ಶ್ರದ್ಧೆ,ಸತತ ಪರಿಶ್ರಮದಿಂದ ಉಜ್ವಲ ಭವಿಷ್ಯ: ಸಿದ್ಧರಾಮ ಕಲ್ಮಠ್

0
191

ಕೊಟ್ಟೂರು :ಜೂನ್:26:-ವಿದ್ಯಾರ್ಥಿಗಳು ಉನ್ನತ ಆಕಾಂಕ್ಷೆಯನ್ನು ಇಟ್ಟುಕೊಂಡು ಸತತ ಪರಿಶ್ರಮ ಶ್ರದ್ಧೆಯಿಂದ ಅಭ್ಯಾಸ ಮಾಡಿದರೆ ಉತ್ತಮವಾದ ಸ್ಥಾನಗಳಿಗೆ ಏರಬಹುದು ಎಂದು ಕೊಟ್ಟೂರೇಶ್ವರ ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಸಿದ್ಧರಾಮ ಕಲ್ಮಠ್ ಅಭಿಪ್ರಾಯ ವ್ಯಕ್ತಪಡಿಸಿದರು. ಪಟ್ಟಣದ ಕೊಟ್ಟೂರೇಶ್ವರ ಕಾಲೇಜಿನಲ್ಲಿ ಹಳೆಯ ವಿದ್ಯಾರ್ಥಿಯಾದ ಅಲಬೂರು ಚಂದ್ರಶೇಖರ್ ಇವರು ನ್ಯಾಯಾಧೀಶರಾಗಿ ಆಯ್ಕೆಯಾದ ಪ್ರಯುಕ್ತ ಶನಿವಾರ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿ ವಿದ್ಯೆಯು ಸಕಲ ಸ್ಥಾನಮಾನ ಮತ್ತು ಗೌರವವನ್ನು ತಂದುಕೊಡುತ್ತದೆ ಎನ್ನುವುದಕ್ಕೆ ಚಂದ್ರಶೇಖರ್ ಅವರು ಉದಾಹರಣೆಯಾಗಿದ್ದಾರೆ. ಚಂದ್ರಶೇಖರ್ ರವರಂತೆ ಅನೇಕ ಜನ ಹೆಮ್ಮೆಯ ವಿದ್ಯಾರ್ಥಿಗಳು ನಮ್ಮ ಕಾಲೇಜಿನಲ್ಲಿ ಓದಿ ಉನ್ನತ ಮಟ್ಟದ ಅಧಿಕಾರಗಳಲ್ಲಿ ತಮ್ಮದೇಯಾದ ಛಾಪನ್ನು ಮೂಡಿಸಿದ್ದಾರೆ. ಇಂತಹ ವಿದ್ಯಾರ್ಥಿಗಳು ನಮ್ಮ ಕಾಲೇಜಿನಲ್ಲಿ ಓದುವ ಮೂಲಕ ಕಾಲೇಜಿನ ಕಳಶಪ್ರಾಯವಾಗಿದ್ದಾರೆ. ವಿದ್ಯಾರ್ಥಿಗಳು ಇಂತಹವರನ್ನು ಮಾದರಿಯಾಗಿ ಇಟ್ಟುಕೊಂಡು ನಿರಂತರ ಅಭ್ಯಾಸದಲ್ಲಿ ತೊಡಗಿ ಉಜ್ವಲ ಭವಿಷ್ಯ ಕಂಡುಕೊಳ್ಳುವುದರಲ್ಲಿ ಸಫಲರಾಗಬೇಕೆಂದು ಆಶಿಸಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಚಂದ್ರಶೇಖರ್ ಉಪನ್ಯಾಸಕರ ಪ್ರೋತ್ಸಾಹ ಹಾಗೂ ಪಾಲಕರ ಪ್ರೇರಣೆ ನನ್ನ ಸಾಧನೆಗೆ ಪ್ರಮುಖ ಕಾರಣವಾಯಿತು ಎಂದು ಸ್ಮರಿಸುವುದರೊಂದಿಗೆ ನೀವು ಸಹ ಸತತವಾಗಿ ಪರಿಶ್ರಮ ಪಟ್ಟರೆ ಉತ್ತಮ ಸ್ಥಾನಗಳಿಗೆ ಏರಲು ಸಹಾಯಕವಾಗುತ್ತದೆ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು. ಈ ಸಂದರ್ಭದಲ್ಲಿ ಪ್ರಾಂಶುಪಾಲ ಶಾಂತಮೂರ್ತಿ ಬಿ.ಕುಲಕರ್ಣಿ, ಉಪನ್ಯಾಸಕರಾದ ಕುಸುಮ ಸಜ್ಜನ್, ಬಿ.ಎಸ್.ಪಾಟೀಲ್ ಹಾಗೂ ಪಾಲಕ ಅಲಬೂರು ಪತ್ರೆಪ್ಪ ಮಾತನಾಡಿದರು. ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಎಂ.ಎಚ್.ಪ್ರಶಾಂತಕುಮಾರ್, ಆಡಳಿತ ಮಂಡಳಿ ಸದಸ್ಯರಾದ ಎಸ್.ಎಂ.ಗುರುಪ್ರಸಾದ್, ಅಡಿಕೆ ಮಂಜುನಾಥ್ ಉಪಸ್ಥಿತರಿದ್ದರು. ಉಪನ್ಯಾಸಕರಾದ ರವೀಂದ್ರಗೌಡ, ರವಿಕುಮಾರ್, ಸಿದ್ಧನಗೌಡ, ಶಾಂಭವಿ, ಕೆ.ಉಮೇಶ್, ಕೆ.ಎಂ.ಪ್ರಭಾಕರ್, ಮುಂತಾದವರು ಪಾಲ್ಗೊಂಡಿದ್ದರು. ವಿಜಯಲಕ್ಷ್ಮಿ ನಿರೂಪಿಸಿದರು, ಕೊಟ್ರೇಶ್ ಕೊಡಿಹಳ್ಳಿ ವಂದಿಸಿದರು.

ವರದಿ: ಶಿವರಾಜ್ ಕನ್ನಡಿಗ

LEAVE A REPLY

Please enter your comment!
Please enter your name here