ಅಂಕಮನಾಳ್ ಗ್ರಾಮದಲ್ಲಿ ವಾಂತಿ ಬೇಧಿ ಕುರಿತು ಬೃಹತ್ ಜಾಗೃತಿ ಕಾರ್ಯಕ್ರಮ

0
620

ಸಂಡೂರು: ಆ:17: ವಾಂತಿ ಭೇದಿ ನಿಯಂತ್ರಣ ಕುರಿತು ಬೃಹತ್ ಜಾಗೃತಿ ಕಾರ್ಯಕ್ರಮ, ನಿಯಂತ್ರಣಕ್ಕೆ ಜನರ ಸಹಕಾರ ಇನ್ನೂ ಬೇಕಿದೆ: ಡಾ.ಕುಶಾಲ್ ರಾಜ್ ಮನವಿಯನ್ನು ಮಾಡಿಕೊಂಡರು

ತಾಲೂಕಿನ ಅಂಕಮನಾಳ್ ಗ್ರಾಮದಲ್ಲಿ ಸಂಡೂರು ತಾಲೂಕಿನ ಅಂಕಮನಹಾಳ ಗ್ರಾಮದಲ್ಲಿ ವಾಂತಿ ಬೇಧಿ ನಿಯಂತ್ರಣಕ್ಕಾಗಿ ಜಲಜೀವನ್‌ ಮತ್ತು ಸ್ವಚ್ಛ ಭಾರತ ಮೀಷನ್‌‌- ಜಿಲ್ಲಾ ಪಂಚಾಯತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಗ್ರಾಮ ಪಂಚಾಯತ ಕಾಳಂಗೇರಿ, ರವರ ಆಶ್ರಯದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹಕಾರದೊಂದಿಗೆ ತಾಲೂಕು ಆರೋಗ್ಯಾಧಿಕಾರಿಗಳ ಕಾರ್ಯಾಲಯ, ಮತ್ತು ಬಂಡ್ರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸಹಯೋಗದಲ್ಲಿ ಜಾಗೃತಿ ಜಾಥ ನಡೆಯಿತು,

ಈ ಸಂದರ್ಭದಲ್ಲಿ ಜಾಗೃತಿ ಜಾಥಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಕಳೆದ 12 ದಿನಗಳಿಂದ 183 ವಾಂತಿ ಭೇದಿ ಪ್ರಕರಣಗಳು ಕಂಡು ಬಂದಿದ್ದು, 179 ಪ್ರಕರಣಗಳು ಚಿಕಿತ್ಸಾ ಪಡೆದು ಗುಣಮುಖರಾಗಿದ್ದಾರೆ, ನಾಲ್ಕು ಜನ ಇನ್ನೂ ಚಿಕಿತ್ಸೆಯಲ್ಲಿ ಇದ್ದಾರೆ, ಪೂರ್ಣ ನಿಯಂತ್ರಣಕ್ಕೆ ಗ್ರಾಮದಲ್ಲಿ ಜಾಗೃತಿ ಜಾಥವನ್ನು ಹಮ್ಮಿಕೊಳ್ಳಲಾಗಿದೆ, ಹನ್ನೆರಡು ದಿನದಿಂದ ತಾತ್ಕಾಲಿಕ ಚಿಕಿತ್ಸಾ ಕೇಂದ್ರ ತೆರೆದು ಚಿಕಿತ್ಸಾ ನೀಡಲಾಗಿದ್ದು ಇನ್ನೂ ದಿನಾಲೂ ಒಂದು ಎರಡು ಪ್ರಕರಣಗಳು ಕಂಡು ಬರುತ್ತಿದ್ದು, ಒಟ್ಟಾರೆ ನಿಯಂತ್ರಣ ಹಂತದಲ್ಲಿದ್ದು, ತಾತ್ಕಾಲಿಕ ಶುದ್ಧವಾದ ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದು, ಚರಂಡಿ ಸ್ವಚ್ಛಗೊಳಿಸ ಲಾಗಿದೆ,ಶುದ್ಧನೀರಿನ ಘಟಕ ಪುನಃ ಪ್ರಾರಂಭಿಸಲಾಗಿದೆ, ದಿನದ 24 ಗಂಟೆ ಕಾಲ ಮೂರು ಎಮ್.ಎಮ್.ಯು ಮತ್ತು ಆಂಬ್ಯುಲೆನ್ಸ್ ಕರ್ತವ್ಯ ನಿರ್ವಹಿಸುತ್ತಿದ್ದು ಜನರಿಗೆ ಎಲ್ಲಾ ತುರ್ತು ಔಷದಿಗಳೊಂದಿಗೆ ಸೇವೆಗಳನ್ನು ನೀಡುತಿದ್ದು, ಗ್ರಾಮದ ಓಣಿಗಳಲ್ಲಿ ಸಂಚರಿಸಿ ಜನಜಾಗೃತಿ ನೀಡಲಾಯಿತು,

ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ್ ದಾಸಪ್ಪನವರ್ ಮಾತನಾಡಿ ಸಂಪೂರ್ಣ ನಿಯಂತ್ರಣಕ್ಕೆ ಜನರ ಸಹಕಾರ ಇನ್ನೂ ಬೇಕಿದೆ, ಕಾಯ್ದು ಆರಿಸಿದ ನೀರು ಸೇವನೆ ಮಾಡುವುದು, ಗೃಹ ಶೌಚಾಲಯ ಬಳಸುವುದು, ಊಟಕ್ಕಿಂತ ಮುಂಚೆ, ಶೌಚಾಲಯಕ್ಕೆ ಹೋಗಿ ಬಂದ ನಂತರ, ಮಕ್ಕಳಿಗೆ ಎದೆಹಾಲು ನೀಡುವಾಗ, ಆಹಾರ ಕೊಡವಾಗ ಸ್ವಚ್ಛವಾಗಿ ಕೈಗಳನ್ನು ತೊಳೆಯುದು, ಬಿಸಿ ಬಿಸಿ ಆಹಾರ ಸೇವನೆ ಮಾಡುವುದು, ಆಹಾರವನ್ನು ಮುಚ್ಚಿಡುವುದು, ಕುಡಿಯುವ ನೀರಿಗೆ ಹಾಲೋಜೆನ್ ಹಾಕಿ ಎರಡು ಗಂಟೆ ನಂತರ ಕುಡಿಯಲು ಬಳಸುವುದು ಮುಂದುವರೆಸಬೇಕು ಎಂಬುದರ ಕುರಿತು ಜಾಥ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ ಜನರ ಸಹಕಾರದಿಂದ ಪೂರ್ಣ ನಿಯಂತ್ರಣ ಮಾಡಲಿದ್ದೇವೆ ಎಂದು ತಿಳಿಸಿದರು,

ಈ ಸಂದರ್ಭದಲ್ಲಿ ತಾಲೂಕು ಆರೋಗ್ಯಾಧಿಕಾರಿ ಕುಶಾಲ್ ರಾಜ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ್ ದಾಸಪ್ಪನವರ್, ಡಾ.ಭರತ್ ಕುಮಾರ್, ಡಾ.ಚಂದ್ರಪ್ಪ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ, ಜಿಲ್ಲಾ ಪಂಚಾಯತ್ ಗ್ರಾಮೀಣ ನೀರು ನೈರ್ಮಲ್ಯ ವಿಭಾಗದ ಯ.ಎಸ್.ಆರ್.ಎ ಸಿಬ್ಬಂದಿ ಕೊಟ್ರೇಶ್, ಮಂಜುಳಾ, ಹಿ.ಆ. ಸುರಕ್ಷಣಾಧಿಕಾರಿ ಪದ್ಮಾವತಿ, ಬಂಡೆ ಗೌಡ, ಈರಣ್ಣ, ಧರಣಿ, ಪಿ.ಡಿ.ಓ ಶ್ರೀಕಾಂತ್, ಗ್ರಾಮದ ಮುಖಂಡ ಕುಮಾರಸ್ವಾಮಿ, ಸಣ್ಣಮಾರೆಪ್ಪ,ಶೇಕರಪ್ಪ, ಎಸ್.ಡಿ.ಎಮ್.ಸಿ ಅಧ್ಯಕ್ಷ ಶೇಕರಪ್ಪ,ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪ್ರಭಾರಿ ಮುಖ್ಯ ಗುರುಗಳಾದ ಗೀತಾ,ಸಹಶಿಕ್ಷಕರಾದ ಲತಾ,ಶಿವಣ್ಣ,ಶೇಕರ್ ಗೌಡ, ರಾಘವೇಂದ್ರ, ಸಿ.ಹೆಚ್.ಒ ಹನುಮಂತಪ್ಪ,ದಿವ್ಯಾ, ಎಮ್.ಎಮ್.ಯು ಟೀಮ್ ನ ಡಾ.ರಾಘವೇಂದ್ರ, ವರವೇಶ್, ವಿಮಲಾಕ್ಷಿ, ಶುಶ್ಮಾ,ನಂದಿನಿ, ಆಶಾ ಕಾರ್ಯಕರ್ತೆ ಶಿಲ್ಪಾ,ವೀಣಾ, ದೇವಿಕುಮಾರಿ,ಉಮಾ ದೇವಿ, ಸುನಂದ, ವಿಮಲಾಕ್ಷಿ ಇತರರು ಭಾಗವಹಿಸಿದ್ದರು

LEAVE A REPLY

Please enter your comment!
Please enter your name here