ಕೋವಿಡ್-19 ರ ವಯಸ್ಕರ ಮುನ್ನೆಚ್ಚರಿಕೆ ಡೋಸ್ ಗೆ ಚಾಲನೆ

0
414

ಸಂಡೂರು:ಜುಲೈ15:-ತ್ತಾಲೂಕಿನಲ್ಲಿ 75 ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂಗವಾಗಿ ಕೇಂದ್ರ ಸರ್ಕಾರದ ಆದೇಶದನ್ವಯ ಜುಲೈ 15 ರಿಂದ ಮುಂದಿನ 75 ದಿನಗಳ ಕಾಲ ಹದಿನೆಂಟು ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಮುನ್ನೆಚ್ಚರಿಕೆ ಡೋಸ್ ಲಸಿಕೆ ನೀಡುವ ಉದ್ದೇಶದಿಂದ ತಾಲೂಕಿನ ತೋರಣಗಲ್ಲು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮುನ್ನೆಚ್ಚರಿಕೆ ಲಸಿಕಾಕರಣಕ್ಕೆ ಚಾಲನೆ ನೀಡಲಾಯಿತು,

ಯುವಕರು ಸಂಭ್ರಮದಿಂದ ಲಸಿಕೆ ಪಡೆದು ಕೋವಿಡ್ ವಿರುದ್ದ ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸಿ ಕೊಳ್ಳಲು ಅನುಕೂಲವಾಯಿತು, ಈ ಹಿಂದೆ 60 ವರ್ಷದ ಹಿರಿಯ ನಾಗರೀಕರಿಗೆ ಮಾತ್ರ ಉಚಿತವಾಗಿ ಲಸಿಕೆ ಪಡೆಯಲು ಅವಕಾಶ ಮಾಡಿ ಕೊಟ್ಟಿದ್ದರು ಈಗ ನಮಗೆ ಬೂಸ್ಟರ್ ಡೋಸ್ ಕೊಟ್ಟಿದ್ದು ಸಂಭ್ರಮ ತಂದಿದೆ, ಬೂಸ್ಟರ್ ಡೋಸ್ ಲಸಿಕೆ ಖಾಸಗಿ ಲಸಿಕಾಕರಣ ಕೇಂದ್ರಗಳಲ್ಲಿ ದೊರೆಯುತ್ತಿತ್ತಾದರೂ ಗುಣಮಟ್ಟದ ಲಸಿಕೆಯಾ ಎಂದು ಲಸಿಕೆ ಪಡೆದಿರಲಿಲ್ಲ, ಈಗ ಸರ್ಕಾರಿ ಲಸಿಕಾಕರಣ ಕೇಂದ್ರದಲ್ಲಿ ಉಚಿತವಾಗಿ ಲಸಿಕೆ ಪಡೆದದ್ದು ಸಂತೋಷವಾಯಿತು ಎಂದು ಫಲಾನುಭವಿಗಳು ಸಂತಸ ಹಂಚಿಕೊಂಡಿದ್ದಾರೆ.

ಈ ಸಂದರ್ಭದಲ್ಲಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ ಮಾತನಾಡಿ, ನಾಲ್ಕನೇ ಅಲೆ ಇಲ್ಲದಿದ್ದರೂ ದಿನ ದಿನೆ ಒಂದು ಎರಡು ಕೋವಿಡ್ ಪಾಸಿಟಿವ್ ಪ್ರಕರಣಗಳು ವರದಿಯಾಗುತಿದ್ದು ಸ್ವಲ್ಪ ಮಟ್ಟಿನ ಆತಂಕ ಇದೆ, ಈಗ ಪ್ರಿಕಾಷನ್ ಡೋಸ್ ನೀಡುತ್ತಿರುವುದು ಸರ್ಕಾರದ ಉತ್ತಮ ನಿರ್ಧಾರ ಎಂದು ತಿಳಿಸಿದರು,

ಈ ಸಂದರ್ಭದಲ್ಲಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ, ಫಾರ್ಮಸಿ ಅಧಿಕಾರಿ ಮಂಜುನಾಥ್, ನರ್ಸಿಂಗ್ ಅಧಿಕಾರಿ ಗೀತಾ,ರೇಷ್ಮಾ, ಚೈತ್ರ, ಬಸಮ್ಮ, ಇತರರು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here