ಬೀದಿ ನಾಯಿಗಳ ನಿಯಂತ್ರಣಕ್ಕೆ ಆಗ್ರಹ: ವಾಹನ ಸವಾರರಿಗೆ ಕಿರಿಕಿರಿ!

0
339

ಕೊಟ್ಟೂರು: ಪಟ್ಟಣದಲ್ಲಿ ಬೀದಿ ನಾಯಿಗಳ ಸಂಖ್ಯೆ ಹೆಚ್ಚಾಗುತ್ತಿರುವುದು. ವಾಹನ ಸವಾರರ ಮೇಲೆ ದಾಳಿ ನಡೆಸಲು ಮುಂದಾಗುತ್ತಿವೆ ಇವುಗಳ ನಿಯಂತ್ರಣಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಮುಂದಾಗ ಬೇಕೆಂದು ದ್ವಿತೀಯ ಚಕ್ರ ವಾಹನ ಸವಾರರು ಆಗ್ರಹಿಸಿದ್ದಾರೆ.

ಇಲ್ಲಿನ ಗಾಂಧಿ ಸರ್ಕಲ್, ಬಸ್ ನಿಲ್ದಾಣ, ಹ್ಯಾಳ್ಯಾ ರಸ್ತೆಯ ಅಂಬೇಡ್ಕರ್ ನಗರ, ಚಿರಿಬಿ ರಸ್ತೆ, ತೇರು ಬಯಲು, ಹರಪನಹಳ್ಳಿ ರಸ್ತೆ ಸೇರಿದಂತೆ ಹಲವು ಬಡವಣೆಗಳಲ್ಲಿ ಮಧ್ಯರಾತ್ರಿ ವೇಳೆ ಗುಂಪು ಗುಂಪು ಸೇರಿಕೊಂಡು ಕಚ್ಚಾಡುತ್ತಾ ದೊಡ್ಡ ಧ್ವನಿಯಲ್ಲಿ ಚಿರಾಡುವ ಶಬ್ದಕ್ಕೆ ಪಟ್ಟಣದ ನಿವಾಸಿಗಳು ರಾತ್ರಿ ನಿದ್ದೆ ಬಾರದೆ ಯಾತನೆ ಅನುಭವಿಸುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹಲವು ವರ್ಷಗಳಿಂದ ಬೀದಿ ನಾಯಿಗಳ ಸಂತಾನ ಹೆಚ್ಚುತ್ತಿದ್ದು ವೃದ್ಧರ, ಮಕ್ಕಳ ಮೇಲೆ ಎರಗುವ ಬೀದಿ ಸ್ವಾನಗಳ ನಿಯಂತ್ರಣಕ್ಕಾಗಿ ಸ್ಥಳೀಯ ಆಡಳಿತಕ್ಕೆ ಮತ್ತು ಸಂಬಂಧಪಟ್ಟ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದರು ಯಾವುದೇ ಪ್ರಯೋಜನವಾಗಿಲ್ಲ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸ್ಥಳೀಯ ಪಟ್ಟಣ ಪಂಚಾಯಿತಿ ಆಡಳಿತವು ಬೀದಿ ನಾಯಿಗಳ ಹತೋಟಿಗೆ ಮುಂದಾಗಬೇಕು ಇಲ್ಲವಿದ್ದರೆ ಅವುಗಳ ದಾಳಿಯಿಂದ ಜನರು ದಿನನಿತ್ಯ ತೊಂದರೆ ಅನುಭವಿಸುವುದು ಅನಿವಾರ್ಯವಾಗುತ್ತದೆ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ತೆಗೆದುಕೊಳ್ಳಬೇಕಿದೆ ಎಂದು ಬಿ. ವೀರಭದ್ರಪ್ಪ, ಟಿ ಚಂದ್ರು, ಇಮ್ರಾನ್, ಮಹೇಶ, ಮತ್ತು ಇತರರು ಒತ್ತಾಯಿಸಿದ್ದಾರೆ.

ಕೋಟ್…
ಈ ಬೀದಿ ನಾಯಿಗಳ ಕಾಟಕ್ಕೆ ರಾತ್ರಿ ವೇಳೆ ನಿದ್ದೆ ಬಾರುತ್ತಿಲ್ಲ ಕಚ್ಚಾಡುತ್ತಾ ಬರುತ್ತವೆ ಮನೆ ಮುಂದೆ ಆಟ ಆಡುತ್ತಿರುವ ಮಕ್ಕಳು ಮತ್ತು ವೃದ್ಧರಿಗೆ ಹಚ್ಚುತ್ತಿವೆ ಇದರ ಬಗ್ಗೆ ಸ್ಥಳೀಯ ಆಡಳಿತವು ಬೀದಿ ನಾಯಿಗಳ ಕಡಿವಾಣ ಮಾಡಬೇಕು ಈ ಮೂಲಕ ಒತ್ತಾಯಿಸುತ್ತೇನೆ.

-ಬಸನಾಳ ವೀರಭದ್ರಪ್ಪ
ಅಂಬೇಡ್ಕರ್ ನಗರದ ನಿವಾಸಿ
ಕೊಟ್ಟೂರು.

ವರದಿ: ಶಿವರಾಜ್ ಕನ್ನಡಿಗ

LEAVE A REPLY

Please enter your comment!
Please enter your name here