ಬಾಲ್ಯ ವಿವಾಹ ತಡೆದು ಶಿಕ್ಷಣ ಕೊಡಿಸಲು ಜಿಲ್ಲಾ ರೋಟರಿ ಗೌರ್ನರ್ ಪಿ.ಹೆಚ್.ಎಫ್. ಕರೆ

0
136

ಹಾಯ್ ಸಂಡೂರ್ ನ್ಯೂಸ್. ಕರೋನಾ ಮಹಾಮಾರಿ ದೇಶದ ತುಂಬೆಲ್ಲಾ ಹರಡಿದ್ದು ಇದರ ಮದ್ಯದಲ್ಲಿ ಬಾಲ್ಯವಿವಾಹಗಳು ನಡೆಯುತ್ತಿವೆ ಅದನ್ನು ತಡೆದು ಶಿಕ್ಷಣ ನೀಡುವಂತಹ ಮಹತ್ತರ ಕಾರ್ಯವನ್ನು ಸಂಡೂರು ರೋಟರಿ ಘಟಕ ಮಾಡಬೇಕು ಎಂದು ಜಿಲ್ಲಾ ರೋಟರಿ ಗೌರ್ನರ್ ಪಿ.ಹೆಚ್.ಎಫ್. ವಿ.ತಿರುಪತಿನಾಯ್ಡು ಕರೆನೀಡಿದರು.
ಅವರು ಪಟ್ಟಣದ ರೋಟರಿ ಬಾಲಭವನದಲ್ಲಿ 2021-22ನೇ ಸಾಲಿಗೆ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ

ಇಂದು ಸಂಡೂರು ಘಟಕ ನೂತನ ಮಹಿಳಾ ಸದಸ್ಯೆಯನ್ನು ಆಯ್ಕೆಮಾಡಿದ್ದು ಬಹು ಉತ್ತಮಕೆಲಸವಾಗಿದೆ, ಅದ್ದರಿಂದ ಮಹಿಳೆಯರನ್ನು, ಬಾಲಕೀಯರನ್ನು ಗುರುತಿಸಿ ಹೆಚ್ಚು ಪ್ರೋತ್ಸಾಹಹ ಅತಿ ಅಗತ್ಯವಾಗಿದೆ, ಕಾರಣ ಅವರಿಗೆ ಶಿಕ್ಷಣ ನೀಡಿದಲ್ಲಿ ಇಡೀ ಕುಟುಂಬ ಶಿಕ್ಷಣ ಪಡೆದಂತಾಗುತ್ತದೆ ಅದ್ದರಿಂದ ಸಂಡೂರು ಘಟಕದಲ್ಲಿ ಹೆಚ್ಚು ಮಹಿಳೆಯರು ಸಕ್ರಿಯವಾಗಿರುವುದು ಸಂತಸದ ವಿಷಯವಾಗಿದೆ,

ಅಲ್ಲದೆ ಅಂತರಾಷ್ಟ್ರೀಯ ರೋಟರಿ ಸಂಸ್ಥೆಗೆ ಭಾರತೀಯರೇ ಅಧ್ಯಕ್ಷರಾಗಿ ಈ ಬಾರಿ ಆಯ್ಕೆಯಾಗಿದ್ದು ಹೆಮ್ಮೆಯ ಸಂಗತಿ, ಅದ್ದರಿಂದ ಸಂಡೂರು ಘಟಕಕ್ಕೆ ಅತಿ ಹೆಚ್ಚು ಹಣ ಬರುತ್ತದೆ ಅದ್ದರಿಂದ ಖಾಯಂ ಅದ ಜನ ಉಪಯೋಗಿ ಘಟಕವನ್ನು ಪ್ರಾರಂಭಿಸಿ, ನೂತನ ಬ್ಲಡ್ ಬ್ಯಾಂಕ್, ಕಣ್ಣಿನ ಅಸ್ಪತ್ರೆ, ಡಯಾಲಿಸಸ್, ಯಾವುದಾದರೂ ಒಂದನ್ನು ಪ್ರಾರಂಭಿಸಿದರೆ ಅದು ಜನತೆಗೆ ಬಹು ಉಪಯೋಗಿಯಾಗಿ ಸೇವೆ ಸಲ್ಲುತ್ತದೆ, ಅದ್ದರಿಂದ ಪ್ರತಿಯೊಬ್ಬರೂ ಇದರ ಕಡೆ ಲಕ್ಷ ವಹಿಸಿ,

ಸಂಡೂರು ಘಟಕದ ಮಂಜುನಾಥ ಅವರು ಕರೋನಾದಿಂದ ನಿಧನರಾಗಿದ್ದು ಬಹು ದು:ಖದ ಸಂಗತಿಯಾಗಿದೆ, ಹೀಗೆ ಹಲವಾರು ಘಟಕದಲ್ಲಿ ಸದಸ್ಯರುಗಳು ನಿದನರಾಗಿದ್ದು ಬಹು ದು:ಖ ಉಂಟುಮಾಡಿದೆ, ಅದರ ಮದ್ಯದಲ್ಲಿಯೇ ಸಂಡೂರು ಘಟಕ ಉತ್ತಮ ಸೇವೆ ಮಾಡಿದೆ, ಮಾಸ್ಕ, ಸ್ಯಾನಿಟೈಸರ್, ಜಾಗೃತಿ ಕಾರ್ಯಕ್ರಮ ಮಾಡಿದ್ದು ಉತ್ತಮ, ದೇಶದಲ್ಲಿ ಮಹಿಳೆಯರ ಸಾಕ್ಷರತೆ ಕಡಿಮೆ ಇದ್ದು ಅದು ಹೆಚ್ಚಿಸಲು ಕ್ರಮವಹಿಸಬೇಕು, ಅದಕ್ಕೆ ಬೇಕಾದ ಸೌಲಭ್ಯ ನೀಡಲಾಗುವುದು, ಈಗಾಗಲೇ ರಾಜ್ಯ ಸರ್ಕಾರದ ಜೊತೆಗೆ ಸೇರಿ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗೆ ಅದರಲ್ಲೂ ಗ್ರಾಮೀಣ ವಿದ್ಯಾರ್ಥಿಗಳಿಗೆ ಉತ್ತಮ ರೀತಿಯ ಪುಸ್ತಕ ಒದಗಿಸಿ, ಇದಕ್ಕೆ ಬೇಕಾದ ಹಣ ನೀಡಲಾಗುತ್ತದೆ, ಬಹಳಷ್ಟು ದಾನಿಗಳು ಇದ್ದಾರೆ ಎಂದರು.

ಈ ಸಂದರ್ಭದಲ್ಲಿ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಗೌರಿನಾಥ ಅವರು ಮಾತನಾಡಿ ಈ ಹಿಂದೆ ಮಾಡಿಕೊಂಡು ಬಂದಂತಹ ಎಲ್ಲಾ ಸೇವೆಗಳನ್ನು ಮುಂದುವರಿಸುವುದರ ಜೊತೆಗೆ ಬಾಕಿ ಇರುವ ಕಾರ್ಯಕ್ರಮಗಳನ್ನು ಮಾಡಲಾಗುವುದು, ಅಲ್ಲದೆ ಇನ್ನೂ ಹೆಚ್ಚಿನ ಸದಸ್ಯರನ್ನು ನಮ್ಮ ಘಟಕಕ್ಕೆ ತರಲಾಗುವುದು, ಅಲ್ಲದೆ ಮಕ್ಕಳಿಗೆ ಬೇಕಾದ ಶಿಕ್ಷಣ ಸೌಲಭ್ಯ, ಪೋಲಿಯೋ ಅಭಿಯಾನ, ಪರಿಸರ ರಕ್ಷಣೆ, ಉಚಿತ ಚಿಕಿತ್ಸಾ ಶಿಬಿರಗಳನ್ನು ಹಮ್ಮಿಕೊಳ್ಳುವ ಬಗ್ಗೆ ಮಾಹಿತಿ ನೀಡಿದರು.

ಪಿ.ಹೆಚ್.ಎಫ್. ರೂಪಾ ಯು ಲಾಡ್ ಅಧ್ಯಕ್ಷತೆ ವಹಿಸಿ ಮಾತನಾಡಿ ಮಹಿಳೆಯರನ್ನು ರೋಟರಿ ಸಂಸ್ಥೆ ಗುರುತಿಸಿದ್ದು ಹೆಮ್ಮೆಯ ಸಂಗತಿ, ಎಲ್ಲಾ ರಂಗದಲ್ಲಿ ಮಹಿಳೆ ಕಾರ್ಯನಿರ್ವಹಿಸುತ್ತಿದ್ದಾಳೆ, ಅವರಿಗೆ ಉತ್ತಮ ಶಿಕ್ಷಣ ನೀಡುವ ಮೂಲಕ ಉತ್ತಮ ಸ್ಥಾನಕ್ಕೆ ಹೋಗಲು ಸಾಧ್ಯ, ರೋಟರಿ ಸಂಸ್ಥೆಯು ಹೆಮ್ಮೆಯ ಸಂಸ್ಥೆ, ಇಡೀ ದೇಶದಲ್ಲಿ ಪೋಲಿಯೋ ಮುಕ್ತಮಾಡುವಲ್ಲಿ ಶ್ರಮವಹಿಸಿದೆ, ಅಲ್ಲದೆ ಅನೇಕ ಉಚಿತ ಶಿಬಿರಗಳ ಮೂಲಕ ಸಾರ್ವಜನಿಕರ ಆರೋಗ್ಯ ರಕ್ಷಣೆಗೆ ಕಾಳಜಿ ವಹಿಸುತ್ತಿದೆ ಇದೇ ರೀತಿಯ ಪ್ರೋತ್ಸಾಹ, ಬೆಂಬಲ ಮಹಿಳೆಯರಿಗೆ ಸಿಗಲಿ ಎಂದರು.

ಜಿಲ್ಲಾ ಸಹಾಯಕ ಗೌರ್ನರ್ ಟಿ. ಅಂಜಿನೇಯ ಅವರು ಮಾತನಾಡಿ ರೋಟರಿ ಸಂಸ್ಥೆ ಸೇವಾ ಮನೋಭಾವನೆಯಿಂದ ಪ್ರಾರಂಭಿಸಿದ್ದು, ಜಗತ್ತಿನ ಜ್ವಲಂತ ಸಮಸ್ಯೆ, ರೋಗಗಳ ನಿವಾರಣೆಗೆ ತನ್ನದೇ ಅದ ಕೊಡುಗೆಯನ್ನು ನೀಡುತ್ತಿದೆ, ಕರೋನಾ ಸಂದರ್ಭದಲ್ಲಿ ಪ್ರಧಾನಮಂತ್ರಿ ನಿಧಿಗೆ ಕೋಟ್ಯಾಂತರ ಹಣ ನೀಡಿದೆ, ಅದು ನೀವು ನೀಡಿದ ಹಣ, ಅದು ನಿಮಗೆ ಸಲ್ಲಿಸುವ ಕಾರ್ಯ ಮಾಡುತ್ತಿದೆ, ರೋಟರಿ ಸಂಸ್ಥೆ ಜಗತ್ತಿನ ಎಲ್ಲಾ ರಾಷ್ಟ್ರಿಗಳಿಗೆ ಹೋಲಿಸಿದಲ್ಲಿ ಭಾರತದಲ್ಲಿಯೂ ಸಹ ಉತ್ತಮ ಸೇವೆ ಸಲ್ಲಿಸುತ್ತಿದೆ ಎಂದರು.

ನೂತನ ಪದಾಧಿಕಾರಿಳಾಗಿ ಅಧ್ಯಕ್ಷರಾಗಿ ಸಿ.ಗೌರಿನಾಥ, ಕಾರ್ಯದರ್ಶಿಯಾಗಿ ಟಿ.ಜಿ.ಸುರೇಶ್‍ಗೌಡ, ಉಪಾಧ್ಯಕ್ಷರಾಗಿ ಫಾರೂಕ್ ಅಹ್ಮದ್, ಜಂಟಿ ಕಾರ್ಯದರ್ಶಿಯಾಗಿ ಕೊಟ್ರೇಶ್ ಅಂಕಮನಾಳ್, ಖಜಾಂಚಿಯಾಗಿ ಹೆಚ್.ಎಂ. ಶಿವಮೂರ್ತಿ, ಸಾರಜಂಟರ್ ಅಗಿ ಕೆ.ನಾಗರಾಜ, ನಿರ್ದೇಶಕರಾಗಿ ಕ್ಲಬ್ ಸರ್ವಿಸ್ ಎಂ.ವಿ. ಹಿರೇಮಠ, ಸಾಮಾಜಿಕ ಸೇವೆಗೆ ಡಾ. ಎಸ್.ಜೆ. ಗೋಪಾಲಕೃಷ್ಣ, ವಕೇಷನಲ್ ಸರ್ವಿಸ್ ಕೆ.ಶಿವಪ್ಪ, ಅಂತರಾಷ್ಟ್ರೀಯ ಸೇವೆ ಅರ್. ವೆಂಕಟರಮಣ, ಯೂವತ್ ಸೇವೆ ಡಾ. ಬ್ರಿಜೇಶ್, ಕೆ.ಎಂ. ಕೊಟ್ರಯ್ಯ, ಬಿ.ಶಿವಕುಮಾರ್, ಜೆ.ಎಂ. ಬಸವರಾಜ, ಛೆರ್ಮನ್ ಅಗಿ ಎಂ. ಮಾರುತಿರಾವ್,
ಡಾ.ಚೇತನ್ ಬ್ರಿಜೇಶ್, ಬಿ.ಅರ್. ಮಸೂತಿ, ಸಿ.ಕೆ.ವಿಶ್ವನಾಥ, ಎಂ.ಆಶಾಲತಾ, ಪಿ.ವಿ.ಪೈ, ಡಾ.ಪಿ.ಸಿ.ನಾಗನೂರು, ಹೆಚ್.ಈರಣ್ಣ, ರಾಜೇಂದ್ರಕುಮಾರ್ ಜೈನ್, ರೂಪಾ ಯು. ಲಾಡ್, ಡಿ.ಕೃಷ್ಣಪ್ಪ ಇವರುಗಳನ್ನು ಆಯ್ಕೆಮಾಡಲಾಯಿತು.

ಈ ಸಂದರ್ಭದಲ್ಲಿ ಜೆ.ಎಂ. ಬಸವರಾಜ ಪರಿಚಯಿಸಿದರು, ಬಿ.ಶಿವಕುಮಾರ್ ನಿರೂಪಿಸಿದರು, ಟಿ.ಜಿ. ಸುರೇಶ್ ಗೌಡ ವಂದಿಸಿದರು

LEAVE A REPLY

Please enter your comment!
Please enter your name here