ವಿಧಾನಪರಿಷತ್ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ:ರಾಜಕೀಯ ಪಕ್ಷಗಳೊಂದಿಗೆ ಸಭೆ, ಸುಸೂತ್ರ ವಿಧಾನಪರಿಷತ್ ‌ಚುನಾವಣೆಗೆ ಸಹಕರಿಸಿ: ಜಿಲ್ಲಾಧಿಕಾರಿ ಮಾಲಪಾಟಿ

0
71

ಬಳ್ಳಾರಿ, ನ.13;: ಕರ್ನಾಟಕ ವಿಧಾನಪರಿಷತ್ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ನಿಮಿತ್ತ ಜಿಲ್ಲಾ ಚುನಾವಣಾಧಿಕಾರಿಗಳಾದ ಜಿಲ್ಲಾಧಿಕಾರಿ ಪವನಕುಮಾರ ಮಾಲಪಾಟಿ ಅವರು ವಿವಿಧ ರಾಜಕೀಯ ಪಕ್ಷಗಳ ಮುಖಂಡರೊಂದಿಗೆ ಶನಿವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸಭೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಡಿಸಿ ಮಾಲಪಾಟಿ ಅವರು ಜಿಲ್ಲೆಯಲ್ಲಿ ವಿಧಾನಪರಿಷತ್ ಚುನಾವಣೆ ಸುಸೂತ್ರವಾಗಿ ಜರುಗುವ ನಿಟ್ಟಿನಲ್ಲಿ ತಮ್ಮೆಲ್ಲರ ಸಹಕಾರ ಅಗತ್ಯವಾಗಿದೆ ಎಂದರು.
ಚುನಾವಣೆ ಅಧಿಸೂಚನೆಯಿಂದಿಡುದ ನಾಮಪತ್ರಗಳ ಸಲ್ಲಿಕೆ,ಪರಿಶೀಲನೆ, ನಾಮಪತ್ರಗಳ ಹಿಂಪಡೆಯುವಿಕೆ,ಮತದಾನ, ಚುನಾವಣಾ ಮತ ಎಣಿಕೆ ಕುರಿತು ರಾಜಕೀಯ ಪಕ್ಷಗಳ ಮುಖಂಡರಿಗೆ ವಿವರಿಸಿದರು.
ಜಿಲ್ಲೆಯಲ್ಲಿ ಈಗಾಗಲೇ ಕರಡು ಮತದಾರರ ಪಟ್ಟಿ ಪ್ರಕಟಿಸಲಾಗಿದ್ದು,ಆಕ್ಷೇಪಣೆಗಳಿದ್ದಲ್ಲಿ ಇದೇ 18ರೊಳಗೆ ಸಲ್ಲಿಸಬಹುದಾಗಿದೆ ಎಂದು ತಿಳಿಸಿದ ಜಿಲ್ಲಾಧಿಕಾರಿ ಪವನಕುಮಾರ್ ಮಾಲಪಾಟಿ ಅವರು ಕರಡು ಮತದಾರರ ಪಟ್ಟಿಯ ಪ್ರತಿಯನ್ನು ಎಲ್ಲ ಪಕ್ಷಗಳ ಮುಖಂಡರಿಗೆ ಸಭೆಯಲ್ಲಿ ವಿತರಿಸಿದರು.
ಕರಡು ಮತಗಟ್ಟೆಗಳ ಬಗ್ಗೆ ವಿವರಿಸಿದ ಡಿಸಿ ಮಾಲಪಾಟಿ ಅವರು ಅವಳಿ ಜಿಲ್ಲೆಯಲ್ಲಿರುವ ಎಲ್ಲ‌ ಗ್ರಾಪಂಗಳಲ್ಲಿ ಮತಗಟ್ಟೆಗಳು ಸ್ಥಾಪಿಸಲಾಗುತ್ತಿದೆ. ನಗರ ಸ್ಥಳೀಯ ಸಂಸ್ಥೆಗಳ ಕಚೇರಿಗಳಲ್ಲಿ, ಬಳ್ಳಾರಿ ಮಹಾನಗರ ಪಾಲಿಕೆ ವ್ಯಾಪ್ತಿಯದ್ದು ಬಳ್ಳಾರಿ ಜಿಪಂನಲ್ಲಿ ಮತಗಟ್ಟೆ ಸ್ಥಾಪಿಸಲಾಗುತ್ತಿದೆ;ಬಳ್ಳಾರಿ ನಗರ,ಬಳ್ಳಾರಿ ಗ್ರಾಮೀಣ ಶಾಸಕರಿಗೆ ಹಾಗೂ ಲೋಕಸಭಾ ಸದಸ್ಯರು ಮತ್ತು ರಾಜ್ಯಸಭಾ ಸದಸ್ಯರಿಬ್ಬರೂ ಕೂಡ ಬಳ್ಳಾರಿ ಜಿಪಂನ ಮತಗಟ್ಟೆಯಲ್ಲಿಯ ಮತದಾರರ ಪಟ್ಟಿಯಲ್ಲಿಯೇ ಹೆಸರಿರಲಿದೆ ಎಂದರು.
ಈಗಾಗಲೇ ಮಾದರಿ ನೀತಿ ಸಂಹಿತೆ ‌ಜಾರಿಯಲ್ಲಿದ್ದು,ಅದನ್ನು ನಿಯಮಾನುಸಾರ ಎಲ್ಲರೂ ಪಾಲಿಸುವಂತೆ ತಿಳಿಸಿದರು.
ಚುನಾಚಣೆಗೆ ಸಂಬಂಧಿಸಿದಂತೆ ಇನ್ನೀತರ ವಿಷಯಗಳ ಕುರಿತು ಸಭೆಯಲ್ಲಿ ಸುಧೀರ್ಘವಾಗಿ ಚರ್ಚಿಸಲಾಯಿತು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಪಿ.ಎಸ್.ಮಂಜುನಾಥ, ಜಿಲ್ಲಾಧಿಕಾರಿ ಕಚೇರಿಯ ‌ಚುನಾವಣಾ ಶಾಖೆಯ ಸಿಬ್ಬಂದಿ ಮತ್ತು ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಇದ್ದರು.

LEAVE A REPLY

Please enter your comment!
Please enter your name here