ವಿಸ್ಡಮ್ ಎರ ಆಂಗ್ಲ ಮಾಧ್ಯಮ: ಮಕ್ಕಳಿಗೆ ಚುನಾವಣೆಯ ಪ್ರಜ್ಞೆ ನಾಯಕತ್ವದ ಗುಣ!!

0
908

ಕೊಟ್ಟೂರು:ಜುಲೈ:02:-ವಿಜಯನಗರ ಜಿಲ್ಲೆ, ಕೊಟ್ಟೂರು ಪಟ್ಟಣದ ವಿಸ್ಡಮ್ ಎರ ಆಂಗ್ಲ ಮಾಧ್ಯಮ ಶಾಲೆ ಹಾಗೂ ಶ್ರೀ ವೀರಭದ್ರೇಶ್ವರ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ಸಂಯುಕ್ತ ಆಶ್ರಯದಲ್ಲಿ ಶಾಲಾ ಸಂಸತ್ತಿನ ಚುನಾವಣೆಯನ್ನು ಯಶಸ್ವಿಯಾಗಿ ನಿರ್ವಹಿಸಲಾಯಿತು.

ಮಕ್ಕಳಿಗೆ ಚುನಾವಣೆಯ ಪ್ರಜ್ಞೆ ಹಾಗೂ ನಾಯಕತ್ವದ ಗುಣವನ್ನು ಬೆಳೆಸಲು ಈ ಶಾಲೆಯಲ್ಲಿ ಸಂಸತ್ತಿನ ಚುನಾವಣೆಯನ್ನು ಆಯೋಜಿಸಲಾಯಿತು ನಮ್ಮನ್ನು ಆಳುವ ರಾಜಕೀಯ ನಾಯಕರು ಹೇಗಿರಬೇಕು ಎನ್ನುವುದು ವಿದ್ಯಾರ್ಥಿ ಜೀವನದಲ್ಲಿ ತಿಳಿಯಬೇಕೆಂದು ತಿಳಿದು ಶ್ರೀಯುತ ಹಸನ್ ಸರ್ ಸ್ಥಾಪಕರು ವಿಸ್ಡಮ್ ಶಾಲೆ ಸಂಸತ್ತಿನ ಚುನಾವಣೆ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಮಕ್ಕಳು ಉತ್ಸಾಹದಿಂದ ಮತ ಚಲಾಯಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ವಿದ್ಯಾರ್ಥಿಗಳಿಗೆ ನಮ್ಮ ಪ್ರಜಾಪ್ರಭುತ್ವದ ಪರಿಕಲ್ಪನೆಯನ್ನು ಮೂಡಿಸುವ ಸಲುವಾಗಿ ಮತದಾನ ಹೇಗೆ ಇರಬೇಕು ಮುಂದೆ ಅವರು ಭವಿಷ್ಯತ್ತಿನ ರಾಜಕೀಯ ನಾಯಕರನ್ನು ಆಯ್ಕೆ ಮಾಡಲು ವಿದ್ಯಾರ್ಥಿ ವಯಸ್ಸಿನಲ್ಲಿ ತಿಳಿಯಲಿ ಎಂದು ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೆವು ಎಂದು ಆಕಾಶ್ ಸಹ ಶಿಕ್ಷಕರು ನಮ್ಮ ಸುದ್ದಿವಾಹಿನೊಂದಿಗೆ ಮಾತನಾಡಿದರು.

ಈ ಸಂದರ್ಭದಲ್ಲಿ ರಾಜೇಶ್ವರಿ ಪ್ರಾಂಶುಪಾಲರು ಗೋಪಾಲಕೃಷ್ಣ ಮುಖ್ಯ ಗುರುಗಳು ಹಾಗೂ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಸೇರಿದ್ದರು.

ವರದಿ: ಶಿವರಾಜ್ ಕನ್ನಡಿಗ

LEAVE A REPLY

Please enter your comment!
Please enter your name here