ತೋರಣಗಲ್ಲು ಸರ್ಕಾರಿ ಪ್ರೌಢಶಾಲೆಯಲ್ಲಿ ಸದ್ಭಾವನಾ ದಿನ ಆಚರಣೆ

0
610

ಸಂಡೂರು: ಆ:18: ತೋರಣಗಲ್ಲು ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ “ಸದ್ಭಾವನಾ ದಿನ” ಆಚರಣೆ ಪ್ರಯುಕ್ತ ಪ್ರತಿಜ್ಞೆ ಕೈಗೊಂಡಿದ್ದು,

ತಾಲೂಕಿನ ತೋರಣಗಲ್ಲು ಸರ್ಕಾರಿ ಪ್ರೌಢಶಾಲೆಯಲ್ಲಿ ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಬಳ್ಳಾರಿ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ಆಯೋಜಿಸಲಾದ “ಸದ್ಭಾವನಾ ದಿನ” ಆಚರಣೆಯ ಕಾರ್ಯಕ್ರಮದಲ್ಲಿ ಪ್ರಭಾರಿ ಮುಖ್ಯ ಗುರುಗಳು ಅನಿಸ್ ಫಾತಿಮಾ ಅವರು ಮಾತನಾಡಿ ಪ್ರಬಲ ರಾಷ್ಟವಾಗಲು ಮಕ್ಕಳಿಗೆ ಸದ್ಭಾವನೆ,ಸೌಹಾರ್ದತೆ,ಶಾಂತಿ, ಏಕತೆ ಬಗ್ಗೆ ಅರಿವು ಮೂಡಿಸುಬೇಕಿದೆ ಎಂದು ನುಡಿದರು,

ಈ ಸಂದರ್ಭದಲ್ಲಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ ಮಾತನಾಡಿ ಆಗಸ್ಟ್ 20 ರಂದು ಮಾಜಿ ಪ್ರಧಾನ ಮಂತ್ರಿ ದಿ.ರಾಜೀವ್ ಗಾಂಧಿ ಅವರ ಜನ್ಮದಿನಾಚರಣೆ ಅಂಗವಾಗಿ ಇಂದು ಸದ್ಭಾವನಾ ದಿನವಾಗಿ ಆಚರಿಸಲಾಗುತ್ತದೆ, ತಮ್ಮ ಆಡಳಿತ ಅವಧಿಯಲ್ಲಿ ಸೌಹಾರ್ದತೆಗೆ ವಿಶೇಷ ವಾಗಿ ಶ್ರಮಿಸಿದ ಕಾರಣಕ್ಕೆ ಅವರಿಗೆ ಗೌರವ ನೀಡುವ ಸಲುವಾಗಿ ಸದ್ಭಾವನಾ ದಿನ ಅಚರಿಸಿ, ಜಾತಿ,ಧರ್ಮ,ಪ್ರದೇಶ,ಮತ,ಭಾಷೆ, ಬೇಧಭಾವವಿಲ್ಲದೇ ಸೌಹಾರ್ದತೆಯಿಂದ, ಸಮಾಲೋಚನೆ ಹಾಗೂ ಸಂವಿಧಾನಾತ್ಮಕವಾಗಿ ಶಾಂತಿಯಿಂದ ಎಲ್ಲರೂ ಬಾಳುವ ಹಾಗೆ ಅವಕಾಶ ಮಾಡಿಕೊಡಬೇಕು, ಎಂಬ ಕುರಿತು ಪ್ರತಿಜ್ಞೆ ಕೈಗೊಳ್ಳಲಾಯಿತು, ಪ್ರತಿಜ್ಞೆಯನ್ನು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ ಬೋಧಿಸಿದರು,

ಈ ಸಂದರ್ಭದಲ್ಲಿ ಆರ್.ಕೆ.ಎಸ್.ಕೆ ಕೌನ್ಸಿಲರ್ ಪ್ರಶಾಂತ್, ಶಾಲೆಯ ಪ್ರಭಾರಿ ಮುಖ್ಯ ಗುರುಗಳಾದ ಅನಿಸ್ ಫಾತಿಮಾ, ಸಹ ಶಿಕ್ಷಕರಾದ ಕೆ.ಎರ್ರಿಸ್ವಾಮಿ,ಈರಣ್ಣ, ಜಬೀಹುಲ್ಲಾ, ಶಾಂತಲಾ,ಸರೋಜಾ,ಸಾವಿತ್ರಿ, ಸುಹಾನ್ ನಾವೇದ್ ಇತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here