ಆಗಸ್ಟ್-23ಕ್ಕೆ ,ಅದ್ದೂರಿಯಾಗಿ ನಡೆಯಲಿದೆ ಗ್ರಾಮದೇವತೆ ಊರಮ್ಮನ ಗದ್ದಿಗಲಿಸುವ ಕಾರ್ಯಕ್ರಮ.

0
1032

ಕೊಟ್ಟೂರು:ಜುಲೈ:18:- ಪಟ್ಟಣದ ಗ್ರಾಮದೇವತೆ ಊರಮ್ಮ ದೇವಿಯನ್ನು ಹೊಳೆಗೆ ಹೊರಡಿಸುವ ಕಾರ್ಯಕ್ರಮವು ಆ-23ಕ್ಕೆ ಅದ್ದೂರಿಯಾಗಿ ನಡೆಯಲಿದೆ.

ಊರಮ್ಮ ದೇವಿಯ ಹೊಳೆಗೊಣಿಸುವ ( ಗದ್ದಿಗಲಿಸುವ) ಕಾರ್ಯಕ್ರಮ ಹಮ್ಮಿಕೊಳ್ಳುವ ನಿಮಿತ್ತ ಪೂರ್ವ ಭಾವಿಯಾಗಿ ಸೋಮವಾರ ದೇವಿಯ ಪ್ರಾಂಗಣದಲ್ಲಿ ಊರಿನ ದೈವದವರು ಸರ್ವ ಜನಾಂಗದವರು ಕೂಡಿ ಕರದೆ ಸಭೆಯಲ್ಲಿ ಪರಸ್ಪರರು ಸೌಹಾರ್ದಯುತವಾಗಿ ಚರ್ಚಿಸಿ ಒಮ್ಮತ ಅಭಿಪ್ರಾಯದೊಂದಿಗೆ ಆಗಸ್ಟ್-23 ಕ್ಕೆ ಕಾರ್ಯಕ್ರಮ ಅದ್ದೂರಿಯಾಗಿ ನಡೆಸಲು ತೀರ್ಮಾನಿಸಿದ್ದಾರೆ.

ಹೊಳೆಗೆ ಹೊರಡಿಸುವ ಮುನ್ನ ದೇವಿಯ ಕೇಲು ( ದೇವಿ ಪ್ರತಿ ರೂಪದಂತಿರುವ ಕುಂಭ) ಗೆ ಪೂಜೆ ಸಲ್ಲಿಸಿ ಆ-2 ರಿಂದ ಊರನ್ನು ಹಾಡಲು(ಸುತ್ತಲು) ಪ್ರಾರಂಭಿಸಬೇಕು ಎಂದು ಸರ್ವ ದೈವಸ್ಥರು ಅಭಿಪ್ರಾಯ ವ್ಯಕ್ತಪಡಿಸಿದ ಹಿನ್ನೆಲೆ ಆಗಸ್ಟ್- 2 ರಿಂದ ಊರಮ್ಮ ದೇವಿ ಕುಂಭದೊಂದಿಗೆ ಪೂಜಾರಿಗಳು ಸೇರಿದಂತೆ ಆಯಗಾರ ಬಳಗದವರು ಮತ್ತು ದೈವಸ್ಥರು ಹಿಂಬಾಲಿಸಲಿದ್ದಾರೆ .

ಆಗಸ್ಟ್ -23 ಕ್ಕೆ ನಡೆಯಲಿರುವ ಊರಮ್ಮದೇವಿಯ ಗದ್ದಿಗಲಿಸುವ ಕಾರ್ಯಕ್ರಮಕ್ಕೆ ಪಟ್ಟಣದ ಸಾರ್ವಜನಿಕರು ಸಹಕರಿಸಿ ದೇವಿಯ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಆಶಿರ್ವಾದ ಪಡೆದುಕೊಳ್ಳುವ ಮೂಲಕ ತಾಯಿಯ ಕೃಪೆಗೆ ಸರ್ವರು ಪಾತ್ರರಾಗಬೇಕೆಂದು ಊರಮ್ಮ ದೇವಿಯ ದೈವಸ್ಥರು ಕೋರಿದ್ದಾರೆ.

ವರದಿ: ಶಿವರಾಜ್ ಕನ್ನಡಿಗ

LEAVE A REPLY

Please enter your comment!
Please enter your name here