ನೂತನ ಕೊಟ್ಟೂರೇಶ್ವರ ಬಜಾರ್ ಹಮಾಲರ ಸಂಘ ಉದ್ಘಾಟನೆ

0
375

ಕೊಟ್ಟೂರು:ಜುಲೈ:02:-ಪಟ್ಟಣದ ಗಾಂಧಿ ವೃತ್ತದ ಬಳಿ ಕೊಟ್ಟೂರೇಶ್ವರ ಬಜಾರ್ ಹಮಾಲರ ಸಂಘದ ನಾಮಫಲಕವನ್ನು ಶಾಸಕರಾದ ಎಸ್. ಭೀಮಾನಾಯ್ಕ ಅನಾವರಣವನ್ನು ಮಾಡಿದರು.

ನಂತರ ತೇರು ಬಯಲು ಬಸವೇಶ್ವರ ದೇವಸ್ಥಾನದಲ್ಲಿ ಕೊಟ್ಟೂರೇಶ್ವರ ಬಜಾರ್ ಹಮಾಲಿ ಸಂಘದ ಕಾರ್ಯಕ್ರಮವನ್ನು ಎಸ್ ಭೀಮಾ ನಾಯ್ಕ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು ಹಮಾಲರ ಸಂಘದ ಸರ್ವೋತ್ತೋಮುಖ ಅಭಿವೃದ್ಧಿಗಾಗಿ ಹಾಗೂ ಅವರ ಕಷ್ಟ ಕಾರ್ಪಣ್ಯಗಳಿಗೆ ಸದಾ ನಾನು ಬೆಂಗಾವಲಾಗಿರುತ್ತೇನೆ ಹಮಾಲರು ಸದಾ ಶ್ರಮಿಕರಾಗಿರುತ್ತಾರೆ. ಇವರು ನಿಯತ್ತಿನಿಂದ ಕಷ್ಟಪಟ್ಟು ತಮ್ಮ ತಮ್ಮ ಜೀವನ ಸಾಗಿಸುತ್ತಿರುವುದು ಸಮಾಜದ ಪ್ರತಿಯೊಬ್ಬರು ಸಹ ಇವರಿಗೆ ಗೌರವಿಸಬೇಕು ಮುಂದಿನ ದಿನಗಳಲ್ಲಿ ಹಮಾಲರಿಗೆ ಸರ್ಕಾರದಿಂದ ಬರುವಂತಹ ಎಲ್ಲಾ ರೀತಿಯ ಸೌಲಭ್ಯಗಳನ್ನು ಜಾರಿಗೆ ತಂದು ಪ್ರತಿಯೊಬ್ಬರಿಗೂ ತಲುಪಿಸುವ ಮುಖ್ಯ ಧ್ಯೇಯ ನನ್ನದಾಗಿರುತ್ತದೆ ಎಂದರು.

ಅಧ್ಯಕ್ಷತೆ ವಹಿಸಿದ ಕೊಟ್ಟೂರಿನ ಹಿರಿಯ ಮುಖಂಡರು ಮತ್ತು ಎಂ ಎಂ ಜೆ ಹರ್ಷವರ್ಧನ್ ರವರು ಮಾತನಾಡಿ ಕೊಟ್ಟೂರಿನ ಕೊಟ್ಟೂರೇಶ್ವರ ಅಮಾಲರ ಸಂಘದ ಪ್ರತಿಯೊಬ್ಬ ಸದಸ್ಯರು ಸಹ ಒಗ್ಗಟ್ಟಾಗಿ ಕೆಲಸ ಮಾಡಿ ಈ ಸಂಘವನ್ನು ಮತ್ತಷ್ಟು ಉತ್ತುಂಗಕ್ಕೆ ಕೊಂಡೊಯ್ಯುವಂತಾಗಬೇಕು ಸಂಘದಲ್ಲಿ ಯಾವುದೇ ಸಮಸ್ಯೆ ಬಂದರೂ ಸಹ ನಾನು ನಿಮ್ಮೊಟ್ಟಿಗೆ ಇರುತ್ತೇನೆಂದು ಹೇಳಿದರು.

ಸಂದರ್ಭದಲ್ಲಿ ಹಮಾಲರಿಗೆ ಲೈಸೆನ್ಸ್ ಲೇಬರ್ ಕಾರ್ಡ್ ವಿತರಣೆ ಮಾಡಿದರು ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾದ ಪಟ್ಟಣ ಪಂಚಾಯತ್ ಅಧ್ಯಕ್ಷರಾದ ಭಾರತೀ ಸುಧಾಕರ್ ಪಾಟೀಲ್, ಉಪಾಧ್ಯಕ್ಷರಾದ ಶಪಿವುಲ್ಲಾ ಮತ್ತು ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಟಿ ರಾಮಣ್ಣ ಮತ್ತು ರಾಜ್ಯ ಅಮಲರ ಸಂಘದ ಪ್ರಧಾನ ಕಾರ್ಯದರ್ಶಿಯಾದ ಡಿ ಎಚ್ ಹನುಮೇಶಪ್ಪ,

ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ಕೆ. ಅಜ್ಜಯ್ಯ, ಮತ್ತು ಆರ್. ಮಂಜುನಾಥ್, ಪಿ. ಶಿವು, ಬಿ.ಉಚ್ಚಂಗಿಪ್ಪ, ಜಿ. ರಾಜು, ಬಣಕಾರ್ ಕೊಟ್ರೇಶ್ ಮತ್ತಿತರು ಉಪಸ್ಥಿತರಿದ್ದರು.

ವರದಿ: ಶಿವರಾಜ್ ಕನ್ನಡಿಗ

LEAVE A REPLY

Please enter your comment!
Please enter your name here