ಸಮಾಜಕಟ್ಟುವ ಕೆಲಸ ಪತ್ರಕರ್ತರಿಂದ ಆಗಬೇಕು ಹೊರತು ಸಮಾಜ ಒಡೆಯುವ ಕೆಲಸವಾಗಬಾರದು

0
154

ಹೊಸಪೇಟೆ:ಜುಲೈ:30: ಅನೇಕ ಒತ್ತಡಗಳ ನಡುವೆ ಕಾರ್ಯನಿರ್ವಹಿಸಿದರು ನಾವು ಮಾಡುತ್ತಿರುವ ಕಾರ್ಯವನ್ನು ಪತ್ರಕರ್ತರು ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿರುವ ಅಗತ್ಯವಿದೆ ಎಂದು ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಹೇಳಿದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತ ಸಂಘದ ವಿಜಯನಗರ ಜಿಲ್ಲಾ ಘಟಕ ಜಿಲ್ಲಾ ಮಟ್ಟದ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು ಅನೇಕ ವೈರುದ್ಯಗಳ ನಡುವೆ ಮಾದ್ಯಮಗಳ ಭರಟೆಯಲ್ಲಿ ನಿಖರವಾದ ಸುದ್ದಿಯನ್ನು ನೀಡುವುದು ಮುಖ್ಯವಾಗಿದೆ. ನಮ್ಮ ಮನೆಯನ್ನು ಸ್ವಚ್ಚಮಾಡುವ ಕೆಲಸಕ್ಕೆ ನಾವುಗಳೆ ಮುಂದಾಗಬೇಕು ಆ ಮೂಲಕ ನಮ್ಮ ವೃತ್ತಿಗೌರವ ಎತ್ತಿಹಿಡಿಯಬೇಕು,
ಸಮಾಜಕಟ್ಟುವ ಕೆಲಸ ಪತ್ರಕರ್ತರಿಂದ ಆಗಬೇಕು ಹೊರತು ಸಮಾಜ ಒಡೆಯುವ ಕೆಲಸವಾಗಬಾರದು ಎಂದು ಕಿವಿಮಾತನ್ನು ಹೇಳಿದರು. ನೂತನ ವಿಜಯನಗರ ಜಿಲ್ಲೆಯನ್ನು ಕಟ್ಟುವ ಕೆಲಸದಲ್ಲಿ ಜಿಲ್ಲೆಯ ಪತ್ರಕರ್ತರು ಶ್ರಮಿಸುವಂತಾಗಲಿ ಎಂದು ಹಾರೈಸಿದರು.

ಹಡಗಲಿ ಶಾಸಕ ಪಿ.ಟಿ.ಪರಮೇಶ್ವರ ನಾಯ್ಕ ಮಾತನಾಡಿ ಪತ್ರಕರ್ತರು ಸಮಾಜ ತಿದ್ದುವ ಅಧಿಕಾರದಲ್ಲಿರುವವರನ್ನು ಎಚ್ಚರಿಸುವ ಕಾರ್ಯವಾಗಬೇಕು ಎಂದರು.
ಕಾರ್ಯಕ್ರವನ್ನು ನಗರಸಭೆಯ ಅಧ್ಯಕ್ಷೆ ಸುಂಕಮ್ಮ ಉದ್ಘಾಟಿಸಿದರು, ಉಪಾಧ್ಯಕ್ಷ ಎಲ್.ಎಸ್ ಆನಂದ, ಸ್ಥಾಯಿ ಸಮಿತಿ ಅಧ್ಯಕ್ಷ ತಾರಿಹಳ್ಳಿ ಜಂಬೂನಾಥ, ರಾಜ್ಯ ಕಾರ್ಯದರ್ಶಿ ಸೋಮಶೇಖರ ಕೆರಗೋಡು, ಪಿ.ಸತ್ಯನಾರಾಯಣ ಅಧ್ಯಕ್ಷತೆ ವಹಿಸಿದರು.
ಎಸ್ ಎಸ್ ಎಲ್ ಸಿ ಮತ್ತು ಪಿ ಯು ಸಿಯಲ್ಲಿ ಉತ್ತಮ ಸಾಧನೆ ಮಾಡಿದ ಪತ್ರಕರ್ತರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.

ವಿಜಯನಗರದಲ್ಲಿ ಜಿಲ್ಲೆಯ ಎಲ್ಲಾ ತಾಲೂಕುಗಳ ಪದಾಧಿಕಾರಿಗಳಿಗೆ ಪ್ರತಿಜ್ಞಾವಿಧಿ ಬೋದಿಸಲಾಯಿತು.

ವರದಿ:-ಪಿ.ವಿ.ಕಾವ್ಯ

LEAVE A REPLY

Please enter your comment!
Please enter your name here