ಹಗರಿಬೊಮ್ಮನಹಳ್ಳಿ ಗಣಪತಿ ಶಾಂತಿ ಸಭೆ; ಡಿಜೆಗೆ ಯುವಕರಿಂದ ಹೆಚ್ಚಿದ ಬೇಡಿಕೆ,ಎರಡು ಸ್ಪೀಕರ್, ಒಂದು ಬೇಸ್ ಡಿಜೆಗೆ ಅವಕಾಶ ಡಿವೈಎಸ್ಪಿ ಹರೀಶರೆಡ್ಡಿ.

0
525

-ಹುಳ್ಳಿಪ್ರಕಾಶ, ಹಿರಿಯ ಪತ್ರಕರ್ತರು

ಹಗರಿಬೊಮ್ಮನಹಳ್ಳಿ, ಆ,23
ಎರಡು ವರ್ಷದ ನಂತರ ಈ ಸಲ ಗಣಪತಿ ಹಬ್ಬವನ್ನು ಆಚರಣೆ ಮಾಡುತ್ತೇವೆ. ವಿಸರ್ಜನೆ ದಿನ ದಂದು ಡಿಜೆ ಮ್ಯೂಸಿಕ್ ವ್ಯವಸ್ಥೆಗೆ ಅವಕಾಶ ಕಲ್ಪಿಸಬೇಕೆಂದು ಹಗರಿಬೊಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ಸೋಮವಾರ ಸಂಜೆ ಕರೆದಿದ್ದ ಗಣಪತಿ ಹಬ್ಬದ ಶಾಂತಿ ಸಭೆಯಲ್ಲಿ ಭಾಗವಹಿಸಿದ್ದ ನೂರಾರು ಯುವಕರಿಂದ ಒಕ್ಕೂರಲಿನಿಂದ ಆಗ್ರಹ ವ್ಯಕ್ತವಾಯ್ತು.

ಎರಡು ಸ್ಪೀಕರ್ ಒಂದು ಬೇಸಿನ ಡಿಜೆಗೆ ಪರವಾನಿಗೆ ನೀಡುತ್ತೇವೆ. ನಿಮ್ಮ ಬೇಡಿಕೆಯನ್ನು ಮೇಲಾಧಿಕಾರಿಗಳ ಗಮನಕ್ಕೆ ತರುತ್ತೇನೆ. ಪರವಾನಿಗೆ ಸಿಕ್ಕರೆ ಅವಕಾಶ ಮಾಡಿಕೊಡುತ್ತೇನೆ. ಎಲ್ಲರೂ ಇಲಾಖೆಯೊಂದಿಗೆ ಸಹಕಾರ ಕೊಟ್ಟು, ಗಣಪತಿ ಹಬ್ಬದ ಯಶಸ್ವಿಗೆ ಶ್ರಮಿಸೋಣ ಎಂದು ಕೂಡ್ಲಿಗಿ ವೃತ್ತದ ಡಿವೈಎಸ್ಪಿ ಹರೀಶರೆಡ್ಡಿಯವರು ಸಭೆಯಲ್ಲಿ ಮಾನವಿ ಮಾಡಿಕೊಂಡರು.

ಸೋಮವಾರ ಸಂಜೆ ಹಗರಿಬೊಮ್ಮನಹಳ್ಳಿ ಪಟ್ಟಣ ಪೊಲೀಸ್ ಠಾಣೆಯಲ್ಲಿ ಗಣಪತಿ ಹಬ್ಬದ ನಿಮಿತ್ತ ಕರೆದಿದ್ದ ಶಾಂತಿ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು

ಡಿಜೆ ಮ್ಯೂಸಿಕ್ ಗೆ ಪರವಾನಿಗೆ ನೀಡುವ ವ್ಯವಸ್ಥೆ ಇಡೀ ಜಿಲ್ಲೆಯಲ್ಲಿ ಒಂದೇ ತರಹನೇ ಇರುತ್ತೆ. ಹೊಸಪೇಟೆಯಲ್ಲಿ ಒಂದು, ಹಗರಿಬೊಮ್ಮನಹಳ್ಳಿ, ಕೂಡ್ಲಿಗಿಯಲ್ಲಿ ಇನ್ನೊಂದು ತರಹ ವ್ಯವಸ್ಥೆ ಇರಲ್ಲ ಎಂದು ಕೂಡ್ಲಿಗಿ ವೃತ್ತ ಡಿವೈಎಸ್ಪಿ ಹರೀಶ್ ರೆಡ್ಡಿ ಸ್ಪಷ್ಟಪಡಿಸಿದರು.

ಭಯ ಮತ್ತು ಭಕ್ತಿ ಎರಡು ಒಂದೇ ನಾಣ್ಯದ ಎರಡು ಮುಖವಿದ್ದಂತೆ. ಉತ್ಸವ ಅತಿರೇಕವಾಗಬಾರದು. ಉತ್ಸವದ ಹೆಸರಿನಲ್ಲಿ ಅನಾಹುತಗಳಾಗದಂತೆ ಹಿರಿಯರು ಮುಂಜಾಗ್ರತೆವಹಿಸುವ ಮೂಲಕ ಹಬ್ಬ ಸುಗಮವಾಗಿ ಆಚರಣೆಗೊಳ್ಳಲು ಎಲ್ಲರೂ ಇಲಾಖೆಯೊಂದಿಗೆ ಸಹಕಾರಿಸಬೇಕೆಂದು ಕೂಡ್ಲಿಗಿ ವೃತ್ತದ ಡಿವೈಎಸ್ಪಿ ಹರೀಶ್ ರೆಡ್ಡಿಯವರು ಸಭೆಯಲ್ಲಿ ಮನವಿ ಮಾಡಿಕೊಂಡರು.

ಗಣಪತಿ ವಿಸರ್ಜನೆ ಮಾಡುವ ನದಿ,ಹಳ್ಳ, ಕೊಳ್ಳ, ಕೆರೆ,ಡ್ಯಾಂ ಬಳಿ ನುರಿತ ಈಜುಗಾರರನ್ನು ನೇಮಿಸಿಕೊಂಡು ಮುಂಜಾಗ್ರತಾ ಕ್ರಮವಹಿಸಲು ಕ್ರಮವಹಿಸುತ್ತೇವೆ. ಗಣಪತಿ ಹಬ್ಬದ ಪರವಾನಿಗೆ ನೀಡಲು ಪೊಲೀಸ್ ಠಾಣೆಯಲ್ಲಿಯೇ ಸಿಂಗಲ್ ವಿಂಡೋ ಮೂಲಕ ಕೊಡುವ ವ್ಯವಸ್ಥೆಯನ್ನು ಮಾಡುವ ಮೂಲಕ ಕಚೇರಿ ಯಿಂದ ಕಚೇರಿಗೆ ಆಲೆದಾಡುವುದನ್ನು ತಪ್ಪಿಸಲು ಇಲಾಖೆ ಕ್ರಮವಹಿಸುತ್ತಿದೆ ಎಂದರು.

ಸರ್ಕಲ್ ಇನ್ಸ್ ಪೆಕ್ಟರ್ ಟಿ.ಮಂಜಣ್ಣ, ಪಿಎಸ್ಐ ಶ್ರೀಮತಿ ಸರಳಾ, ಕಲೋಇ ಎಇಇ ಪುರುಷೋತ್ತಮ, ಪುರಸಭೆ ಸಿಇಓ ಎಂಕೆ.ಮುಗುಳಿ, ಜಯಲಕ್ಷ್ಮಿ ಕುರಿ, ಜೆಸ್ಕಾಂ ಎಸ್ಓ ಪಕ್ಕಿರಪ್ಪ,
ಪುರಸಭೆ ಸದಸ್ಯರಾದ ಮರಿರಾಮಪ್ಪ, ವಿ.ನವಿನ್ ಕುಮಾರ್,ಜೋಗಿ ಹನುಮಂತಪ್ಪ, ಬ್ಯಾಡಗಿ ರಾಜೇಶ್, ಗಣೇಶನಾಯ್ಕ್, ಗಣಪತಿ ಪ್ರತಿಷ್ಠಾಪನೆಯ ಮುಖಂಡರಾದ ಸಂಪತ್ ಕುಮಾರ್, ಕನ್ನಿಹಳ್ಳಿ ಚಂದ್ರಶೇಖರ, ಕೆಜಿಎನ್ ಅಲ್ಲಾಭಕ್ಷಿ, ಪೂಜಾರಿ ಸಿದ್ದಪ್ಪ, ಚಿಂತ್ರಪಳ್ಳಿ ನಾಗರಾಜ, ಪೂಜಾರ ಸಂತೋಷ್, ಕೆ.ಹಾಲೇಶ, ಪೂಜಾರ್ ಆನಂದ್ ಸೇರಿದಂತೆ ಹಲವರು ಶಾಂತಿ ಸಭೆಯಲ್ಲಿ ಭಾಗವಹಿಸಿದ್ದರು. ತಾಲೂಕಿನ ವಿವಿಧ ಗ್ರಾಮಗಳಿಂದ ಸಂಘ,ಸಂಸ್ಥೆಗಳ ಪಧಾಧಿಕಾರಿಗಳು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here