ದೇವರು ವಿಪ್ರರಿಗೆ ಜ್ಞಾನರೂಪದಲ್ಲಿ ಮೀಸಲಾತಿ ಕೊಟ್ಟಿದ್ದಾನೆ;ವಿದ್ವಾನ್ ಬೇವಿನಾಳ ಪ್ರಲ್ಹಾದಾಚಾರ್ಯ

0
106

ರಾಯಚೂರು/ಸಿಂಧನೂರು:ಜುಲೈ09:-ವಿಪ್ರ ಸಮಾಜದಲ್ಲಿ ಅನೇಕ ಪೀಠಾಧಿಪತಿಗಳು ಜ್ಞಾನಕ್ಕಾಗಿ ಪೀಠವನ್ನು ಅಲಂಕರಿಸಿದ್ದಾರೆ. ಇನ್ನೂ ಕೆಲವರು ಮೋಕ್ಷಾರ್ಧವಾಗಿ ಪೀಠವನ್ನೂ ಅಲಂಕರಿಸಿ ಜ್ಞಾನ ತಪಸ್ಸು, ಜನಸಾಮಾನ್ಯರಿಗೆ ಧಾರೆಯೆರದ ಅನೇಕ ಘಟನೆಗಳು ಸಂಗತಿಗಳು ನಡೆದಿವೆ. ಹಾಗಾಗಿ ನಾವು ಯಾವದೇ ಫಲಬಯಸದೇ ನಿಶ್ಕಾಮವಾಗಿ ಸಮಾಜ ಸೇವೆ ಮಾಡುವುದರಿಂದ ಯಾವುದೇ ಮೀಸಲಾತಿ ಬೇಕಾಗಿಲ್ಲಾ ಎಂದು ಗಂಗಾವತಿಯ ವಿದ್ವಾನ್ ಬೇವಿನಾಳ ಪ್ರಲ್ಹಾದಾಚಾರ್ಯ ಅಭಿಪ್ರಾಯ ವ್ಯಕ್ತಪಡಿಸಿದರು.

ಅವರು ಸಿಂಧನೂರ ನಗರದ ಪಿ.ಡಬ್ಲು.ಡಿ ಕ್ಯಾಂಪಿನ ಶ್ರೀ ಸತ್ಯಮಾರುತಿ ದೇವಸ್ಥಾನದಲ್ಲಿ ಉತ್ತರಾಧಿಮಠದ ಶ್ರೀ ಸತ್ಯಾಭಿನವ ತೀರ್ಥರಿಂದ ಮೋಕ್ಷಾರ್ಥವಾಗಿ ಸನ್ಯಾಸ ಸ್ವೀಕರಿಸಿದ ಶ್ರೀ ಸತ್ಯಾಭಿರಾಜತೀರ್ಥರ ಆರಾಧನಾ ಪ್ರಯುಕ್ತ ತಮ್ಮ ಪ್ರವಚನದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದರು. ಸ್ವಾರ್ಥದ ಸಮಾಜದಲ್ಲಿ ನಿಸ್ವಾರ್ಥವಾಗಿ ಜನಸೇವೆ ಮಾಡುವವರು ವಿಪ್ರರಾಗಿದ್ದಾರೆ. ಅವರಿಗೆ ಜ್ಞಾನದಲ್ಲಿಯೇ ವಿಶೇಷವಾಗಿ ದೇವರ ಮೀಸಲಾತಿಯನ್ನು ಕೊಟ್ಟುಕಳಿಸಿದ್ದಾನೆ. ವಿಪ್ರರಿಗೆ ಜ್ಞಾನವೇ ಪ್ರಮುಖಸಾಧನವಾಗಿದೆ ಎಂದರು.

ನಂತರ ಶ್ರೀರಾಮಕೃಷ್ಣಾಚಾರ್ಯ ಗೋನವಾರ ಮಾತನಾಡಿ ಗುರುಗಳ ಮಹಿಮೆಗಳು ತಿಳಿಯಬೇಕಾದರೆ ಗುರುವಿನ ಗುಲಾಮನಾಗಬೇಕು ಅಂದಾಗ ಜೀವನದಲ್ಲಿ ನಿಜವಾದ ಜ್ಞಾನದ ಅರಿವಾಗುತ್ತದೆ ಎಂದರು. ಸತ್ಯಭಿರಾಜತೀರ್ಥರ ಸ್ತೋತ್ರ ನಿತ್ಯಪರಾಯಣ ಕೃತಿಯನ್ನು ಬಿಡುಗಡೆಗೊಳಿಸಲಾಯಿತು
ಬೆಳಿಗ್ಗೆ ಸುಪ್ರಭಾತ ದೇವರನಾಮಗಳು, ಅಷ್ಟೋತ್ತರ, ಪಂಚಾಮೃತ ಸೇವೆ ವಿಶೇಷ ಪುಷ್ಪಾಲಂಕಾರ ನೈವೇದ್ಯ ಹಸ್ತೋದಕ ಮಹಾಮಂಗಳರಾತಿ ಅರ್ಚಕರು ಮಠಾಧಿಕಾರಿಗಳಾದ ವೆಂಕಟಗಿರಿಯಾಚಾರ್ಯ ನೇತೃತ್ವದಲ್ಲಿ ಜರುಗಿದವು. ಹನುಮಂತರಾವ್ ನಿಡಶೇಷಿ ಕುಟುಂಬದವರು ಅನ್ನಸಂತರ್ಪಣೆ ಕಾರ್ಯಕ್ರಮ ನಡೆಸಿದರು.

ಈ ಸಂದರ್ಭದಲ್ಲಿ ಬ್ರಾಹ್ಮಣ ಸಮಾಜದ ಮುಖಂಡರಾದ ಎಂ,ಕೆ,ಗೌರಕರ್, ಸಮಿತಿಯ ಅಧ್ಯಕ್ಷರಾದ ಗುರುರಾಜ ಲಕ್ಕಂದಿನ್ನಿ, ವಸಿಷ್ಠಧಾಮ ಸಂಚಾಲಕ ಭೀಮಸೇನಾಚಾರ್ಯ ನವಲಿ, ದೇಸಾಯಿ ಕ್ಯಾಂಪನ ಅರ್ಚಕರಾದ ನಾರಾಯಣಾಚಾರ್ಯ ಇವರಿಗೆ ಶಾಲುಹೊದಿಸಿ ಸನ್ಮಾನಿಸಲಾಯಿತು.
ಗುರುರಾಜರಾವ್ ಆಲ್ದಾಳ್, ಅನೀಲಕುಮಾರ ಮಾಡಶಿರವಾರ, ಗೋಪಾಲಾಚಾರ್ಯ ವಕೀಲರು, ಪರಿಮಳಾಚಾರ್ಯ ಶಿಕ್ಷಕರು, ಕೃಷ್ಣಮೂರ್ತಿ ಪುರೋಹಿತ್, ನಾರಾಯಣಾಚಾರ್ಯ ಕನಸಾವಿ ಹಾಗೂ ಮಹಿಳಾ ಭಜನಾಮಂಡಳಿಯ ಸರ್ವಸದಸ್ಯರು ಉಪಸ್ಥಿತರಿದ್ದರು.

ವರದಿ: ಅವಿನಾಶ ದೇಶಪಾಂಡೆ ✍️

LEAVE A REPLY

Please enter your comment!
Please enter your name here