲಿಸದೇ ಮತ್ತು ಬಂಧನದ ನಿಯಮಗಳನ್ನು ಪಾಲಿಸದೇ ಠಾಣೆಯಲ್ಲಿ 24 ತಾಸು ಇಟ್ಟುಕೊಂಡು ತೀವ್ರ ಹಲ್ಲೆ ಮಾಡಿರುವ ಘಟನೆಗೆ ಸಂಬಂಧಿಸಿ. ಪಿಎಸ್‌ಐ ರಾಥೋಡ್ ಮತ್ತು ಪೇದೆ ಸುರೇಶ್ ಅವರನ್ನು ಅಮಾನತು ಮಾಡಿರುವುದಾಗಿ ಎಸ್ಪಿ ಸೈದುಲ್ಲಾ ಅಡಾವತ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪಟ್ಟಣದ ಮುಖ್ಯವೃತ್ತದಲ್ಲಿ ಸಮಾವೇಶಗೊಂಡಿದ್ದ ನೂರಾರು ಜನ ಪ್ರತಿಭಟನಾ ನಿರತರು, ಇಲ್ಲಿನ ಪೊಲೀಸರು ಜನಸ್ನೇಹಿಯಾಗಿ ಕಾರ್ಯನಿರ್ವಹಿಸದೆ ಧನ ದಾಹಿಗಳಾಗಿದ್ದಾರೆ. ಜನರಿಗೆ ವಿನಾಕಾರಣ ಹಿಂಸೆ ನೀಡುತ್ತಿದ್ದಾರೆ. ಹಣ ನೀಡಿದವರಿಗೆ ಮಾತ್ರ ರಕ್ಷಣೆ ಎನ್ನುವಂತಾಗಿದೆ. ಬಡವರು ನ್ಯಾಯಕ್ಕಾಗಿ ಠಾಣೆಗೆ ಬಂದರೆ ಅವರನ್ನು ಅವಾಚ್ಛ ಶಬ್ದಗಳಿಂದ ನಿಂದಿಸಿ ಅವಮಾನಿಸುತ್ತಾರೆ ಎಂದು ಆರೋಪಿಸಿದರು.

ಕಂಪ್ಲಿಯಲ್ಲಿ ಕರ್ತವ್ಯದಲ್ಲಿದ್ದಾಗಲೂ ಅಮಾಯಕ ರೈತರ ಮೇಲೆ ಹಲ್ಲೆ ಮಾಡಿದ್ದರು. ಪಟ್ಟಣದಲ್ಲಿ ಕೋವಿಡ್ ಮೊದಲ ಮತ್ತು ಎರಡನೇ ಅಲೆಯ ಸಂದರ್ಭದಲ್ಲಿ ಜನರಿಗೆ ವಿನಾ ಕಾರಣ ತೊಂದರೆ ನೀಡಿದ್ದಾರೆ. ಅಮಾಯಕ ಜನರ ಮೇಲೆ ಹಲ್ಲೆ ಮಾಡುವುದು ಇವರಿಗೆ ಶೋಕಿಯಾಗಿದೆ ಎಂದು ದೂರಿದರು.
ಕೂಡಲೇ ಪಿಎಸ್‌ಐ ಮೌನೇಶ್ ಅವರ ವಿರುದ್ಧ ದೂರು ದಾಖಲಿಸಿಕೊಳ್ಳಬೇಕು. ಮತ್ತು ಸೇವೆಯಿಂದ ಅಮಾನತ್ತು ಮಾಡಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನಾ ಸ್ಥಳಕ್ಕೆ ಭೇಟಿನೀಡಿದ ಡಿವೈಎಸ್ಪಿ ಎಸ್‌ಎಸ್ ಕಾಶೀಗೌಡ ಮಾತನಾಡಿ, ಬಳ್ಳಾರಿ ಜಿಲ್ಲಾ ಪೊಲೀಸರು ಸದಾಕಾಲ ಜನಸ್ನೇಹಿಯಾಗಿ ಕೆಲಸ ಮಾಡುತ್ತಿದ್ದಾರೆ. ಎಮ್ಮೆ ಕಳ್ಳತನಕ್ಕೆ ಸಂಬಂಧಿಸಿದಂತೆ ವಿಚಾರಣೆಗೆಂದು ಠಾಣೆಗೆ ಕರೆತಂದ ಭರತ್ ಕುಮಾರ್‌ಗೆ ರಕ್ತದೊತ್ತಡದಲ್ಲಿ ಏರುಪೇರಾಗಿ ಅನಾರೋಗ್ಯಕ್ಕೆ ಒಳಗಾಗಿದ್ದರು. ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಬಳ್ಳಾರಿ ವಿಮ್ಸ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಅವರು ಆರೋಗ್ಯವಾಗಿದ್ದಾರೆ. ಸುಳ್ಳುವದಂತಿಗಳಿಗೆ ಕಿವಿಕೊಡಬೇಡಿ ಎಂದು ಮನವಿಮಾಡಿದರು.

ಹಲ್ಲೆಗೊಳಗಾರ ಭರತ್ ಕುಮಾರ್ ತಾಯಿ ದುರುಗಮ್ಮ ಮತ್ತು ಮುಖಂಡರು ಡಿವೈಎಸ್ಪಿ ಎಸ್.ಎಸ್. ಕಾಶೀಗೌಡ ಅವರಿಗೆ ಮನವಿಸಲ್ಲಿಸಿದರು.
ನೀವು ನೀಡಿದ ಮನವಿಯನ್ನು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗೆ ರವಾನಿಸಲಾಗುವುದು ಎಂದಿದ್ದರು ಸಂಜೆಯೊಳಗೆ ರವಾನಿಸಿದ ಮನವಿ ಪಲ ಕುರುಗೋಡಿನ ಪೊಲೀಸ್ ಠಾಣಾ ಪಿಎಸ್‌ಐ ರಾಥೋಡ್ ಮತ್ತು ಪೇದೆ ಸುರೇಶ್ ಅವರನ್ನು ಎಸ್ಪಿ ಸೈದುಲ್ಲಾ ಅಡಾವತ್ ಆದೇಶ ಹೊರಡಿಸಿದ್ದರೆ ಎಂದು ತಿಳಿದುಬಂದಿದೆ.

LEAVE A REPLY

Please enter your comment!
Please enter your name here